AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2022: ಐಪಿಎಲ್ 2022 ಹರಾಜಿನ ಬಳಿಕ ಎಲ್ಲ 10 ತಂಡಗಳು ಹೇಗಿವೆ?: ಇಲ್ಲಿದೆ ಸಂಪೂರ್ಣ ಮಾಹಿತಿ

TATA IPL 2022 Full Squad: ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022 ಆಕ್ಷನ್​ನಲ್ಲಿ 204 ಆಟಗಾರರು 10 ಫ್ರಾಂಚೈಸಿ ಸೇರಿಕೊಂಡರು. ಇದೀಗ ಐಪಿಎಲ್ 2022 ಕ್ಕೆ 10 ಫ್ರಾಂಚೈಸಿ ತನಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿ ಟೂರ್ನಿಗೆ ಸಜ್ಜಾಗಿ ನಿಂತಿದೆ. ಎಲ್ಲ 10 ತಂಡದಲ್ಲಿ ಈಗ ಯಾವ ಆಟಗಾರರಿದ್ದಾರೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

IPL Auction 2022: ಐಪಿಎಲ್ 2022 ಹರಾಜಿನ ಬಳಿಕ ಎಲ್ಲ 10 ತಂಡಗಳು ಹೇಗಿವೆ?: ಇಲ್ಲಿದೆ ಸಂಪೂರ್ಣ ಮಾಹಿತಿ
IPL 2022
TV9 Web
| Updated By: ಪೃಥ್ವಿಶಂಕರ|

Updated on:Feb 14, 2022 | 2:24 PM

Share

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ ನಡೆದ ಐಪಿಎಲ್ 2022 ಹರಾಜು (IPL Auction 2022) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಆಕ್ಷನ್​ನಲ್ಲಿ 204 ಆಟಗಾರರು 10 ಫ್ರಾಂಚೈಸಿ ಸೇರಿಕೊಂಡರು. ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು ವಿಶ್ವಾದ್ಯಂತ 1214 ಆಟಗಾರರು ಹೆಸರು ನೊಂದಾಯಿಸಿದ್ದರು. ಇದರಲ್ಲಿ 896 ಭಾರತೀಯ ಆಟಗಾರರಾಗಿದ್ದರೆ, 318 ವಿದೇಶಿ ಆಟಗಾರರು. ಈ ಪಟ್ಟಿಯನ್ನು ಬಿಸಿಸಿಐ (BCCI) ಪರಿಷ್ಕರಣೆ ಮಾಡಿ 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿತು. ಇದರಲ್ಲಿ 370 ಭಾರತೀಯ ಆಟಗಾರರು, 220 ವಿದೇಶಿ ಆಟಗಾರರು. ಮೊದಲ ದಿನ ಒಟ್ಟಾರೆ 74 ಆಟಗಾರರು ಮಾರಾಟಗೊಂಡರು. 54 ಭಾರತೀಯ ಆಟಗಾರರು ಮತ್ತು 20 ವಿದೇಶಿ ಆಟಗಾರರು. ಎರಡನೇ ದಿನ ಮೂಲ ಆಟಗಾರರಿಗೆ ಬೆಂಬಲವಾಗುವ ಆಟಗಾರರ ಖರೀದಿಗೆ ಮುಂದಾದವು. ಹೀಗಾಗಿ ಬರೋಬ್ಬರಿ 130 ಆಟಗಾರರು ಎರಡನೇ ದಿನ ಸೇಲ್ ಆದರು. ಹರಾಜಿನಲ್ಲಿ ಬಿಕರಿಯಾದ ಒಟ್ಟು 204 ಆಟಗಾರರ ಸಲುವಾಗಿ 10 ಫ್ರಾಂಚೈಸಿಗಳು ದಾಖಲೆಯ 551.7 ಕೋಟಿ ರೂ. ಗಳ ಹಣದ ಹೊಳೆಯನ್ನು ಹರಿಸಿವೆ. ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್‌ನಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ (15.25 ಕೋಟಿ ರೂ.) ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಇದೀಗ ಐಪಿಎಲ್ 2022 ಕ್ಕೆ 10 ಫ್ರಾಂಚೈಸಿ ತನಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿ ಟೂರ್ನಿಗೆ ಸಜ್ಜಾಗಿ ನಿಂತಿದೆ. ಎಲ್ಲ 10 ತಂಡದಲ್ಲಿ ಈಗ ಯಾವ ಆಟಗಾರರಿದ್ದಾರೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ (IPL 2022 Full Squad).

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು:

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವಾನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜಾಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಾಶ್‌ ಪ್ರಭುದೇಸಾಯ್, ಚಾಮಾ ಮಿಲಿಂದ್, ಅನೀಶ್ವರ್‌ ಗೌತಮ್, ಕರಣ್‌ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ಲವ್ನೀತ್ ಸಿಸೋಡಿಯಾ.

ಚೆನ್ನೈ ಸೂಪರ್‌ ಕಿಂಗ್ಸ್‌:

ಮಹೇಂದ್ರ ಸಿಂಗ್ ಧೋನಿ (ನಾಯಕ), ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆ.ಎಂ, ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಮಹೀಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೇನ್‌ ಪ್ರೆಟೋರಿಯಸ್‌, ಮಿಚೆಲ್‌ ಸ್ಯಾಂಟ್ನರ್‌, ಆಡಮ್ ಮಿಲ್ನ್, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜಾರ್ಡನ್, ಕೆ ಭಗತ್ ವರ್ಮಾ.

ಡೆಲ್ಲಿ ಕ್ಯಾಪಿಟಲ್ಸ್‌:

ಪೃಥ್ವಿ ಶಾ, ಎನ್ರಿಕ್ ನಾರ್ಕಿಯ, ರಿಷಭ್ ಪಂತ್ (ನಾಯಕ), ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದುಲ್ ಠಾಕೂರ್, ಮುಸ್ತಾಫಿಝುರ್ ರೆಹಮಾನ್, ಕುಲ್ದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಝ್ ಖಾನ್, ಕಮಲೇಶ್ ನಾಗರಕೋಟಿ, ಕೆ.ಎಸ್. ಭರತ್, ಮಂದೀಪ್ ಸಿಂಗ್, ಖಲೀಲ್ ಸಕಾರಿಯಾ, ಲಲಿತ್ ಯಾದವ್, ರಿಪಲ್ ಪಟೇಲ್, ಯಶ್ ಧುಲ್, ರೋವ್ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್ಗಿಡಿ, ಟಿಮ್ ಸೀಫರ್ಟ್, ವಿಕಿ ಓಸ್ತ್ವಾಲ್.

ಗುಜರಾತ್‌ ಟೈಟನ್ಸ್‌:

ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಜೇಸನ್ ರಾಯ್, ಲಾಕಿ ಫರ್ಗ್ಯೂಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್. ಸಾಯಿ ಕಿಶೋರ್, ಡಾಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜರ್ರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ವರುಣ್ ಆರೋನ್.

ಕೋಲ್ಕತಾ ನೈಟ್‌ ರೈಡರ್ಸ್‌:

ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ನಿತೀಶ್ ರಾಣಾ, ಪ್ಯಾಟ್ ಕಮಿನ್ಸ್, ಶ್ರೇಯಸ್ ಅಯ್ಯರ್, ಶಿವಂ ಮಾವಿ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅನುಕುಲ್ ರಾಯ್, ರಸಿಖ್ ದಾರ್, ಬಾಬಾ ಇಂದ್ರಜಿತ್, ಚಮಿಕಾ ಕರುಣಾರತ್ನೆ, ಅಭಿಜೀತ್‌ ತೋಮರ್‌, ಪ್ರಥಮ್‌ ಸಿಂಗ್‌, ಅಶೋಕ್‌ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್, ಟಿಮ್ ಸೌಥಿ, ರಮೇಶ್ ಕುಮಾರ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಅಮನ್ ಖಾನ್.

ಲಖನೌ ಸೂಪರ್‌ ಜಯಂಟ್ಸ್‌:

ಕೆ ಎಲ್ ರಾಹುಲ್ (ನಾಯಕ), ರವಿ ಬಿಷ್ಣೋಯ್, ಮಾರ್ಕಸ್ ಸ್ಟೋಯ್ನಿಸ್‌, ದೀಪಕ್ ಹೂಡ, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಕ್ವಿಂಟನ್ ಡಿಕಾಕ್, ಕೃಣಾಲ್ ಪಾಂಡ್ಯ, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ಸಿಂಗ್ ರಜಪೂತ್, ಕೃಷ್ಣಪ್ಪ ಗೌತಮ್, ದುಷ್ಮಾಂತ ಚಮೀರ, ಶಹಬಾಜ್ ನದೀಮ್, ಮನನ್ ವೋಹ್ರ, ಮೊಹ್ಸಿನ್ ಖಾನ್, ಆಯುಷ್ ಬದೋನಿ, ಕೈಲ್ ಮೇಯರ್ಸ್, ಕರಣ್ ಶರ್ಮಾ, ಎವಿನ್ ಲೂಯಿಸ್‌, ಮಯಾಂಕ್ ಯಾದವ್, ಬಿ ಸಾಯಿ ಸುದರ್ಶನ್.

ಪಂಜಾಬ್‌ ಕಿಂಗ್ಸ್‌:

ಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಹರ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್‌ ಮಂಕಡ್, ವೈಭವ್ ಅರೋರಾ, ರಿತಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತಾಯ್ದೆ, ಭಾನುಕಾ ರಾಜಪಕ್ಸ, ಬೆನ್ನಿ ಹೋವೆಲ್.

ಮುಂಬೈ ಇಂಡಿಯನ್ಸ್‌:

ರೋಹಿತ್‌ ಶರ್ಮಾ (ನಾಯಕ), ಜಸ್‌ಪ್ರೀತ್‌ ಬುಮ್ರಾ, ಕೀರೊನ್‌ ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಬೆಸಿಲ್ ಥಂಪಿ, ಮುರುಗನ್ ಅಶ್ವಿನ್, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಾಂಡೆ, ಎನ್. ತಿಲಕ್ ವರ್ಮಾ, ಸಂಜಯ್ ಯಾದವ್, ಜೋಫ್ರ ಆರ್ಚರ್, ಡೇನಿಯೆಲ್ ಸ್ಯಾಮ್ಸ್, ಟೈಮಲ್ ಮಿಲ್ಸ್, ಟಿಮ್ ಡೇವಿಡ್, ರೈಲಿ ಮೆರೆಡಿತ್, ಮೊಹಮ್ಮದ್‌ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ರಮಣದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫೇಬಿನ್ ಅಲೆನ್.

ರಾಜಸ್ಥಾನ್‌ ರಾಯಲ್ಸ್‌:

ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯೆರ್, ಪ್ರಸಿಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೆಡ್‌ ಮೆಕಾಯ್, ಅನುನಯ್ ಸಿಂಗ್, ಕುಲ್ದೀಪ್ ಸೇನ್, ಕರುಣ್ ನಾಯರ್‌, ಧ್ರುವ್ ಜುರೆಲ್, ತೇಜಸ್ ಬರೋಕ, ಕುಲ್ದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನೇಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ಯಾರಿಲ್ ಮಿಚೆಲ್.

ಸನ್‌ರೈಸರ್ಸ್‌ ಹೈದರಾಬಾದ್‌:

ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ನಿಕೋಲಸ್ ಪೂರನ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಪ್ರಿಯಮ್ ಗರ್ಗ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ, ರೊಮಾರಿಯೊ ಶೆಫರ್ಡ್, ಶೇನ್‌ ಅಬಾಟ್, ಆರ್ ಸಮರ್ಥ್, ಶಶಾಂಕ್ ಸಿಂಗ್, ಸೌರಭ್ ದುಬೆ, ವಿಷ್ಣು ವಿನೋದ್.

Published On - 7:28 am, Mon, 14 February 22