KKR vs PBKS, IPL 2021: ಇಂದು ಕೋಲ್ಕತ್ತಾಕ್ಕೆ ಪಂಜಾಬ್ ಸವಾಲು: ರಾಹುಲ್ ಪಡೆಗೆ ಗೆದ್ದರಷ್ಟೆ ಉಳಿಗಾಲ

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 19 ಹಾಗೂ ಪಂಜಾಬ್ ಕಿಂಗ್ಸ್ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

KKR vs PBKS, IPL 2021: ಇಂದು ಕೋಲ್ಕತ್ತಾಕ್ಕೆ ಪಂಜಾಬ್ ಸವಾಲು: ರಾಹುಲ್ ಪಡೆಗೆ ಗೆದ್ದರಷ್ಟೆ ಉಳಿಗಾಲ
KKR vs PBKS

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ (IPL 2021) ಇಂದು ನಡೆಯಲಿರುವ 45ನೇ ಪಂದ್ಯದಲ್ಲಿ ಇಯಾನ್ ಮಾರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಗಳು (KKR vs PBKS) ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಕೆಕೆಆರ್ ಗೆದ್ದರೆ ಪ್ಲೇ ಆಫ್​ಗೆ (Plaayoff) ಲಗ್ಗೆಯಿಡಲು ಒಂದು ಹೆಜ್ಜೆ ಮುಂದೆ ಹೋಗಲಿದೆ. ಇತ್ತ ಪಂಜಾಬ್​ಗೆ ಗೆದ್ದರಷ್ಟೆ ಉಳಿಗಾಲ. ರಾಹುಲ್ ಪಡೆ ಎಲ್ಲಾದರು ಇಂದಿನ ಪಂದ್ಯ ಸೋತರೆ ಟೂರ್ನಿಯಿಂದ ಹೊರಬೀಳುವುದು ಖಚಿತ.

ಸದ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟು 11 ಪಂದ್ಯಗಳನ್ನು ಆಡಿದ್ದು ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರು ಪಂದ್ಯಗಳಲ್ಲಿ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.363 ನೆಟ್​ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಈವರೆಗೆ ಒಟ್ಟು 11 ಪಂದ್ಯಗಳನ್ನು ಆಡಿದ್ದು ಕೇವಲ 4 ಪಂದ್ಯಗಳನ್ನಷ್ಟೆ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.288 ನೆಟ್​ರೇಟ್​ನೊಂದಿಗೆ ಆರನೇ ಸ್ಥಾನದಲ್ಲಿದೆ.

ಕೆಕೆಆರ್ ತಂಡದಲ್ಲಿ ಆರಂಭಿಕ ಬ್ಯಾಟರ್​ಗಳು ರನ್ ಗಳಿಸುತ್ತಿದ್ದಾರೆ ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿ ಗೋಚರಿಸುತ್ತಿಲ್ಲ. ಶುಭ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಪವರ್ ಪ್ಲೇನಲ್ಲಿ ಸ್ಫೋಟಕ ಆಟವಾಡುತ್ತಾರೆ. ರಾಹುಲ್ ತ್ರಿಪಾಠಿ ಕೂಡ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಆದ್ರೆ, ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್​ನಲ್ಲಿದ್ದಾರೆ.

ಕೆಕೆಆರ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರೇ ಗೇಮ್ ಚೇಂಜಿಂಗ್ ಮೂಮೆಂಟ್ ತಂದುಕೊಡುತ್ತಿದ್ದಾರೆ. ಟಿಮ್ ಸೌಥೀ ಹಾಗೂ ಲೂಕಿ ಫರ್ಗುಸನ್ ತಂಡಕ್ಕೆ ಅಲ್ಪ ಮಟ್ಟದಲ್ಲಿ ನೆರವಾಗುತ್ತಿದ್ದಾರೆ.

ಇತ್ತ ಪಂಜಾಬ್ ಕಿಂಗ್ಸ್ ಕೂಡ ಆರಂಭಿಕರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಕೆ. ಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಆ್ಯಡೆನ್ ಮರ್ಕ್ರಮ್ ಉತ್ತಮ ಲಯದಲ್ಲಿದ್ದಾರೆ. ನಿಕೋಲಸ್ ಪೂರನ್ ತಮ್ಮ ನೈಜ್ಯ ಆಟ ಪ್ರದರ್ಶಿಸುತ್ತಿಲ್ಲ. ದೀಪಕ್ ಹೂಡ ಕೆಲವು ಪಂದ್ಯಗಳಲ್ಲಿ ಆಡಿದರೆ ಇನ್ನೂ ಕೆಲ ಪಂದ್ಯಗಳಲ್ಲಿ ಎಡವುತ್ತಿದ್ದಾರೆ. ಪಂಜಾಬ್ ಬೌಲಿಂಗ್ ವಿಭಾಗವೂ ಮಾರಕವಾಗಿ ಗೋಚರಿಸುತ್ತಿಲ್ಲ. ಪಂದ್ಯದ ಸ್ಥಿತಿಯನ್ನು ಬದಲಾಯಿಸುವ ಬೌಲರ್ ತಂಡದಲ್ಲಿಲ್ಲ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 19 ಹಾಗೂ ಪಂಜಾಬ್ ಕಿಂಗ್ಸ್ 9 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021: ಧೋನಿ ಕಿರೀಟಕ್ಕೆ ಮತ್ತೊಂದು ಗರಿ; ಹೈದರಾಬಾದ್​ ವಿರುದ್ಧ ವಿಕೆಟ್ ಕೀಪಿಂಗ್​ನಲ್ಲಿ ಶತಕ ಬಾರಿಸಿದ ಮಹೀ

(KKR vs PBKS Eoin Morgan Kolkata Knight Riders will take on KL Rahul Punjab Kings at IPL 2021 Match)

Read Full Article

Click on your DTH Provider to Add TV9 Kannada