Boxing Day Test: ಭಾರತ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್​ ಅನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯುವುದೇಕೆ?

| Updated By: Vinay Bhat

Updated on: Dec 25, 2021 | 8:22 AM

India vs South Africa 1st Test: ಭಾನುವಾರದಿಂದ ಆರಂಭವಾಗಲಿರುವ ಭಾರತ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಎಂದೂ ಕರೆಯಲಾಗುತ್ತದೆ. ಈರೀತಿ ಕರೆಯಲು ಕಾರಣವೇನು?. ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

Boxing Day Test: ಭಾರತ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್​ ಅನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯುವುದೇಕೆ?
IND vs SA
Follow us on

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ (India vs South Africa) ಪ್ರವಾಸ ನಾಳೆಯಿಂದ (ಡಿ. 26) ಅಧಿಕೃತವಾಗಿ ಆರಂಭವಾಗಲಿದೆ. ಸೂಪರ್‌ಸ್ಪೋರ್ಟ್‌ ಪಾರ್ಕ್​ನಲ್ಲಿ ಮೊದಲ ಟೆಸ್ಟ್ (1st Test) ಪಂದ್ಯ ಶುರುವಾಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಅನೇಕ ಕಾರಣಗಳಿಂದ ಈ ಟೆಸ್ಟ್ ಸರಣಿ ಭಾರತಕ್ಕೆ ಮುಖ್ಯವಾಗಿದೆ. ಪ್ರಮುಖವಾಗಿ ಹರಿಣಗಳ ನಾಡಿನಲ್ಲಿ ಟೀಮ್ ಇಂಡಿಯಾ (Team India) ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಐತಿಹಾಸಿಕ ಸಾಧನೆ ಮಾಡುವತ್ತ ಕೊಹ್ಲಿ (Virat Kohli) ಪಡೆ ಚಿತ್ತ ನೆಟ್ಟಿದೆ. ಭಾನುವಾರದಿಂದ ಆರಂಭವಾಗಲಿರುವ ಇಂಡೋ – ಆಫ್ರಿಕಾ ಮೊದಲ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಎಂದೂ ಕರೆಯಲಾಗುತ್ತದೆ. ಈರೀತಿ ಕರೆಯಲು ಕಾರಣವೇನು?. ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಹೆಚ್ಚಿನವರು ಬಾಕ್ಸಿಂಗ್ ಡೇ ಟೆಸ್ಟ್ ಎಂದರೆ ಎರಡು ತಂಡಗಳ ಹಣಾಹಣಿ ಅಥವಾ ಕಾಳಗ ಅಂದುಕೊಂಡಿದ್ದಾರೆ. ಹೀಗಾಗಿ ಇದನ್ನು ಬಾಕ್ಸಿಂಗ್ ಡೇ ಎಂದು ವರ್ಣಿಸಲಾಗುತ್ತಿದೆ ಎಂದು ಭಾವಿಸಿದ್ದಾರೆ. ಆದರೆ ಇಲ್ಲಿ ಬಾಕ್ಸಿಂಗ್ ಎಂದರೆ ಮುಷ್ಠಿ ಕಾಳಗವಲ್ಲ. ಬದಲಾಗಿ ಕ್ರಿಸ್​ಮಸ್ ಮರುದಿನ ನಡೆಯುತ್ತಿರುವುದರಿಂದ ಬಾಕ್ಸಿಂಗ್ ಡೇ ಪಂದ್ಯ ಎಂದು ಕರೆಯಲಾಗುತ್ತಿದೆ. ಅಂದರೆ ಕ್ರಿಸ್​ಮಸ್ ದಿನ ಸ್ನೇಹಿತರು, ಕುಟುಂಬದವರು ಪರಸ್ಪರ ಗಿಫ್ಟ್ ಬಾಕ್ಸ್ ನೀಡುತ್ತಾರೆ​. ಮರುದಿನ ಅಂದರೆ ಡಿಸೆಂಬರ್ 26 ರಂದು ಆ ಬಾಕ್ಸ್​ ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್​ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎನ್ನಲಾಗುತ್ತದೆ. ಇದೇ ದಿನ ಪಂದ್ಯವನ್ನು ಆಯೋಜಿಸುತ್ತಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂಬ ಹೆಸರು ಬಂದಿದೆ.

ಸದರ್ನ್ ಹ್ಯಾಂಪ್ ಶೈರ್​ನ ಕ್ರಿಕೆಟ್ ದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್​ನಲ್ಲಿ ಡಿ. 26ರಂದು ಟೆಸ್ಟ್ ಪಂದ್ಯ ನಡೆದರೆ ಅದನ್ನು ಬಾಕ್ಸಿಂಗ್ ಡೇ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಕ್ರಿಸ್ ಮಸ್ ಮರುದಿನವಾದ ಕಾರಣ ಇಂಗ್ಲೆಂಡ್ ಹಾಗೂ ಇತರ ಕಾಮನ್ವೆಲ್ತ್ ದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಕೆನಡಾದಲ್ಲಿ ಈ ದಿನವನ್ನು ಬಾಕ್ಸಿಂಗ್ ಡೇ ಎನ್ನುತ್ತಾರೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಂಥ ಕ್ರಿಕೆಟ್ ಪ್ರೀತಿಯ ದೇಶಗಳು ಪ್ರತಿ ವರ್ಷ ಈ ದಿನದ ಪಂದ್ಯವನ್ನು ಹಬ್ಬದ ರೀತಿಯಲ್ಲಿ ಎದುರು ನೋಡುತ್ತಾರೆ. ಅದೊಂದು ರೀತಿಯಲ್ಲಿ ಅವರ ಪಾಲಿಗೆ ಪ್ರತಿಷ್ಠೆಯ ಪಂದ್ಯ ಕೂಡ ಆಗಿದೆ.

ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ ಡಿಸೆಂಬರ್ 26 ರಂದು ನಡೆಯಲಿದೆ. ಆಸ್ಟ್ರೇಲಿಯಾ ಇದೇ ದಿನದಂದು ಇಂಗ್ಲೆಂಡ್ ವಿರುದ್ಧ ಆಡಿದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಕೂಡ ಮುಖಾಮುಖಿಯಾಗಲಿವೆ.

ಇನ್ನು ಬಾಕ್ಸಿಂಗ್ ಡೇ ಟೆಸ್ಟ್​ನ ಎರಡನೇ ಅರ್ಥದ ಪ್ರಕಾರ, ಬಡವರಿಗೆ ಹಣ ತುಂಬಿದ ಪೆಟ್ಟಿಗೆ ಅಥವಾ ಉಡುಗೊರೆಯನ್ನು ನೀಡುವ ದಿನ ಮತ್ತು ಅವರು ಕ್ರಿಸ್‌ಮಸ್‌ನ ಮರುದಿನ ಅದನ್ನು ತೆರೆಯುತ್ತಾರೆ. ಅಮೆರಿಕನ್ನರ ಪ್ರಕಾರ, ಕ್ರಿಸ್ಮಸ್ ನಂತರದ ದಿನವನ್ನು ಗಿಫ್ಟ್ ಓಪನಿಂಗ್ ಡೇ ಎಂದು ಕರೆಯಲಾಗುತ್ತದೆ, ಈ ಕಾರಣದಿಂದಾಗಿ ಉಡುಗೊರೆಗಳಲ್ಲಿ ಕಂಡುಬರುವ ಪೆಟ್ಟಿಗೆಗಳನ್ನು ಅನ್ಬಾಕ್ಸ್ ಮಾಡಲಾಗುತ್ತದೆ.

IPL 2022: ಐಪಿಎಲ್ 2022ಕ್ಕೆ ಪ್ಲಾನ್ ಬಿ ರೂಪಿಸಲು ಮುಂದಾದ ಬಿಸಿಸಿಐ: ಏನಿದೆ ಈ ಹೊಸ ಪ್ಲಾನ್​ನಲ್ಲಿ?

(Indiavs South Africa Here is the reason why IND vs SA 1st Test will be called Boxing Day Test)