MS Dhoni: ಆ ಘಟನೆಯನ್ನು ಮತ್ತೆ ನೆನಪಿಸಿದ ಧೋನಿ: ಸಿಕ್ಸರ್ ಮೂಲಕ ಪಂದ್ಯ ಫಿನಿಶ್ ಮಾಡಿದ ಗ್ರೇಟ್ ಫಿನಿಶರ್
SRH vs CSK, MS Dhoni: ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ನಾಯಕ ಎಂ. ಎಸ್ ಧೋನಿ ತಮ್ಮದೇ ಶೈಲಿಯಲ್ಲಿ ಚೆಂಡನ್ನು ಸಿಕ್ಸರ್ಗೆ ಅಟ್ಟಿ ಪಂದ್ಯವನ್ನು ಫಿನಿಶ್ ಮಾಡಿದರು. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ 2021ರ (IPL 2021) 44ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (SSRH vs CSK) ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಸಾಕಷ್ಟು ರೋಚತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಯ 6 ಎಸೆತಗಳಲ್ಲಿ ಸಿಎಸ್ಕೆ ಗೆಲ್ಲಲು 3 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿ ಅಂಬಟಿ ರಾಯುಡು (Ambati Rayudu) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಇದ್ದರು. ಸಿದ್ಧರ್ಥ್ ಕೌಲ್ ಅವರ ಮೊದಲ ಎಸೆತ ರಾಯುಡುರಿಂದ ಡಾಟ್ ಆದರೆ, ಎರಡನೇ ಎಸೆತ ಸಿಂಗಲ್ ತೆಗದರು. ಮೂರನೇ ಎಸೆತ ಧೋನಿಯಿಂದ ಡಾಟ್. ಹೀಗಾಗಿ 3 ಎಸೆತಗಳಲ್ಲಿ ಚೆನ್ನೈಗೆ 2 ರನ್ಗಳು ಬೇಕಾಗಿತ್ತು. ಈ ಸಂದರ್ಭ ಧೋನಿ 4ನೇ ಎಸೆತವನ್ನು ತಮ್ಮದೇ ಶೈಲಿಯಲ್ಲಿ ಸಿಕ್ಸರ್ಗೆ (MS Dhoni Six) ಅಟ್ಟಿ ಪಂದ್ಯವನ್ನು ಫಿನಿಶ್ ಮಾಡಿದರು.
ಹೌದು, 2011ರ ವಿಶ್ವಕಪ್ನಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಪ್ರಶಸ್ತಿ ತಂದಿಟ್ಟ ಆ ಶಾಟ್ ರೀತಿಯಲ್ಲೇ ಇದುಕೂಡ ಇತ್ತು. ಅಭಿಮಾನಿಗಳಂತು ಧೋನಿ ಪಂದ್ಯವನ್ನು ಸಿಕ್ಸರ್ ಮೂಲಕ ಫಿನಿಶ್ ಮಾಡಿದ್ದನ್ನು ಕಂಡು ಥ್ರಿಲ್ ಆದರು. ಈ ಮೂಲಕ ಚೆನ್ನೈ ಐಪಿಎಲ್ 2021 ರಲ್ಲಿ ಮೊದಲ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಿದರೆ, ಎಸ್ಆರ್ಹೆಚ್ ಮೊದಲ ತಂಡವಾಗಿ ಅಧಿಕೃತವಾಗಿ ಟೂರ್ನಿಯಿಂದ ಹೊರಬಿತ್ತು.
Finally got to see a six from MS Dhoni. #CSKvsSRH pic.twitter.com/S8T2zPJycO
— IndirectPuma10 (@Puma_Man10) September 30, 2021
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 7 ವಿಕೆಟಿಗೆ ಕೇವಲ 134 ರನ್ ಗಳಿಸಿದರೆ, ಚೆನ್ನೈ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಬಾರಿಸಿ ವಿಜಯಿಯಾಯಿತು. ಟಾರ್ಗೆಟ್ ಬೆನ್ನಟ್ಟುವ ವೇಳೆ ರುತುರಾಜ್ ಗಾಯಕ್ವಾಡ್ (45) ಮತ್ತು ಫಾಫ್ ಡುಪ್ಲೆಸಿಸ್ (41) ಉತ್ತಮ ಆರಂಭವಿತ್ತರು. 10.1 ಓವರ್‌ಗಳಿಂದ 75 ರನ್ ಪೇರಿಸಿದರು. ಆದರೆ ಅನಂತರ ಸತತ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿದ ಚೆನ್ನೈ ತುಸು ಒತ್ತಡಕ್ಕೆ ಸಿಲುಕಿತಾದರೂ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಯಿತು. ನಾಯಕ ಧೋನಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಹೈದರಾಬಾದ್ ಪರ ಆರಂಭಿಕ ವೃದ್ಧಿಮಾನ್ ಸಾಹಾ ಏಕಾಂಗಿ ಹೋರಾಟ ನಡೆಸಿದರು. 13ನೇ ಓವರ್ ತನಕ ಇವರ ಬ್ಯಾಟಿಂಗ್ ಮುಂದುವರಿಯಿತು. ಆದರೆ ಶಾರ್ಜಾದ ನಿಧಾನ ಗತಿಯ ಟ್ರಾಕ್ ಮೇಲೆ ಬಿರುಸಿನ ಆಟವಾಡಲು ಅವರಿಂದ ಸಾಧ್ಯವಾಗಲಿಲ್ಲ. 46 ಎಸೆತಗಳಿಂದ 44 ರನ್ ಬಾರಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಕೇವಲ ಒಂದು ಫೋರ್ ಹಾಗೂ ದೀಪಕ್ ಚಹರ್ ಅವರ ಒಂದೇ ಓವರ್‌ನಲ್ಲಿ ಸಿಡಿಸಿದ 2 ಸಿಕ್ಸರ್ ಇದರಲ್ಲಿ ಸೇರಿತ್ತು.
ಸಾಹ ಬಿಟ್ಟರೆ ಅಭಿಷೇಕ್ ಶರ್ಮಾ ಮತ್ತು ಅಬ್ದುಲ್ ಸಮದ್ ತಲಾ 18 ರನ್ ಕಲೆಹಾಕಿದರು. ಸಿಎಸ್ಕೆ ಪರ ಹ್ಯಾಜ್ಲೆವುಡ್ 4 ಓವರ್ಗೆ ಕೇವಲ 24 ರನ್ ನೀಡಿದ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್ಕೆ ಪ್ರಸಾದ್
(MS Dhoni smashed a six in the final over off Siddarth Kaul on SRH vs CSK Match and Chennai into the play-offs)
Published On - 12:02 pm, Fri, 1 October 21