Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್‌ಕೆ ಪ್ರಸಾದ್
MSK Prasad: ಎಂಎಸ್‌ಕೆ ಪ್ರಸಾದ್ ಪ್ರಕಾರ, ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಲು ರಾಹುಲ್ ದ್ರಾವಿಡ್ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಅಲ್ಲದೆ ಆಟಗಾರರಿಗೆ ಮಾರ್ಗದರ್ಶನದ ಕೆಲಸವನ್ನು ಎಂಎಸ್ ಧೋನಿ ವಹಿಸಿಕೊಳ್ಳಬೇಕು ಎಂದಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಮುಗಿದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದಲ್ಲಿ (Indian Cricket Team) ಬಹುದೊಡ್ಡ ಬದಲಾವಣೆ ಆಗಲಿದೆ. ಈಗಾಗಲೇ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಟಿ-20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ನ ಕ್ಯಾಪ್ಟನ್ಸಿಯಿಂದ ನಿವೃತ್ತಿ ಪಡೆಯಲಿದ್ದೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ (Ravi Shastri) ಸೇವಾವಧಿ ಕೂಡ ಅಂತ್ಯವಾಗಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ಕೋಚ್ನ ಹುಡುಕಾಟದಲ್ಲಿದೆ. ಈಗಾಗಲೇ ಅನಿಲ್ ಕುಂಬ್ಳೆ (Anil Kumble), ವಿವಿಎಸ್ ಲಕ್ಷ್ಮಣ್ (VVS Laxman), ಮಹೇಲಾ ಜಯವರ್ಧನೆ ಸೇರಿದಂತೆ ಕೆಲ ಮಾಜಿ ಅನುಭವಿ ಆಟಗಾರರ ಹೆಸರು ಕೇಳಿಬರುತ್ತಿದೆ. ಇದರ ಬೆನ್ನಲ್ಲೆ ಸದ್ಯ ಬಿಸಿಸಿಐ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ (MSK Prasad) ಭಾರತ ತಂಡದ ಮುಂದಿನ ಕೋಚ್ (Team India Coach) ಇವರಾದರೆ ಉತ್ತಮ ಎಂದು ಹೇಳಿದ್ದಾರೆ.
ಎಂಎಸ್‌ಕೆ ಪ್ರಸಾದ್ ಪ್ರಕಾರ, ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಲು ರಾಹುಲ್ ದ್ರಾವಿಡ್ ಅವರು ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಅಲ್ಲದೆ ಆಟಗಾರರಿಗೆ ಮಾರ್ಗದರ್ಶನದ ಕೆಲಸವನ್ನು ಎಂಎಸ್ ಧೋನಿ ವಹಿಸಿಕೊಳ್ಳಬೇಕು ಎಂದಿದ್ದಾರೆ. “ನನ್ನ ಹೃದಯ ಹೇಳುತ್ತಿದೆ. ನನ್ನ ಭಾವನೆಗಳ ಪ್ರಕಾರ ದ್ರಾವಿಡ್ ಮುಂದಿನ ಕೋಚ್ ಆಗಬೇಕು ಎಂದು. ನನ್ನ ಸಯೋದ್ಯೋಗಿಗಳ ಬಳಿ ನಾನು ಸವಾಲು ಕೂಡ ಹಾಕಿದ್ದೇನೆ. ರವಿ ಶಾಸ್ತ್ರಿ ಯುಗಾಂತ್ಯದ ಬಳಿಕ ಎಂಎಸ್ ಧೋನಿ ಟೀಮ್ ಇಂಡಿಯಾ ಮೆಂಟರ್ ಆಗಿ, ದ್ರಾವಿಡ್ ಮುಖ್ಯ ಕೋಚ್ ಆಗಿ ನೇಮಕವಾಗಬೇಕು ಎಂದು ಹೇಳಿದ್ದೇನೆ. ಐಪಿಎಲ್ ಕಾಮೆಂಟರಿ ವೇಳೆ ಈ ಬಗ್ಗೆ ಚರ್ಚೆ ಕೂಡ ಮಾಡಿದ್ದೇನೆ” ಎಂದು ಪ್ರಸಾದ್ ಹೇಳಿದ್ದಾರೆ.
“ರಾಹುಲ್ ಅವರಂತಹ ಶಿಸ್ತಿನ ವ್ಯಕ್ತಿ ಭಾರತ ತಂಡದ ಕೋಚ್ ಸ್ಥಾನಕ್ಕೆ ಸೂಕ್ತವಾಗಿದ್ದಾರೆ. ಮುಖ್ಯ ಕೋಚ್ ಆಗಿ ದ್ರಾವಿಡ್ ಕೆಲಸ ಮಾಡಿ, ಆಟಗಾರರಿಗೆ ಮಾರ್ಗದರ್ಶನದ ಕೆಲಸವನ್ನು ಎಂಎಸ್ ಧೋನಿ ವಹಿಸಿಕೊಳ್ಳಬೇಕು. ಇಬ್ಬರೂ ಕೂಡ ಶಾಂತ ಸ್ವಭಾವದವರು. ಎಲ್ಲಕ್ಕಿಂತಲೂ ಮಿಗಿಲಾಗಿ ಇಂದು ಪ್ರತಿಭಾವಂತ ಆಟಗಾರರಾಗಿ ಗುರುತಿಸಿಕೊಂಡ ಬಹುತೇಕ ಆಟಗಾರರನ್ನು ರೂಪಿಸಿದ್ದೇ ದ್ರಾವಿಡ್. ಭಾರತ ‘ಎ’ ತಂಡದಲ್ಲಿ ಕೋಚ್ ಕೆಲಸ ಮಾಡಿದಾಗ ಅವರು ಹಲವು ಅದ್ಭುತ ಯೋಜನೆಗಳೊಂದಿಗೆ ಆಟಗಾರರ ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಕೋಚ್ ಸ್ಥಾನಕ್ಕೆ ದ್ರಾವಿಡ್ ಮತ್ತು ಮೆಂಟರ್ ಸ್ಥಾನಕ್ಕೆ ಧೋನಿ ನೇಮಕವಾಗದೇ ಇದ್ದರೆ ನನಗಂತೂ ಖಂಡಿತಾ ಬಹಳಾ ನಿರಾಶೆ ಆಗಲಿದೆ” ಎಂದು ಎಂಎಸ್ಎಸ್ಕೆ ಪ್ರಸಾದ್ ಹೇಳಿದ್ದಾರೆ.
ನವೆಂಬರ್ನಲ್ಲಿ ಟಿ-20 ವಿಶ್ವಕಪ್ ಮುಗಿಯುತ್ತಿದ್ದಂತೆ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಅವಧಿ ಮುಗಿಯಲಿದೆ. ಈ ಹಿಂದೆ 2014 ಮತ್ತು 2016 ರ ಟಿ-20 ವಿಶ್ವಕಪ್‌ಗಳಲ್ಲಿ ರವಿಶಾಸ್ತ್ರಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅದರ ನಂತರ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಆಗಿದ್ದರು. 2017 ರಲ್ಲಿ ಅನಿಲ್ ಕುಂಬ್ಳೆ ನಂತರ, ರವಿಶಾಸ್ತ್ರಿ ಅವರಿಗೆ ಪೂರ್ಣಕಾಲಿಕ ಕೋಚ್ ಹುದ್ದೆ ನೀಡಲಾಯಿತು. 2017 ರಿಂದ ರವಿಶಾಸ್ತ್ರಿ ಭಾರತ ತಂಡದ ಕೋಚ್ ಆಗಿದ್ದಾರೆ.
Chirs Gayle: ಪಂಜಾಬ್ ಕಿಂಗ್ಸ್ಗೆ ಬಿಗ್ ಶಾಕ್: ತಂಡದಿಂದ ದಿಢೀರ್ ಹೊರ ನಡೆದ ಕ್ರಿಸ್ ಗೇಲ್, ಯಾಕೆ ಗೊತ್ತಾ?
KKR vs PBKS, IPL 2021: ಇಂದು ಕೋಲ್ಕತ್ತಾಕ್ಕೆ ಪಂಜಾಬ್ ಸವಾಲು: ರಾಹುಲ್ ಪಡೆಗೆ ಗೆದ್ದರಷ್ಟೆ ಉಳಿಗಾಲ
(MSK Prasad feels that the Rahul Dravid as a Team India coach and MS Dhoni as mentor afetr T20 World Cup)