AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಕೊನೆಯ ಬಾಲ್​ನಲ್ಲಿ ಸಿಕ್ಸರ್! ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್

IPL 2021: ಇದು ಐಪಿಎಲ್​ನಲ್ಲಿ ಗಾಯಕವಾಡ್ ಅವರ ಮೊದಲ ಶತಕವಾಗಿದೆ. ಗಾಯಕ್ವಾಡ್ 60 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.

IPL 2021: ಕೊನೆಯ ಬಾಲ್​ನಲ್ಲಿ ಸಿಕ್ಸರ್! ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್
ರುತುರಾಜ್ ಗಾಯಕ್ವಾಡ್
TV9 Web
| Edited By: |

Updated on:Oct 02, 2021 | 9:56 PM

Share

ಐಪಿಎಲ್ -2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಿತುರಾಜ್ ಗಾಯಕ್ವಾಡ್ ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದ್ದಾರೆ. ಇದು ಐಪಿಎಲ್​ನಲ್ಲಿ ಗಾಯಕವಾಡ್ ಅವರ ಮೊದಲ ಶತಕವಾಗಿದೆ. ಗಾಯಕ್ವಾಡ್ 60 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು. ಚೆನ್ನೈ ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ ಗಾಯಕ್ವಾಡ್ ಶತಕ ಪೂರೈಸಿದರು. ಅವರು ಔಟಾಗದೆ 101 ರನ್​ಗಳ ಇನ್ನಿಂಗ್ಸ್‌ನಲ್ಲಿ 60 ಎಸೆತಗಳನ್ನು ಎದುರಿಸಿದರು. ಗಾಯಕ್ವಾಡ್ ತನ್ನ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ, ಗಾಯಕವಾಡ್ ಆರೆಂಜ್ ಕ್ಯಾಪ್ ರೇಸ್‌ನ ಅಗ್ರಸ್ಥಾನಕ್ಕೆ ಬಂದಿದ್ದಾರೆ. ಗಾಯಕ್ವಾಡ್‌ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ, ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಈ ಸೀಸನ್​ನಲ್ಲಿ ಗಾಯಕ್ವಾಡ್ ಇದುವರೆಗೆ 12 ಪಂದ್ಯಗಳಲ್ಲಿ 508 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧ ಶತಕಗಳೊಂದಿಗೆ 1 ಶತಕ ಗಳಿಸಿದ್ದಾರೆ. ಇದರ ಹೊರತಾಗಿ, ಅವರು ಈ ಶತಕದ ಇನ್ನಿಂಗ್ಸ್ ಆಧಾರದ ಮೇಲೆ ದಾಖಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅತ್ಯಧಿಕ ರನ್ ಗಳಿಸಿದ ಭಾರತೀಯ ಓಪನರ್ ಆಗಿದ್ದಾರೆ.

ಚೆನ್ನೈನ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ಚೆನ್ನೈಗೆ ಇದು ಒಂಬತ್ತನೇ ಶತಕವಾಗಿದೆ. ಇದಲ್ಲದೇ, ಗೈಕ್ವಾಡ್ ಚೆನ್ನೈ ಪರ ಐಪಿಎಲ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಅವರು 24 ವರ್ಷ 244 ದಿನಗಳಲ್ಲಿ ಶತಕ ಪೂರೈಸಿದರು. ಚೆನ್ನೈ ಮತ್ತು ರಾಜಸ್ಥಾನ ನಡುವಿನ ಐಪಿಎಲ್ ಪಂದ್ಯದಲ್ಲಿ ಇದು ಮೂರನೇ ಶತಕವಾಗಿದೆ. ಈ ಹಿಂದೆ 2010 ರಲ್ಲಿ ಚೆನ್ನೈನ ಮುರಳಿ ವಿಜಯ್ ಶತಕ ಬಾರಿಸಿದರೆ, ಶೇನ್ ವ್ಯಾಟ್ಸನ್ 2018 ರಲ್ಲಿ ಶತಕ ಬಾರಿಸಿದ್ದರು.

ಕಳೆದ ವರ್ಷ ಐಪಿಎಎಲ್​ಗೆ ಎಂಟ್ರಿ ಗಾಯಕವಾಡ್ ಕಳೆದ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಆದಾಗ್ಯೂ, ಕಳೆದ ಋತುವಿನ ಕೊನೆಯ ಮೂರು ಪಂದ್ಯಗಳಲ್ಲಿ ಅವರು ಸತತ ಮೂರು ಅರ್ಧ ಶತಕಗಳನ್ನು ಗಳಿಸಿದರು. ಈ ಋತುವಿನಲ್ಲಿಯೂ ಅವರಿಗೆ ಉತ್ತಮ ಆರಂಭ ಸಿಗಲಿಲ್ಲ. ಈ ಋತುವಿನ ಮೊದಲ ಮೂರು ಪಂದ್ಯಗಳಲ್ಲಿ, 5, 5, 10 ರನ್ಗಳು ಗಾಯಕ್ವಾಡ್ ಬ್ಯಾಟ್​ನಿಂದ ಬಂದವು. ಆದರೆ ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಬೆಂಬಲಿಸಿತು. ನಂತರ ಬ್ಯಾಟ್ಸ್‌ಮನ್ ಮತ್ತೊಮ್ಮೆ ತೋರಿಸಿದ ಫಾರ್ಮ್ ಶ್ಲಾಘನೀಯವಾಗಿದೆ. ಅಂದಿನಿಂದ ಅವರು 64, 33, 75, 4, 88*, 38, 40, 45 ಮತ್ತು 101* ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ.

ಚೆನ್ನೈನ ಇನಿಂಗ್ಸ್ ಹೀಗಿತ್ತು ರುತುರಾಜ್ ಗಾಯಕ್ವಾಡ್ ಅಜೇಯ ಶತಕದೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್​ಗೆ 189 ರನ್ ಗಳಿಸಿತು. ಗಾಯಕ್ವಾಡ್ ಹೊರತುಪಡಿಸಿ, ರವೀಂದ್ರ ಜಡೇಜಾ ಚೆನ್ನೈ ಪರ 15 ಎಸೆತಗಳಲ್ಲಿ 32 ರನ್ ಗಳಿಸಿದರು ಮತ್ತು ತಂಡಕ್ಕೆ ಬಲವಾದ ಸ್ಕೋರ್ ನೀಡಿದರು.

Published On - 9:31 pm, Sat, 2 October 21

Follow Us
TV9 Web
TV9 Web

TV9 Kannada

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!