ಐಪಿಎಲ್ 2022 ಹರಾಜಿನ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜು ಅಂತ್ಯಗೊಂಡಿದೆ. ಫೆಬ್ರವರಿ 12 ಮತ್ತು 13 ರಂದು, 10 ಐಪಿಎಲ್ ಫ್ರಾಂಚೈಸಿ ಮಾಲೀಕರು ಬೆಂಗಳೂರಿನಲ್ಲಿ ದೇಶಾದ್ಯಂತ ಮತ್ತು ವಿದೇಶಗಳ ನೂರಾರು ಆಟಗಾರರನ್ನು ಬಿಡ್ ಮಾಡಿದರು. ಐಪಿಎಲ್ ಹರಾಜಿನಲ್ಲಿ 600 ಹೆಸರುಗಳನ್ನು (IPL 2022 Total Players) ಸೇರಿಸಲಾಗಿತ್ತು. ಆದರೆ ಈ ಪೈಕಿ ಕೇವಲ 203 ಆಟಗಾರರು ಮಾತ್ರ ತಂಡಗಳನ್ನು ಪಡೆದರು. ಉಳಿದವರು ಖಾಲಿ ಕೈಯಲ್ಲಿ ಉಳಿಯಬೇಕಾಯಿತು. ಈ ಬಾರಿ ಹರಾಜಿನಲ್ಲಿ ತಂಡಗಳು 67 ವಿದೇಶಿ ಆಟಗಾರರ ಮೇಲೆ (IPL 2022 Auction Foreign Players ) ಬಾಜಿ ಕಟ್ಟಿದ್ದವು. ವೆಸ್ಟ್ ಇಂಡೀಸ್‌ನ ಗರಿಷ್ಠ 14 ಆಟಗಾರರು ಹರಾಜಿನಲ್ಲಿ ಮಾರಾಟವಾದರು. ಅದೇ ಸಮಯದಲ್ಲಿ, ಆಸ್ಟ್ರೇಲಿಯಾದ 12 ಆಟಗಾರರು, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ 11-11 ಆಟಗಾರರನ್ನು ಹರಾಜು ಹಾಕಲಾಯಿತು. ಅದೇ ಸಮಯದಲ್ಲಿ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಆಟಗಾರರು ಸಹ ಐಪಿಎಲ್ 2022ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ 2022 ರ ಹರಾಜಿನಲ್ಲಿ ಭಾರತವನ್ನು ಹೊರತುಪಡಿಸಿ, 14 ದೇಶಗಳ ಒಟ್ಟು 223 ವಿದೇಶಿ ಆಟಗಾರರು ಇದ್ದರು. ಆಸ್ಟ್ರೇಲಿಯಾದಿಂದ ಗರಿಷ್ಠ 47, ವೆಸ್ಟ್ ಇಂಡೀಸ್‌ನಿಂದ 34 ಮತ್ತು ದಕ್ಷಿಣ ಆಫ್ರಿಕಾದಿಂದ 33 ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದರು. ಐಪಿಎಲ್ ತಂಡಗಳು ಈಗಾಗಲೇ ಉಳಿಸಿಕೊಂಡಿರುವ ಕೆಲವು ಆಟಗಾರರು ಕೂಡ ಇದ್ದರು. ಅಂತಹ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್‌ಜೈಂಟ್ಸ್, ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ್ದವು.
IPL 2022 ಹರಾಜಿನಲ್ಲಿ ಮಾರಾಟವಾದ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ
ಆಸ್ಟ್ರೇಲಿಯಾ
ಉಳಿಸಿಕೊಂಡಿರುವವರು- ಮಾರ್ಕಸ್ ಸ್ಟೊಯಿನಿಸ್ (ಲಕ್ನೋ) – 9.2 ಕೋಟಿ ರೂ., ಗ್ಲೆನ್ ಮ್ಯಾಕ್ಸ್‌ವೆಲ್ (ಆರ್‌ಸಿಬಿ) – 11 ಕೋಟಿ ರೂ.
ಮಾರಾಟವಾದವರು- ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಜೋಶ್ ಹ್ಯಾಜಲ್‌ವುಡ್, ಡೇನಿಯಲ್ ಸ್ಯಾಮ್ಸ್, ಟಿಮ್ ಡೇವಿಡ್, ಶಾನ್ ಅಬಾಟ್, ನಾಥನ್ ಎಲ್ಲಿಸ್, ನಾಥನ್ ಕೌಲ್ಟರ್-ನೈಲ್, ರಿಲೆ ಮೆರೆಡಿತ್, ಜೇಸನ್ ಬೆಹ್ರೆಂಡಾರ್ಫ್.
ದುಬಾರಿ ಬೆಲೆ ಪಡೆದವರು – ಟಿಮ್ ಡೇವಿಡ್ (ಮುಂಬೈ) – 8.25 ಕೋಟಿ ರೂ.
ಅಫ್ಘಾನಿಸ್ತಾನ
ಉಳಿಸಿಕೊಂಡ ಆಟಗಾರ – ರಶೀದ್ ಖಾನ್ – 15 ಕೋಟಿ ರೂ.
ಮಾರಾಟವಾದವರು– ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್, ಮೊಹಮ್ಮದ್ ನಬಿ.
ದುಬಾರಿ ಬೆಲೆ- ಮೊಹಮ್ಮದ್ ನಬಿ (ಕೆಕೆಆರ್) – 1 ಕೋಟಿ ರೂ.
ಬಾಂಗ್ಲಾದೇಶ
ಮಾರಾಟವಾದವರು– ಮುಸ್ತಾಫಿಜುರ್ ರೆಹಮಾನ್ (ದೆಹಲಿ) – 2 ಕೋಟಿ ರೂ.
ಇಂಗ್ಲೆಂಡ್
ಉಳಿಸಿಕೊಂಡವರು- ಮೊಯಿನ್ ಅಲಿ (ಸಿಎಸ್‌ಕೆ) – 8 ಕೋಟಿ ರೂ., ಜೋಸ್ ಬಟ್ಲರ್ (ರಾಜಸ್ಥಾನ) – 10 ಕೋಟಿ ರೂ.
ಮಾರಾಟವಾದವರು- ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟನ್, ಟೈಮಲ್ ಮಿಲ್ಸ್, ಅಲೆಕ್ಸ್ ಹೇಲ್ಸ್, ಜೋಫ್ರಾ ಆರ್ಚರ್, ಡೇವಿಡ್ ವಿಲ್ಲಿ, ಬೆನ್ನಿ ಹೋವೆಲ್.
ದುಬಾರಿ ಬೆಲೆ- ಲಿಯಾಮ್ ಲಿವಿಂಗ್ಸ್ಟನ್ (ಪಂಜಾಬ್) – 11.50 ಕೋಟಿ ರೂ.
ನ್ಯೂಜಿಲ್ಯಾಂಡ್
ಉಳಿಸಿಕೊಂಡವರು– ಕೇನ್ ವಿಲಿಯಮ್ಸನ್ – 14 ಕೋಟಿ ರೂ.
ಮಾರಾಟರಾದವರು- ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಟಿಮ್ ಸೀಫರ್ಟ್, ಜೇಮ್ಸ್ ನೀಶಮ್, ಫಿನ್ ಅಲೆನ್, ಟಿಮ್ ಸೌಥಿ, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ.
ದುಬಾರಿ ಬೆಲೆ- ಲಾಕಿ ಫರ್ಗುಸನ್ (ಗುಜರಾತ್) – 10 ಕೋಟಿ ರೂ.
ದಕ್ಷಿಣ ಆಫ್ರಿಕಾ
ಉಳಿಸಿಕೊಂಡ ಆಟಗಾರ- ಎನ್ರಿಖ್ ನಾರ್ಖಿಯಾ (ದೆಹಲಿ) – ರೂ 6.50 ಕೋಟಿ.
ಮಾರಾಟವಾದವರು- ಕ್ವಿಂಟನ್ ಡಿ ಕಾಕ್, ಲುಂಗಿ ಎನ್‌ಗಿಡಿ, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಡೆವಾಲ್ಡ್ ಬ್ರೆವಿಸ್, ಐಡೆನ್ ಮಾರ್ಕ್ರಾಮ್, ಮಾರ್ಕೊ ಯಾನ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ವೇನ್ ಪ್ರಿಟೋರಿಯಸ್.
ದುಬಾರಿ ಬೆಲೆ- ಕಗಿಸೊ ರಬಾಡ (ಪಂಜಾಬ್) – 9.25 ಕೋಟಿ ರೂ.
ಶ್ರೀಲಂಕಾ
ಮಾರಾಟರಾದವರು- ವನಿಂದು ಹಸರಂಗ, ಭಾನುಕಾ ರಾಜಪಕ್ಸೆ, ದುಸ್ಮಂತ ಚಮೀರ, ಮಹೇಶ ಟೀಕ್ಷಣ.
ದುಬಾರಿ ಬೆಲೆ- ವನಿಂದು ಹಸರಂಗ (ಆರ್‌ಸಿಬಿ) – 10.75 ಕೋಟಿ ರೂ.
ವೆಸ್ಟ್ ಇಂಡೀಸ್
ಉಳಿಸಿಕೊಂಡಿರುವವರು – ಕೀರಾನ್ ಪೊಲಾರ್ಡ್ -, ಆಂಡ್ರೆ ರಸೆಲ್ (ಕೆಕೆಆರ್) – ರೂ 12 ಕೋಟಿ, ಸುನಿಲ್ ನರೈನ್ (ಕೆಕೆಆರ್) – ರೂ 6 ಕೋಟಿ.
ಮಾರಾಟರಾದವರು- ಶಿಮ್ರಾನ್ ಹೆಟ್ಮೆಯರ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಡೊಮಿನಿಕ್ ಡ್ರೇಕ್ಸ್, ಓಡಿಯನ್ ಸ್ಮಿತ್, ಎವಿನ್ ಲೆವಿಸ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಫ್ಯಾಬಿಯನ್ ಅಲೆನ್, ಓಬೆಡ್ ಮೆಕಾಯ್, ಅಲ್ಜಾರಿ ಮೈಯರ್ಸ್ ಜೋಸೆಫ್, ಕೈಲ್ ಮೈಯರ್ಸ್.
ದುಬಾರಿ ಬೆಲೆ- ನಿಕೋಲಸ್ ಪೂರನ್ (ಹೈದರಾಬಾದ್) – 10.75 ಕೋಟಿ ರೂ.
ಇದನ್ನೂ ಓದಿ:IPL 2022 Auction: ಈ ಐಪಿಎಲ್ ಮೆಗಾ ಹರಾಜಿನ ಅತ್ಯಂತ ದುಬಾರಿ ಭಾರತೀಯ ಆಟಗಾರರು ಇವರೇ..!
Published On - 2:56 pm, Mon, 14 February 22