RCB Playing XI 2022: ಆರ್ಸಿಬಿಯಲ್ಲಿ ಸಿದ್ಧವಾಗಿದೆ ಕಣಕ್ಕಿಳಿಯುವ ಆಟಗಾರರು: ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ XI
IPL 2022 Auction: ಈ ಬಾರಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿ ಹರಾಜಿನಲ್ಲಿ 18 ಆಟಗಾರರನ್ನು ಖರೀದಿ ಮಾಡಿದೆ. ಸದ್ಯ ಆರ್‌ಸಿಬಿ ಫ್ಯಾಮಿಲಿಯಲ್ಲಿ ಒಟ್ಟು 21 ಆಟಗಾರರಿದ್ದಾರೆ.
ಐಪಿಎಲ್ 2022 ಮೆಗಾ ಆಕ್ಷನ್ (IPL 2022 Auction) ಮುಕ್ತಾಯಗೊಂಡಿದ್ದು ಎಲ್ಲ 10 ಫ್ರಾಂಚೈಸಿಗಳು ತಮಗೆ ಅಗತ್ಯವಿರುವ ಬಲಿಷ್ಠ ಆಟಗಾರರನ್ನು ಖರೀದಿ ಮಾಡಿದೆ. ಈ ಬಾರಿಯ ಹರಾಜಿನಲ್ಲಿ 204 ಆಟಗಾರರು ಸೇಲ್ ಆದರು. ಈ ಬಾರಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿ ಹರಾಜಿನಲ್ಲಿ 18 ಆಟಗಾರರನ್ನು ಖರೀದಿ ಮಾಡಿದೆ. ಸದ್ಯ ಆರ್‌ಸಿಬಿ ಫ್ಯಾಮಿಲಿಯಲ್ಲಿ ಒಟ್ಟು 21 ಆಟಗಾರರಿದ್ದಾರೆ. ದೊಡ್ಡ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಇದೀಗ 18 ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟಿದೆ. ಮೊದಲ ದಿನದ ಹರಾಜಿನಲ್ಲಿ ಕೆಲ ಆಟಗಾರರಿಗೆ ನೀಡಿದ ಮೊತ್ತದ ಬಗ್ಗೆ ಅಭಿಮಾನಿಗಳು ತೃಪ್ತಿಯನ್ನು ಹೊಂದಿರಲಿಲ್ಲ. ಆದರೆ ಎರಡನೇ ದಿನ ಅಲ್ಪ ಮೊತ್ತವನ್ನು ಪರ್ಸ್‌ನಲ್ಲಿ ಹೊಂದಿದ್ದರೂ ಕೆಲ ಉತ್ತಮ ನಿರ್ಧಾರಗಳನ್ನು ಆರ್‌ಸಿಬಿ (RCB) ಫ್ರಾಂಚೈಸಿ ಮಾಡಿತು.
ಮೆಗಾ ಆಕ್ಷನ್ನ ಮೊದಲ ದಿನ 7 ಕೋಟಿ ಕೊಟ್ಟು ಫಾಫ್ ಡು ಪ್ಲೆಸಿಸ್ ಅವರನ್ನ ಮೊದಲ ಆಟಗಾರನಾಗಿ ಖರೀದಿ ಮಾಡಿತು. ಬಳಿಕ ಬರೋಬ್ಬರಿ 10.75 ಕೋಟಿಗೆ ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಗತ್ಯವಿರುವ ಕಾರಣ ದಿನೇಶ್ ಕಾರ್ತಿಕ್ ಅವರನ್ನು 5.50 ಕೋಟಿ ಕೊಟ್ಟು ಪಡೆದುಕೊಂಡರೆ, ಜೋಶ್ ಹೇಜಲ್‌ವುಡ್ 7.75 ಕೋಟಿ, ಶಹಬಾಜ್ ಅಹ್ಮದ್ 2.40 ಕೋಟಿ, ಅನುಜ್ ರಾವತ್ 3.4 ಕೋಟಿ, ಆಕಾಶ್ ದೀಪ್ ಸಿಂಗ್ 20 ಲಕ್ಷ ರೂ., ಮಹಿಪಾಲ್ ಲೊಮ್ರೋರ್ 95 ಲಕ್ಷ ರೂ., ಫಿನ್ ಅಲೆನ್ 80 ಲಕ್ಷ ರೂ., ಶೆರ್ಫೇನ್ ರುದರ್‌ಫೋರ್ಡ್ 1 ಕೋಟಿ ರೂ., ಜೇಸನ್ ಬೆಹ್ರೆಂಡಾರ್ಫ್ ರೂ. 75 ಲಕ್ಷ, ಸುಯಶ್ ಪ್ರಭುದೇಸಾಯಿ ರೂ. 30 ಲಕ್ಷ, ಚಾಮಾ ಮಿಲಿಂದ್ ರೂ. 25 ಲಕ್ಷ, ಅನೀಶ್ವರ್ ಗೌತಮ್ ರೂ. 20 ಲಕ್ಷ, ಕರ್ಣ್ ಶರ್ಮಾ 50 ಲಕ್ಷ, ಲುವ್ನಿತ್ ಸಿಸೋಡಿಯಾ 20 ಲಕ್ಷ, ಸಿದ್ಧಾರ್ಥ್ ಕೌಲ್ 75 ಲಕ್ಷ, ಡೇವಿಡ್ ವಿಲ್ಲೆ 2 ಕೋಟಿಗೆ ತನ್ನ ತಂಡಕ್ಕೆ ಆಯ್ಕೆ ಮಾಡಿತು.
Introducing to you, the #ClassOf2022 ready to #PlayBold!??
Bring on #IPL2022! ??#WeAreChallengers #IPLMegaAuction #IPLAuction pic.twitter.com/qcEcna24y8
— Royal Challengers Bangalore (@RCBTweets) February 13, 2022
ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಬಗ್ಗೆ ನೋಡುವುದಾದರೆ, ಆರಂಭಿಕರಾಗಿ ಫಾಫ್ ಡುಪ್ಲೆಸಿಸ್ ಸ್ಥಾನ ಖಚಿತ. ಫಾಫ್ ಜೊತೆ ಬೇರೆ ಓಪನರ್ ಇಲ್ಲದ ಕಾರಣ ಈ ಬಾರಿ ಕೂಡ ವಿರಾಟ್ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ 95 ಲಕ್ಷ ರೂ. ನೀಡಿ ಖರೀದಿ ಮಾಡಿರುವ ಮಹಿಪಾಲ್ ಲೊಮ್ರೋರ್ ಕಣಕ್ಕಿಳಿಯಲಿದ್ದಾರೆ. ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ಗೆ ನಾಲ್ಕನೇ ಸ್ಥಾನ ಹೇಳಿಮಾಡಿಸಿದ್ದು, ಇವರು ಕಳೆದ ಸೀಸನ್ನಲ್ಲೂ ಇದೇ ಕ್ರಮಾಂಕದಲ್ಲಿ ಆಡಿ ಭರ್ಜರಿ ಯಶಸ್ಸು ಕಂಡಿದ್ದರು.
ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಇರಲಿದ್ದು ಇವರು ಫಿನಿಶರ್ ಜವಾಬ್ದಾರಿ ಹೊರಲಿದ್ದಾರೆ. ಅನುಜ್ ರಾವತ್ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇವರುಕೂಡ ಅಗತ್ಯವಿದ್ದರೆ ಕೀಪಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆಲ್ರೌಂಡರ್ ವಾನಿಂದು ಹಸರಂಗ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಮತ್ತೊಬ್ಬ ಆಲ್ರೌಂಡರ್ ಹರ್ಷಲ್ ಪಟೇಲ್. ಕಳೆದ ಸೀಸನ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತು ಸಾಧನೆ ಮಾಡಿದ್ದ ಇವರ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆಗಳಿವೆ. ನಂತರದಲ್ಲಿ ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹೇಜಲ್‌ವುಡ್ ಕಾಣಿಸಿಕೊಳ್ಳಲಿದ್ದಾರೆ.
IPL Auction 2022: ಐಪಿಎಲ್ 2022 ಹರಾಜಿನ ಬಳಿಕ ಎಲ್ಲ 10 ತಂಡಗಳು ಹೇಗಿವೆ?: ಇಲ್ಲಿದೆ ಸಂಪೂರ್ಣ ಮಾಹಿತಿ