IPL 2022 Auction: ಐಪಿಎಲ್ 2022 ಹರಾಜಿನಲ್ಲಿ ಮಾರಾಟವಾಗದ ಸ್ಟಾರ್ ಆಟಗಾರರು ಇವರೇ ನೋಡಿ

IPL 2022 Auction Players Unsold List: ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸುರೇಶ್ ರೈನಾ, ಇಯಾನ್ ಮಾರ್ಗನ್, ಆ್ಯರೋನ್ ಫಿಂಚ್, ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಆಟಗಾರರು ಬಿಕರಿಯಾಗದೆ ಇರುವುದು ಅಚ್ಚರಿ ಮೂಡಿಸಿದೆ. ಹಾಗಾದ್ರೆ ಹರಾಜಾಗದೇ ಉಳಿದ ಸ್ಟಾರ್ ಆಟಗಾರರು ಯಾರು ಎಂಬದನ್ನು ನೋಡುವುದಾದರೆ.

IPL 2022 Auction: ಐಪಿಎಲ್ 2022 ಹರಾಜಿನಲ್ಲಿ ಮಾರಾಟವಾಗದ ಸ್ಟಾರ್ ಆಟಗಾರರು ಇವರೇ ನೋಡಿ
IPL 2022 Auction Unsold Players
Follow us
TV9 Web
| Updated By: Vinay Bhat

Updated on: Feb 14, 2022 | 11:40 AM

ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಹರಾಜು (IPL 2022 Auction ) ಪ್ರಕ್ರಿಯೆಗೆ ತೆರೆಬಿದ್ದಿದೆ. ಶಾಕಿಂಗ್ ಘಟನೆ, ಕೆಲ ಅಚ್ಚರಿಯ ಬಿಡ್ಡಿಂಗ್, ಸ್ಟಾರ್ ಆಟಗಾರರ ಅನ್​ಸೋಲ್ಡ್ ನಡುವೆ ಐಪಿಎಲ್ 2022 ಮೆಗಾ ಆಕ್ಷನ್ ಮುಕ್ತಾಯಗೊಂಡಿದೆ. ಒಟ್ಟು 590 ಆಟಗಾರರು ಹರಾಜಿನಲ್ಲಿ ಅಗ್ನಿಪರೀಕ್ಷೆಗೆ ಇಳಿದಿದ್ದರು. ಇದರಲ್ಲಿ 204 ಆಟಗಾರರು ಮಾತ್ರ ಸೇಲ್ ಆಗಿ 10 ಫ್ರಾಂಚೈಸಿ ಸೇರಿಕೊಂಡಿದ್ದಾರೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ (Ishan Kishan) ಅವರನ್ನು ಬರೋಬ್ಬರಿ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿಸಿದ್ದು, ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಮುಖ ಆಟಗಾರರು ಬಿಕರಿಯಾಗದೆ ಇರುವುದು ಅಚ್ಚರಿ ಮೂಡಿಸಿದೆ. ಹಾಗಾದ್ರೆ ಹರಾಜಾಗದೇ ಉಳಿದ ಸ್ಟಾರ್ ಆಟಗಾರರು ಯಾರು (Unsold Players) ಎಂಬದನ್ನು ನೋಡುವುದಾದರೆ.

2022ರ ಮೆಗಾ ಹರಾಜಿನಲ್ಲಿ ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಸುರೇಶ್ ರೈನಾ ಎರಡನೇ ಬಾರಿಕೂಡ ಅನ್​ಸೋಲ್ಡ್ ಆಗಿದ್ದು ಅನೇಕರಲ್ಲಿ ಆಘಾತ ಉಂಟುಮಾಡಿತು. ಸಿಎಸ್​ಕೆಯ ಚಿನ್ನ ತಲಾರನ್ನು ಚೆನ್ನೈ ಕೂಡ ಖರೀದಿಸಲು ಮುಂದೆಬರಲಿಲ್ಲ ಎಂಬುದು ಬೇಸರದ ಸಂಗತಿ. ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿರುವ ಸುರೇಶ್ ರೈನಾ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಹೀಗಾಗಿ ಸುರೇಶ್ ರೈನಾ ಅವರನ್ನು ಮತ್ತ ತಂಡಕ್ಕೆ ಸೇರ್ಪಡೆಗೊಳಿಸುವ ಮನಸ್ಸನ್ನು ಸಿಎಸ್‌ಕೆ ಫ್ರಾಂಚೈಸಿ ಮಾಡಿಕೊಂಡಿಲ್ಲ.

ಟಿ20 ಕ್ರಿಕೆಟ್​ನ ಸ್ಟಾರ್ ಬ್ಯಾಟರ್​ ಡೇವಿಡ್​ ಮಲನ್​, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್​, ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಸೇರಿದಂತೆ ಕೆಲವು ಹೆಸರಾಂತ​ ಆಟಗಾರರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಹರಾಜಾಗದೆ ಉಳಿದ ಮತ್ತೋರ್ವ ಪ್ರಮುಖ ಆಟಗಾರನೆಂದರೆ ಡೇವಿಡ್ ಮಿಲ್ಲರ್. ದಕ್ಷಿಣ ಆಫ್ರಿಕಾದ ಈ ಸ್ಪೋಟಕ ಆಟಗಾರ ಇತ್ತೀಚಿನ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಹಾಗಾಗಿ ಈ ಬಾರಿ ಅವರನ್ನು ಕೂಡ ಯಾವುದೇ ತಂಡ ಕೊಳ್ಳುವ ಮನಸ್ಸು ಮಾಡಿಲ್ಲ.

ಇನ್ನು ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಕೂಡ ಹರಾಜಾಗದೆ ಉಳಿದ ಆಟಗಾರರ ಪಟ್ಟಿಯಲ್ಲಿದ್ದಾರೆ. ಐಪಿಎಲ್‌ನಲ್ಲಿ ನಾಯಕತ್ವವನ್ನು ಕೂಡ ವಹಿಸಿಕೊಂಡಿರುವ ಅನುಭವವಿರುವ ಸ್ಟೀವ್ ಸ್ಮಿತ್ ಆಟಗಾರನಾಗಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಕಳೆದ ಬಾರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದ ಸ್ಟೀವ್ ಸ್ಮಿತ್ ಈ ಬಾರಿ ಮೊದಲ ದಿನದ ಹರಾಜಿನಲ್ಲಿ ಯಾವ ಫ್ರಾಂಚೈಸಿ ಕೂಡ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸುವ ಮನಸ್ಸು ಮಾಡಿಲ್ಲ.

ಇನ್ನು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ, ವದ್ಧೀಮಾನ್ ಸಾಹಾ, ಅಮಿತ್ ಮಿಶ್ರಾ, ಆಡಂ ಜಂಪಾ, ಇಮ್ರಾನ್ ತಾಹೀರ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್‌ವೇಟ್, ಚೇತೇಶ್ವರ್ ಪೂಜಾರ, ಮುರಳಿ ವಿಜಯ್, ಮಾರ್ನಸ್ ಲಾಬುಶೇನ್, ಇಶಾನ್ ಶರ್ಮಾ, ಶೆಲ್ಡನ್ ಕಾಟ್ರೆಲ್, ಆಂಡ್ರೊ ಟೈ, ಬೆನ್ ಕಟ್ಟಿಂಗ್, ಕೇನ್ ರಿಚರ್ಡಸನ್, ಪವನ್ ನೇಗಿ ಮುಂತಾದ ಆಟಗಾರರು ಹರಾಜಾಗದೆ ಉಳಿದುಕೊಂಡಿರುವ ಪ್ರಮುಖ ಆಟಗಾರರಾಗಿದ್ದಾರೆ.

IPL 2022 Auction: ಹರಾಜು ಮುಗಿದ ಬೆನ್ನಲ್ಲೇ ನಾಯಕನ ಘೊಷಣೆಗೆ ಸಿದ್ಧವಾದ ಪಂಜಾಬ್ ಕಿಂಗ್ಸ್: ಯಾರು ಗೊತ್ತೇ ಕ್ಯಾಪ್ಟನ್?

RCB Playing XI 2022: ಆರ್​​ಸಿಬಿಯಲ್ಲಿ ಸಿದ್ಧವಾಗಿದೆ ಕಣಕ್ಕಿಳಿಯುವ ಆಟಗಾರರು: ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ XI

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ