IPL 2021: ಐಪಿಎಲ್​ನ ಎರಡು ತಂಡಗಳಿಗೆ ಗುಡ್​ ನ್ಯೂಸ್

| Updated By: ಝಾಹಿರ್ ಯೂಸುಫ್

Updated on: Aug 15, 2021 | 5:11 PM

IPL 2021 News: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ನಡೆಯಲಿದೆ. ಅದೇ ರೀತಿ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಶಾರ್ಜಾದಲ್ಲಿ ಒಟ್ಟು 10 ಪಂದ್ಯಗಳನ್ನು ಆಯೋಜಿಸಲಿದೆ.

IPL 2021: ಐಪಿಎಲ್​ನ ಎರಡು ತಂಡಗಳಿಗೆ ಗುಡ್​ ನ್ಯೂಸ್
IPL 2021
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ (IPL 2021) ದ್ವಿತಿಯಾರ್ಧ ಆರಂಭವಾಗಲು ಇನ್ನು ತಿಂಗಳು ಮಾತ್ರ ಉಳಿದಿವೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK), ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪ್ರಮುಖ ಆಟಗಾರರು ಯುಎಇನತ್ತ ಪ್ರಯಾಣ ಬೆಳೆಸಿದ್ದಾರೆ. ಹಾಗೆಯೇ ಉಳಿದ ತಂಡಗಳ ಆಟಗಾರರು ಕೂಡ ಶೀಘ್ರದಲ್ಲೇ ದುಬೈಗೆ ತೆರಳಿದ್ದಾರೆ. ಅದಕ್ಕೂ ಮುನ್ನ ಫ್ರಾಂಚೈಸಿಗಳು ಕೂಡ ತಮ್ಮ ಆಟಗಾರರ ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅದರಂತೆ ಐಪಿಎಲ್​ನ ಉಳಿದ ಪಂದ್ಯಗಳಿಗೆ ಲಭ್ಯರಿರುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್ ( T. Natarajan) ತಿಳಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಈ ಇಬ್ಬರು ಸ್ಟಾರ್ ಆಟಗಾರರು ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ ದ್ವಿತಿಯಾರ್ಧದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

ಐಪಿಎಲ್ ಸೀಸನ್-14 ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಇಂಗ್ಲೆಂಡ್ ವಿರುದ್ದದ ಪಂದ್ಯದ ಫೀಲ್ಡಿಂಗ್ ವೇಳೆ ಭುಜಕ್ಕೆ ಬಲವಾದ ಗಾಯವಾಗಿದ್ದರಿಂದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಉಳಿದ ಪಂದ್ಯಗಳನ್ನು ಆಡುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ತಿಳಿಸಿದ್ದಾರೆ.

ಮತ್ತೊಂದೆಡೆ, ಟೀಮ್ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಎಡ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಐಪಿಎಲ್​ ಅನ್ನು ಅರ್ಧದಲ್ಲೇ ತೊರೆದಿದ್ದರು. ಬಳಿಕ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಭಾರತದಿಂದ ಐಪಿಎಲ್​ಗೆ ತೆರಳಿರುವ ಆಟಗಾರರ ಪಟ್ಟಿಯಲ್ಲಿ ನಟರಾಜನ್ ಹೆಸರನ್ನು ಕೂಡ ಎಸ್​ಆರ್​ಹೆಚ್​ ಫ್ರಾಂಚೈಸಿ ಸೇರಿಸಿಕೊಂಡಿದೆ.

ಐಪಿಎಲ್​ನ ಮೊದಲಾರ್ಧದಲ್ಲಿ ಗಾಯಗೊಂಡಿದ್ದ ಅಥವಾ ವೈಯುಕ್ತಿಕ ಕಾರಣಗಳಿಂದ ಹೊರಗುಳಿದಿದ್ದ ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಹೀಗಾಗಿ ಮೊದಲಾರ್ಧದಲ್ಲಿ ಹೊರಗುಳಿದಿದ್ದ ಆಟಗಾರರೆಲ್ಲರೂ ದ್ವಿತಿಯಾರ್ಧದಲ್ಲಿ ತಂಡವನ್ನು ಸೇರಿಕೊಳ್ಳಬಹುದಾಗಿದೆ. ಹಾಗೆಯೇ ಅವರ ಬದಲಿಯಾಗಿ ಆಯ್ಕೆ ಮಾಡಿಕೊಂಡಿದ್ದ ಆಟಗಾರರನ್ನು ಕೈ ಬಿಡುವ ಆಯ್ಕೆಯನ್ನು ಫ್ರಾಂಚೈಸಿಗೆ ನೀಡಲಾಗಿದೆ.

ಐಪಿಎಲ್​ನ ದ್ವಿತಿಯಾರ್ಧ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಉಳಿದ 31 ಪಂದ್ಯಗಳನ್ನು ಮೂರು ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಅದರಂತೆ ಶಾರ್ಜಾ, ಅಬುಧಾಬಿ ಹಾಗೂ ದುಬೈನ ಕ್ರಿಕೆಟ್ ಸ್ಟೇಡಿಯಂಲ್ಲಿ ಐಪಿಎಲ್ ಕಾದಾಟ ನಡೆಯಲಿದೆ. ಮೊದಲ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದ್ದು, ಹಾಗೆಯೇ ಅಕ್ಟೋಬರ್ 8 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಲೀಗ್ ಹಂತದ ಅಂತಿಮ ಪಂದ್ಯ ಆಡಲಿದೆ.

ಇನ್ನು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ನಡೆಯಲಿದೆ. ಅದೇ ರೀತಿ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಶಾರ್ಜಾದಲ್ಲಿ ಒಟ್ಟು 10 ಪಂದ್ಯಗಳನ್ನು ಆಯೋಜಿಸಲಿದೆ. ಹಾಗೆಯೇ 8 ಪಂದ್ಯಗಳಿಗೆ ಅಬುಧಾಬಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಸೆಪ್ಟೆಂಬರ್​ 25ರಿಂದ ಡಬಲ್ ಹೆಡರ್​ಗಳು ಆರಂಭವಾಗಲಿದ್ದು, ಒಟ್ಟು ಏಳು ಡಬಲ್ ಹೆಡರ್​ಗಳು ಇರಲಿದೆ. ಫೈನಲ್ ಪಂದ್ಯವು ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಅಕ್ಟೋಬರ್ 15 ರಂದು ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯಗಳು ನಡೆಯಲಿದ್ದು, ಎರಡು ಪಂದಗಳಿದ್ದಾಗ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ.

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

(IPL 2021- Shreyas Iyer and T Natarajan to return for remainder of IPL Phase 2)