Virat Kohli: ವಿರಾಟ್ ಕೊಹ್ಲಿಗೆ ಗಂಭೀರ ಸಲಹೆ ನೀಡಿದ ಗೌತವ್ ಗಂಭೀರ್: ಅಭಿಮಾನಿಗಳು ಆಕ್ರೋಶ

| Updated By: ಝಾಹಿರ್ ಯೂಸುಫ್

Updated on: Oct 17, 2022 | 10:09 PM

Virat Kohli vs Gautam Gambhir: ನಿಮ್ಮ ದಾಖಲೆಗಳು ಅಥವಾ ಅರ್ಧಶತಕಗಳು ಅಥವಾ ಶತಕಗಳಿಗಾಗಿ ರನ್​ಗಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವು 40 ಅಥವಾ 20 ರನ್ ಮಾಡಿದರೂ ಸಹ, ನಿಮ್ಮ ತಂಡವು 170-180 ರ ಮೊತ್ತ ಕಲೆಹಾಕುವಂತೆ ಮಾಡಬೇಕು ಎಂದು ಗಂಭೀರ್ ತಿಳಿಸಿದ್ದಾರೆ.

Virat Kohli: ವಿರಾಟ್ ಕೊಹ್ಲಿಗೆ ಗಂಭೀರ ಸಲಹೆ ನೀಡಿದ ಗೌತವ್ ಗಂಭೀರ್: ಅಭಿಮಾನಿಗಳು ಆಕ್ರೋಶ
Gautam Gambhir-Virat Kohli
Follow us on

T20 World Cup 2022: ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾ (Team India) ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇನ್ನು ನ್ಯೂಜಿಲೆಂಡ್ ವಿರುದ್ಧ ಬುಧವಾರ ಮತ್ತೊಂದು ಅಭ್ಯಾಸ ಪಂದ್ಯವಾಡಲಿದೆ. ಇದಾದ ಬಳಿಕ ಅಕ್ಟೋಬರ್ 23 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ನೀಡಿರುವ ಸಲಹೆಯು ಇದೀಗ ಚರ್ಚೆಗೆ ಕಾರಣವಾಗಿದೆ.

ಸಂವಾದವೊಂದರಲ್ಲಿ ಮಾತನಾಡಿದ್ದ ಗಂಭೀರ್​ಗೆ ಟೀಮ್ ಇಂಡಿಯಾಗೆ ಏನು ಸಲಹೆ ನೀಡುತ್ತೀರಿ ಎಂದು ಕೇಳಲಾಗಿತ್ತು. ಈ ವೇಳೆ ಎಲ್ಲಾ ಆಟಗಾರರು ವೈಯುಕ್ತಿಕ ಸಾಧನೆಯನ್ನು ಬದಿಗಿಟ್ಟು ಆಡಿದರೆ ಟಿ20 ವಿಶ್ವಕಪ್ ಗೆಲ್ಲಬಹುದು. ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದಕ್ಕಿಂತ ತಂಡಕ್ಕಾಗಿ ರನ್ ಗಳಿಸುವತ್ತ ಗಮನ ಹರಿಸಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿಗೆ ನಿಮ್ಮ ಸಲಹೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ವಿರಾಟ್ ಕೊಹ್ಲಿಯಂತಹ ಆಟಗಾರರು ತಂಡಕ್ಕಾಗಿ ರನ್​ ಗಳಿಸಬೇಕು. ನೀವು ರನ್ ಗಳಿಸಿದರೆ ಅದು ನಿಮ್ಮ ತಂಡದ ಗೆಲುವಿಗೆ ಸಹಾಯ ಮಾಡುತ್ತದೆ. ದೊಡ್ಡ ಪಂದ್ಯಾವಳಿಗಳಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳು ಮುಖ್ಯವಲ್ಲ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ನಿಮ್ಮ ದಾಖಲೆಗಳು ಅಥವಾ ಅರ್ಧಶತಕಗಳು ಅಥವಾ ಶತಕಗಳಿಗಾಗಿ ರನ್​ಗಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನೀವು 40 ಅಥವಾ 20 ರನ್ ಮಾಡಿದರೂ ಸಹ, ನಿಮ್ಮ ತಂಡವು 170-180 ರ ಮೊತ್ತ ಕಲೆಹಾಕುವಂತೆ ಮಾಡಬೇಕು ಎಂದು ಗಂಭೀರ್ ತಿಳಿಸಿದ್ದಾರೆ.

ಇತ್ತ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿ ಗೌತಮ್ ಗಂಭೀರ್ ನೀಡಿರುವ ಈ ಹೇಳಿಕೆಗಳು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಕೊಹ್ಲಿ ಯಾವಾಗ ವೈಯುಕ್ತಿಕ ದಾಖಲೆಗಾಗಿ ಬ್ಯಾಟ್ ಬೀಸಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ವಿನಾಕಾರಣ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಗೌತಮ್ ಗಂಭೀರ್ ಅವರ ಈ ಹೇಳಿಕೆಯನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಆಟಗಾರರು ಕೇವಲ ಅರ್ಧಶತಕ ಮತ್ತು ಶತಕಗಳನ್ನು ಗಳಿಸಿ ಟ್ರೋಫಿಗಳನ್ನು ಗೆದ್ದಿದ್ದಕ್ಕಾಗಿ ನೆನಪಿಸಿಕೊಳ್ಳುತ್ತಾರೆ. ನೀವು ಅಂತಹ ಪಂದ್ಯಾವಳಿಗಳನ್ನು ಆಡುವಾಗ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಮನೆಯಲ್ಲಿಟ್ಟುಕೊಳ್ಳಿ. ಇಲ್ಲಿ ವೈಯಕ್ತಿಕ ದಾಖಲೆಗಳು ಮುಖ್ಯವಲ್ಲ ಎಂಬ ಹೇಳಿಕೆ ಸರಿಯಾಗಿದೆ ಎಂದು ಗಂಭೀರ್ ಅಭಿಮಾನಿಗಳು ಮಾಜಿ ಕ್ರಿಕೆಟಿಗನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಗೌತಮ್ ಗಂಭೀರ್ ತಮ್ಮ ಸಲಹೆಯಲ್ಲಿ ವಿರಾಟ್ ಕೊಹ್ಲಿಯನ್ನು ನೇರವಾಗಿ ಟಾರ್ಗೆಟ್ ಮಾಡಿರುವುದು ಕಿಂಗ್ ಕೊಹ್ಲಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ.