Smriti Mandhana: ಆಸೀಸ್ ಬೌಲರ್​ಗಳ ಬೆಂಡೆತ್ತಿ ಪಿಂಕ್ ಬಾಲ್ ಟೆಸ್ಟ್​ನಲ್ಲಿ ದಾಖಲೆ ಬರೆದ ಸ್ಮೃತಿ ಮಂಧಾನ: ಭರ್ಜರಿ ಶತಕ

INDW vs AUSW Pink-Ball Test: ಗುರುವಾರ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್​ಗೆ 93 ರನ್​ಗಳ ಜೊತೆಯಾಟ ಆಡಿದರು.

Smriti Mandhana: ಆಸೀಸ್ ಬೌಲರ್​ಗಳ ಬೆಂಡೆತ್ತಿ ಪಿಂಕ್ ಬಾಲ್ ಟೆಸ್ಟ್​ನಲ್ಲಿ ದಾಖಲೆ ಬರೆದ ಸ್ಮೃತಿ ಮಂಧಾನ: ಭರ್ಜರಿ ಶತಕ
Smriti mandhana

ಆಸ್ಟ್ರೇಲಿಯಾದ ಮಟ್ರಿಕಾನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮಹಿಳೆಯರ (India Women vs Australia Women) ವಿರುದ್ಧದ ಏಕೈಕ ಹಗಲು-ರಾತ್ರಿ (Day-Night Test) ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಭಾರತದ ಸ್ಮೃತಿ ಮಂಧಾನ (Smriti Mandhana) ಆಕರ್ಷಕ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಮಂಧಾನ ಅವರ ಚೊಚ್ಚಲ ಸೆಂಚುರಿಯಾಗಿದೆ. ಈ ಮೂಲಕ ಪಿಂಕ್ ಬಾಲ್ ಟೆಸ್ಟ್​ನಲ್ಲಿ (Pink Ball Test) ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್ ಮತ್ತು ಮೊದಲ ಭಾರತೀಯ ಮಹಿಳಾ ಬ್ಯಾಟರ್ ಎಂಬ ಸಾಧನೆಯನ್ನು ಮಾಡಿದ್ದಾರೆ. ಇದಕ್ಕೂ ಮುನ್ನ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಭಾರತರ ಪರ ಮೊದಲ ಶತಕ ಬಂದಿದ್ದು ವಿರಾಟ್ ಕೊಹ್ಲಿ (Virat Kohli) ಬ್ಯಾಟ್​ನಿಂದ. ಇಷ್ಟೇ ಅಲ್ಲದೆ ಕಾಂಗರೂಗಳ ನಾಡಿನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನ ಮಾಡಿದ್ದಾರೆ.

ಗುರುವಾರ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್​ಗೆ 93 ರನ್​ಗಳ ಜೊತೆಯಾಟ ಆಡಿದರು. ಚೆನ್ನಾಗಿಯೇ ಆಡುತ್ತಿದ್ದ ಶೆಫಾಲಿ 64 ಎಸೆತಗಳಲ್ಲಿ 31 ರನ್ ಗಳಿಸಿ ಔಟ್ ಆದರು.

 

ಆದರೆ, ಮೊದಲ ದಿನದಾಟ ಮಳೆಯಿಂದಾಗಿ ಸಂಪೂರ್ಣ ಆಡಲು ಸಾಧ್ಯವಾಗಲಿಲ್ಲ. ಎರಡನೇ ಸೆಷನ್ ಹೆಚ್ಚಿನ ಭಾಗವು ಮಳೆಯಿಂದಾಗಿ ರದ್ದಾಯಿತು. ಈ ಮೂಲಕ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್​ಗೆ 132 ರನ್ ಗಳಿಸಿತು. ಮಂಧಾನ80 ರನ್ ಗಳಿಸಿ ಮತ್ತು ಪೂನಮ್ ರಾವುತ್ 16 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಅದರಂತೆ ಇಂದು ಎರಡನೇ ದಿನದಾಟ ಆರಂಭಿಸಿದ ಭಾರತೀಯ ವನಿತೆಯರು ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅದರಲ್ಲೂ ಮಂಧಾನ ಆಸೀಸ್ ಬೌಲರ್​ಗಳ ಬೆಂಡೆತ್ತಿ ಬೌಂಡರಿಗಳ ಮಳೆ ಸುರಿಸುತ್ತಿದ್ದಾರೆ. ಸದ್ಯದ ಸ್ಕೋರ್ ಪ್ರಕಾರ ಮಂಧಾನ 208 ಎಸೆತಗಳಲ್ಲಿ 22 ಬೌಂಡರಿ, 1 ಸಿಕ್ಸರ್​ನೊಂದಿಗೆ 126 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ ಇವರಿಗೆ ಪೂನಮ್ 27 ರನ್ ಗಳಿಸಿ ಉತ್ತಮ ಸಾಥ್ ನೀಡುತ್ತಿದ್ದಾರೆ.

ಏಕದಿನ ಸರಣಿಯ ಬಳಿಕ ಭಾರತೀಯ ವನಿತೆಯರು ಕೇವಲ 2 ಬಾರಿಯಷ್ಟೇ ನೆಟ್ಸ್‌ನಲ್ಲಿ ಪಿಂಕ್‌ ಬಾಲ್​ನಿಂದ ಅಭ್ಯಾಸ ನಡೆಸಿದೆ. ಚೆಂಡು ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ತಂಡಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆಸ್ಪ್ರೇಲಿಯಾ ತಂಡ ಈಗಾಗಲೇ ಹಗಲು-ರಾತ್ರಿ ಟೆಸ್ಟ್‌ ಆಡಿದೆಯಾದರೂ ಅದು 2017ರಲ್ಲಿ. ಹೀಗಾಗಿ ಆಸೀಸ್‌ಗೂ ಇದು ಹೊಸ ಅನುಭವವಾಗಿದೆ.

ಬರೋಬ್ಬರಿ ಏಳು ವರ್ಷಗಳ ಬಳಿಕ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಕಳೆದ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. 4 ದಿನಗಳ ಟೆಸ್ಟ್‌ ಪಂದ್ಯ ಸಾಕಷ್ಟು ರೋಚಕ ಹೋರಾಟಕ್ಕೆ ಕಾರಣವಾಗಿತ್ತು. ಆ ಟೆಸ್ಟ್‌ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದ ಸವಾಲನ್ನು ಭಾರತ ಅತ್ಯುತ್ತಮವಾಗಿ ಎದುರಿಸುತ್ತಿದೆ.

Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್​ಕೆ ಪ್ರಸಾದ್

Chirs Gayle: ಪಂಜಾಬ್ ಕಿಂಗ್ಸ್​ಗೆ ಬಿಗ್ ಶಾಕ್: ತಂಡದಿಂದ ದಿಢೀರ್ ಹೊರ ನಡೆದ ಕ್ರಿಸ್ ಗೇಲ್, ಯಾಕೆ ಗೊತ್ತಾ?

(Smriti Mandhana maiden Test century create a new record in pink ball against Australia Womens)

Read Full Article

Click on your DTH Provider to Add TV9 Kannada