Ipl 2022 All Team Retained Players: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

| Updated By: ಝಾಹಿರ್ ಯೂಸುಫ್

Updated on: Dec 01, 2021 | 2:23 PM

Ipl 2022 all team retained players: ಸನ್​ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಡೇವಿಡ್ ವಾರ್ನರ್ ಹಾಗೂ ರಶೀದ್ ಖಾನ್ ಅವರು ಹೊರಬಂದಿದ್ದಾರೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ರಿಲೀಸ್ ಮಾಡಿದೆ.

Ipl 2022 All Team Retained Players: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ipl 2022 all team retained players
Follow us on

Ipl 2022 All Team Retained Players: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಮೆಗಾ ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ತಮ್ಮ ರಿಟೈನ್ ಪಟ್ಟಿಯನ್ನು ಪ್ರಕಟಿಸಿದೆ.  ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಮೂವರು ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ (CSK) ತಂಡವು ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್ (Punjab Kings)​ ತಂಡದಿಂದ ಕೆಎಲ್ ರಾಹುಲ್ (KL Rahul), ಕ್ರಿಸ್ ಗೇಲ್ ರಿಲೀಸ್ ಆಗಿದ್ದರೆ, ಸನ್​ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಡೇವಿಡ್ ವಾರ್ನರ್ ಹಾಗೂ ರಶೀದ್ ಖಾನ್ ಅವರು ಹೊರಬಂದಿದ್ದಾರೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ರಿಲೀಸ್ ಮಾಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಫಾಫ್ ಡುಪ್ಲೆಸಿಸ್​ ಹಾಗೂ ಶಾರ್ದೂಲ್ ಠಾಕೂರ್ ರಿಲೀಸ್ ಆಗಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಇಂಗ್ಲೆಂಡ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಬೆನ್​ ಸ್ಟೋಕ್ಸ್​ ರನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ಪ್ರಮುಖ ಆಟಗಾರರಾದ ಸುನಿಲ್ ನರೈನ್ ಹಾಗೂ ಆಂಡ್ರೆ ರಸೆಲ್​ ರನ್ನು ಈ ಬಾರಿ ಕೂಡ ಉಳಿಸಿಕೊಂಡಿದೆ. ಹಾಗಿದ್ರೆ ಯಾವ ತಂಡ ಯಾರನ್ನು ಉಳಿಸಿಕೊಂಡಿದೆ ನೋಡೋಣ….

ಸನ್​ರೈಸರ್ಸ್​ ಹೈದರಾಬಾದ್:

1- ಕೇನ್ ವಿಲಿಯಮ್ಸನ್- 14 ಕೋಟಿ
2- ಉಮ್ರಾನ್ ಮಲಿಕ್- 4 ಕೋಟಿ
3- ಅಬ್ದುಲ್ ಸಮದ್-  4 ಕೋಟಿ

ರಾಜಸ್ಥಾನ್ ರಾಯಲ್ಸ್:

1- ಸಂಜು ಸ್ಯಾಮ್ಸನ್- 14 ಕೋಟಿ
2- ಜೋಸ್ ಬಟ್ಲರ್- 10 ಕೋಟಿ
3- ಯಶಸ್ವಿ ಜೈಸ್ವಾಲ್- 4 ಕೋಟಿ

ಮುಂಬೈ ಇಂಡಿಯನ್ಸ್​:

1- ರೋಹಿತ್ ಶರ್ಮಾ- 16 ಕೋಟಿ
2- ಜಸ್​ಪ್ರೀತ್ ಬುಮ್ರಾ- 12 ಕೋಟಿ
3- ಸೂರ್ಯಕುಮಾರ್ ಯಾದವ್​- 8 ಕೋಟಿ
4- ಕೀರನ್ ಪೊಲಾರ್ಡ್​- 6 ಕೋಟಿ

ಕೊಲ್ಕತ್ತಾ ನೈಟ್​ ರೈಡರ್ಸ್​:

1- ಆಂಡ್ರೆ ರಸೆಲ್- 12 ಕೋಟಿ
2- ವರುಣ್ ಚಕ್ರವರ್ತಿ- 8 ಕೋಟಿ
3- ವೆಂಕಟೇಶ್ ಅಯ್ಯರ್- 8 ಕೋಟಿ
4- ಸುನಿಲ್ ನರೈನ್- 6 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್​:

1- ರವೀಂದ್ರ ಜಡೇಜಾ- 16 ಕೋಟಿ
2- ಮಹೇಂದ್ರ ಸಿಂಗ್ ಧೋನಿ- 12 ಕೋಟಿ
3- ಮೊಯೀನ್ ಅಲಿ- 8 ಕೋಟಿ
4- ರುತುರಾಜ್ ಗಾಯಕ್ವಾಡ್- 6 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್​: 

1- ರಿಷಭ್ ಪಂತ್- 16 ಕೋಟಿ
2- ಪೃಥ್ವಿ ಶಾ- 12 ಕೋಟಿ
3- ಅಕ್ಷರ್ ಪಟೇಲ್- 7.5 ಕೋಟಿ
4- ಅನ್ರಿಕ್ ನೋಕಿಯಾ- 6.5 ಕೋಟಿ

ಪಂಜಾಬ್ ಕಿಂಗ್​

1- ಮಯಾಂಕ್ ಅಗರ್ವಾಲ್ – 14 ಕೋಟಿ
2- ಅರ್ಷದೀಪ್ ಸಿಂಗ್ – 4 ಕೋಟಿ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು:

1- ವಿರಾಟ್ ಕೊಹ್ಲಿ – 15 ಕೋಟಿ
2- ಗ್ಲೆನ್ ಮ್ಯಾಕ್ಸ್​ವೆಲ್- 11 ಕೋಟಿ
3- ಮೊಹಮ್ಮದ್ ಸಿರಾಜ್ – 7 ಕೋಟಿ.

 

Published On - 10:21 pm, Tue, 30 November 21