IPL 2021: ಕೇವಲ ಒಂದು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ; ಮೈದಾನಕ್ಕೆ ಬರಲು ವಾರ್ನರ್‌ಗೆ ಅವಕಾಶ ಕೊಡದ ಫ್ರಾಂಚೈಸಿ!
IPL 2021: ಐಪಿಎಲ್ 2021 ರಲ್ಲಿ ಹೈದರಾಬಾದ್ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ವಾರ್ನರ್ ಅವುಗಳಲ್ಲಿ ಆಡುತ್ತಾರೋ ಇಲ್ಲವೋ ಎಂಬುದನ್ನು ನೋಡಬೇಕು. ಅಂದಹಾಗೆ, ಹೈದರಾಬಾದ್ ಪ್ಲೇಆಫ್ ರೇಸ್ನಿಂದ ಹೊರಗಿದೆ.
ಐಪಿಎಲ್ 2021 ರ ಆವೃತ್ತಿಯಲ್ಲಿ ಡೇವಿಡ್ ವಾರ್ನರ್‌ಗೆ ಅದೃಷ್ಟ ಸರಿಯಾಗಿ ಕೈಕೊಟ್ಟಿದೆ. ಈ ಕಳಪೆ ಪ್ರದರ್ಶನದಿಂದಾಗಿ ಅವರನ್ನು ನಾಯಕತ್ವದಿಂದ ಕಿತ್ತುಹಾಕಲಾಯಿತು. ನಂತರ ಡೇವಿಡ್ ವಾರ್ನರ್ ಅವರನ್ನು ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಾಯಿತು. ಇದು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಅವರ ಕೊನೆಯ ಸೀಸನ್ ಎಂದು ನಂಬಲಾಗಿದೆ. ಮುಂದಿನ ವರ್ಷ ಮೆಗಾ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡುವ ಎಲ್ಲ ಸಾಧ್ಯತೆಗಳಿವೆ. ಏತನ್ಮಧ್ಯೆ, ಡೇವಿಡ್ ವಾರ್ನರ್ ಅವರನ್ನು ಹೈದರಾಬಾದ್ ಆಡಳಿತ ಮಂಡಳಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂಬ ವರದಿಗಳಿವೆ. ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ತಂಡದ ಕೊನೆಯ ಪಂದ್ಯಗಳ ಸಮಯದಲ್ಲಿ ಕ್ರೀಡಾಂಗಣಕ್ಕೆ ಬರಲು ಅವಕಾಶ ನೀಡಿಲ್ಲ ಎಂಬ ವದಂತಿ ಹರಿದಾಡುತ್ತಿದೆ. ಈ ಕಾರಣದಿಂದಾಗಿ, ಅವರು ಸನ್ ರೈಸರ್ಸ್ ಹೈದರಾಬಾದ್ ಪಂದ್ಯಗಳ ಸಮಯದಲ್ಲಿ ಡಗೌಟ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಪಂದ್ಯದ ಸಮಯದಲ್ಲಿ ವಾರ್ನರ್ ಹೋಟೆಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಸ್ಪೋರ್ಟ್ಸ್ ಟುಡೇ ಪ್ರಕಾರ, ಡೇವಿಡ್ ವಾರ್ನರ್ ಸೆಪ್ಟೆಂಬರ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ತಂಡದ ಹೋಟೆಲ್ನಲ್ಲಿದ್ದರು. ಶಾರ್ಜಾದಲ್ಲಿ ನಡೆದ ಪಂದ್ಯಕ್ಕಾಗಿ ತಂಡದೊಂದಿಗೆ ಪ್ರಯಾಣಿಸಲು ಅವರಿಗೆ ಅವಕಾಶ ನೀಡಿರಲಿಲ್ಲ. ಆದರೆ ತಂಡದಲ್ಲಿರದ ಮೊಹಮ್ಮದ್ ನಬಿ ಮತ್ತು ಮನೀಶ್ ಪಾಂಡೆಯಂತಹ ಹಿರಿಯ ಆಟಗಾರರಿಗೆ ಮೈದಾನಕ್ಕೆ ಬರಲು ಅವಕಾಶ ನೀಡಲಾಗಿತ್ತು. ಆದರೆ ವಾರ್ನರ್ ಮೈದಾನಕ್ಕೆ ಬರಲು ಅನುಮತಿ ನೀಡಿರಲಿಲ್ಲ. ಈ ಹಿಂದೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ವಾರ್ನರ್ ಕ್ರೀಡಾಂಗಣದಲ್ಲಿ ಇರಲಿಲ್ಲ. ಅವರು ಹೋಟೆಲ್‌ನಿಂದಲೇ ಪಂದ್ಯವನ್ನು ವೀಕ್ಷಿಸುತ್ತಿದ್ದರು.
ಕೊನೆಯ ಮೂರು ಪಂದ್ಯಗಳಲ್ಲಿ ವಾರ್ನರ್‌ಗೆ ಅವಕಾಶ ಸಿಗುವುದೇ? ಐಪಿಎಲ್ 2021 ರಲ್ಲಿ ಹೈದರಾಬಾದ್ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ವಾರ್ನರ್ ಅವುಗಳಲ್ಲಿ ಆಡುತ್ತಾರೋ ಇಲ್ಲವೋ ಎಂಬುದನ್ನು ನೋಡಬೇಕು. ಅಂದಹಾಗೆ, ಹೈದರಾಬಾದ್ ಪ್ಲೇಆಫ್ ರೇಸ್ನಿಂದ ಹೊರಗಿದೆ. 11 ಪಂದ್ಯಗಳಲ್ಲಿ, ಅವರು ಎರಡರಲ್ಲಿ ಮಾತ್ರ ಗೆದ್ದಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದ ವೇಳೆ ಡೇವಿಡ್ ವಾರ್ನರ್ ಕ್ರೀಡಾಂಗಣದಲ್ಲಿ ಕಾಣಿಸದಿದ್ದಾಗ, ಹೈದರಾಬಾದ್ ಕೋಚ್ ಟ್ರೆವರ್ ಬೇಲಿಸ್ ಯುವಕರಿಗೆ ಅವಕಾಶ ನೀಡಲು ವಾರ್ನರ್ ಅವರನ್ನು ಪ್ಲೇಯಿಂಗ್ ಇಲೆವೆನ್ ನಿಂದ ಹೊರಗಿಡಲಾಗಿದೆ ಎಂದು ಹೇಳಿದ್ದರು.
ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೇಲಿಸ್, ನಾವು ಮುಂದಿನ ಸುತ್ತಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಯುವಕರಿಗೆ ಅನುಭವವನ್ನು ಪಡೆಯಲು ಅವಕಾಶಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ. ತಂಡದಲ್ಲಿ ಅನೇಕ ಯುವ ಆಟಗಾರರು ಮೈದಾನಕ್ಕೆ ಬಂದಿಲ್ಲ. ಅವರಿಗೆ ಒಂದು ಅವಕಾಶವನ್ನು ನೀಡಬೇಕಾಗಿದೆ. ಮುಂದಿನ ಪಂದ್ಯಗಳಲ್ಲೂ ಈ ಟ್ರೆಂಡ್ ಮುಂದುವರಿಯಲಿದೆ. ಡೇವ್ (ವಾರ್ನರ್) ಹೋಟೆಲ್ನಲ್ಲಿ ಪಂದ್ಯ ವೀಕ್ಷಿಸಿ ತಂಡವನ್ನು ಹುರಿದುಂಬಿಸಲಿದ್ದಾರೆ ಎಂದರು.