ಐಸಿಸಿ ಮಹಿಳಾ ಅಂಡರ್ 19 ಟಿ20 ವಿಶ್ವಕಪ್ನ (U19 T20 World Cup) ಚೊಚ್ಚಲ ಆವೃತ್ತಿಯಲ್ಲೇ ಗೆದ್ದು ಭಾರತ ಮಹಿಳಾ ಅಂಡರ್ 19 ತಂಡ (Indian women U-19 team) ಐತಿಹಾಸಿಕ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ಗೆ ಮಣ್ಣುಮುಕ್ಕಿಸಿದ ಶಫಾಲಿ ವರ್ಮಾ ನೇತೃತ್ವದ ಭಾರತ ತಂಡ ಏಳು ವಿಕೆಟ್ಗಳಿಂದ ಗೆದ್ದು ಬೀಗಿತು. ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಮಿಂಚಿದ ಟೀಮ್ ಇಂಡಿಯಾ ಕಿರಿಯರು ಅಮೋಘ ಪ್ರದರ್ಶನ ತೋರಿದರು. ಪಂದ್ಯವನ್ನು ಗೆದ್ದು ಪ್ರಶಸ್ತಿ ಎತ್ತಿ ಹಿಡಿದಾಗ ಭಾರತೀಯ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ನಾಯಕಿ ಶಫಾಲಿ (Shafali Verma) ಸಂತಸದಲ್ಲಿ ಕಣ್ಣೀರಿಟ್ಟ ಘಟನೆ ಕೂಡ ನಡೆಯಿತು. ಬಳಿಕ ಇತರೆ ಪ್ಲೇಯರ್ಸ್ ಮೈದಾನದಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ.
ಟೀಮ್ ಇಂಡಿಯಾ ಪ್ಲೇಯರ್ಸ್ ಬಾಲಿವುಡ್ನ ಪ್ರಸಿದ್ಧ ”ಕಾಲಾ ಚಶ್ಮಾ” ಹಾಡಿಗೆ ಗ್ರೌಂಡ್ನಲ್ಲೇ ನೃತ್ಯ ಮಾಡಿ ವಿಶೇಷವಾಗಿ ಸಂಭ್ರಮ ಪಟ್ಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಇದರ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಆಟಗಾರರು ಮೆಡಲ್ ಜೊತೆಗೆಯೇ ಸ್ಟೆಪ್ ಹಾಕಿದ್ದು ವಿಶೇಷವಾಗಿತ್ತು. ಈ ವಿಡಿಯೋಕ್ಕೆ 8 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. 3000 ಕ್ಕೂ ಅಧಿಕ ಕಮೆಂಟ್ಗಳು ಬಂದಿದೆ. ಇಲ್ಲಿದೆ ಆ ವೈರಲ್ ವಿಡಿಯೋ.
India vs New Zealand 2nd T20: ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಭಾರತ
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ಅಂಡರ್ 19 ತಂಡ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. 50 ರನ್ಗೂ ಮೊದಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 68 ರನ್ಗೆ ಸರ್ವಪತನ ಕಂಡಿತು. ತಂಡದ ಪರ ರಯಾನಾ ಮ್ಯಾಕ್ಡೊನಾಲ್ಡ್ ಗೇ 19 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಭಾರತ ಪರ ಟಿಟಾಸ್ ಸಧು, ಅರ್ಚನಾ ದೇವಿ ಹಾಗೂ ಪರ್ಶವಿ ಚೋಪ್ರಾ ತಲಾ 2 ವಿಕೆಟ್ ಪಡೆದರು.
69 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತದ ವನಿತೆಯರು ಆರಂಭಿಕ ನಷ್ಟ ಅನುಭವಿಸಿದರು. ಉತ್ತಮ ಫಾರ್ಮ್ನಲ್ಲಿದ್ದು ಸೆಮಿಸ್ನಲ್ಲಿ ತಂಡಕ್ಕೆ ಆಸರೆ ಆಗಿದ್ದ ಶ್ವೇತಾ ಸೆಹ್ರಾವತ್ 5 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ನಂತರ ಬಂದ ಸೌಮ್ಯ ತಿವಾರಿ ಮತ್ತು ಆರಂಭಿಕರಾಗಿ ಬಂದಿದ್ದ ನಾಯಕಿ ಶೆಫಾಲಿ ವರ್ಮಾ ಅವರ ಜೊತೆ ಇನ್ನಿಂಗ್ಸ್ ಕಟ್ಟಿದರು. ತಂಡದ ಮೊತ್ತ 20 ರನ್ ಆಗಿದ್ದಾಗ ನಾಯಕಿ ಕ್ಯಾಚ್ ಔಟ್ ಆಗಿ ಪೆವಿಲಿಯನ್ಗೆ ಮರಳಿರು. ನಂತರ ಗೊಂಗಡಿ ತ್ರಿಶಾ ಮತ್ತು ತಿವಾರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಗೆಲುವಿಗೆ ಎರಡು ರನ್ ಬಾಕಿ ಇರುವಾಗ ತ್ರಿಶಾ (24) ವಿಕೆಟ್ ಕಳೆದುಕೊಂಡರು. ಸೌಮ್ಯ (24) ಅವರು ಅಜೇಯರಾಗಿ ತಂಡಕ್ಕೆ ಗೆಲುವು ತಂದಿತ್ತರು. ಭಾರತ 14 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ಜಯ ಸಾಧಿಸಿತು.
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಇತಿಹಾಸ ರಚಿಸಿದ ಬೆನ್ನಲ್ಲೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು 19 ವರ್ಷದೊಳಗಿನ ಮಹಿಳೆಯರ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಾ, ”ಭಾರತೀಯ ಮಹಿಳಾ ಕ್ರಿಕೆಟ್ ಮುನ್ನುಗ್ಗುತ್ತಿದೆ. ಈ ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್‌ನ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಈ ಸಂತೋಷದ ಘಳಿಗೆಯಲ್ಲಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿಯನ್ನು ಘೋಷಿಸುತ್ತಿರುವುದು ಸಂತೋಷದಾಯಕ ವಿಷಯ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್ ವಿಜೇತ ತಂಡವನ್ನು ಭಾರತ-ನ್ಯೂಜಿಲೆಂಡ್ ನಡುವಣ 3ನೇ ಟಿ20 ಪಂದ್ಯದ ವೇಳೆ ಗೌರವಿಸಲಾಗುವುದು,” ಎಂದು ತಿಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ