AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021, KKR vs SRH: ಹೈದರಾಬಾದ್​ಗೆ ಔಪಚಾರಿಕ ಪಂದ್ಯ: ಕೆಕೆಆರ್ ಗೆದ್ದರೆ ಪ್ಲೇ ಆಫ್​ಗೆ ಮತ್ತಷ್ಟು ಸನಿಹ

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 7 ಪಂದ್ಯಗಳಲ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021, KKR vs SRH: ಹೈದರಾಬಾದ್​ಗೆ ಔಪಚಾರಿಕ ಪಂದ್ಯ: ಕೆಕೆಆರ್ ಗೆದ್ದರೆ ಪ್ಲೇ ಆಫ್​ಗೆ ಮತ್ತಷ್ಟು ಸನಿಹ
KKR vs SRH
TV9 Web
| Updated By: Vinay Bhat|

Updated on: Oct 03, 2021 | 7:59 AM

Share

ಐಪಿಎಲ್ 2021 (IPL 2021) ರಲ್ಲಿಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ (RCB vs PBKS)​ ಕಾದಾಟ ನಡೆಸಿದರೆ, ಎರಡನೇ ಪಂದ್ಯದಲ್ಲಿ ಇಯಾನ್ ಮಾರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್​ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳು ಸೆಣೆಸಾಟ ನಡೆಸಲಿವೆ. ಈಗಾಗಲೇ ಟೂರ್ನಿಯಿಂದ ಎಸ್​ಆರ್​ಹೆಚ್​ಗೆ ಇದೊಂದು ಔಪಚಾರಿಕ ಪಂದ್ಯ. ಆದರೆ ಈ ಪಂದ್ಯವನ್ನು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಇತ್ತ ಕೆಕೆಆರ್​ಗೆ ಗೆಲುವು ಮಹತ್ವ ಪಡೆದುಕೊಳ್ಳಲಿದೆ. ಜಯ ಸಾಧಿಸಿದರೆ ಪ್ಲೇ ಆಫ್​ ರೇಸ್​ನನಲ್ಲಿ ಒಂದು ಹೆಜ್ಜೆ ಮುಂದಿಡಲಿದೆ. ಹೀಗಾಗಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟು 12 ಪಂದ್ಯಗಳನ್ನು ಆಡಿದ್ದು ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಏಳು ಪಂದ್ಯಗಳಲ್ಲಿ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.302 ನೆಟ್​ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸನ್​ರೈಸರ್ಸ್ ಹೈದಬಾದ್ ತಂಡ ಆಡಿದ 11 ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೆ ಗೆದ್ದಿದೆ. ಎಂಟು ಪಂದ್ಯಗಳಲ್ಲಿ ಸೋಲುಂಡಿದೆ. ಪಾಯಿಂಟ್ ಪಟ್ಟಿಯಲ್ಲಿ -0.490 ನೆಟ್​ರೇಟ್​ನೊಂದಿಗೆ ಕೊನೇಯ ಎಂಟನೇ ಸ್ಥಾನದಲ್ಲಿದೆ.

ಕೆಕೆಆರ್ ತಂಡದಲ್ಲಿ ಆರಂಭಿಕ ಬ್ಯಾಟರ್​ಗಳು ರನ್ ಗಳಿಸುತ್ತಿದ್ದಾರೆ ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿ ಗೋಚರಿಸುತ್ತಿಲ್ಲ. ಶುಭ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಪವರ್ ಪ್ಲೇನಲ್ಲಿ ಸ್ಫೋಟಕ ಆಟವಾಡುತ್ತಾರೆ. ರಾಹುಲ್ ತ್ರಿಪಾಠಿ ಕೂಡ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಆದ್ರೆ, ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್​ನಲ್ಲಿದ್ದಾರೆ.

ಕೆಕೆಆರ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರೇ ಗೇಮ್ ಚೇಂಜಿಂಗ್ ಮೂಮೆಂಟ್ ತಂದುಕೊಡುತ್ತಿದ್ದಾರೆ. ಟಿಮ್ ಸೌಥೀ ಹಾಗೂ ಲೂಕಿ ಫರ್ಗುಸನ್ ತಂಡಕ್ಕೆ ಅಲ್ಪ ಮಟ್ಟದಲ್ಲಿ ನೆರವಾಗುತ್ತಿದ್ದಾರೆ.

ಇತ್ತ ತಂಡದಲ್ಲಿ ಹಿರಿಯ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಪಡೆಯನ್ನು ಕಣಕ್ಕಿಳಿಸಿಸುತ್ತಿರುವ ಹೈದರಾಬಾದ್ ತಂಡದಲ್ಲಿ ಬದಲಾವಣೆ ಅನುಮಾನ. ಜೇಸನ್ ರಾಯ್ ಮೇಲೆ ಸಾಕಷ್ಟು ನಂಬಿಕೆಯಿದೆ. ಪ್ರಿಯಂ ಗರ್ಗ್ ಕೂಡ ಉತ್ತಮ ಲಯದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಜೇಸನ್ ಹೋಲ್ಡರ್, ನಾಯಕ ವಿಲಿಯಮ್ಸನ್ ಹಾಗೂ ವೃದ್ದಿಮಾನ್ ಸಾಹ ಎದ್ದು ನಿಂತರೆ ಕೋಲ್ಕತ್ತಾಕ್ಕೆ ಗೆಲುವು ಸುಲಭವಿಲ್ಲ. ಬೌಲಿಂಗ್​ನಲ್ಲಿ ರಶೀದ್ ಖಾನ್ ಜೊತೆ ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಜೇಸನ್ ಹೋಲ್ಡರ್ ನೆರವಾಗಬೇಕಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ 20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕೇವಲ 7 ಪಂದ್ಯಗಳಲ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

RCB vs PBKS, IPL 2021: ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಆರ್​ಸಿಬಿಗೆ ಬೇಕು ಗೆಲುವು: ಪಂಜಾಬ್ ಸೋತರೆ ಟೂರ್ನಿಯಿಂದ ಔಟ್

(IPL 2021 KKR vs SRH Kolkata Knight Riders faces a must-win game against Sunrisers Hyderabad)