AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: 30 ಲಕ್ಷ ರೂ.ಗೆ ಹರಾಜಾದ ಅರ್ಜುನ್ ತೆಂಡೂಲ್ಕರ್

Arjun Tendulkar: ಅರ್ಜುನ್ ತೆಂಡೂಲ್ಕರ್ ಕೂಡ ಈ ಹಿಂದೆ ಭಾರತೀಯ ಅಂಡರ್ 19 ಕ್ರಿಕೆಟ್ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ನೆಟ್ ಬೌಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

IPL 2022 Auction: 30 ಲಕ್ಷ ರೂ.ಗೆ ಹರಾಜಾದ ಅರ್ಜುನ್ ತೆಂಡೂಲ್ಕರ್
arjun tendulkar
TV9 Web
| Updated By: ಝಾಹಿರ್ ಯೂಸುಫ್|

Updated on: Feb 13, 2022 | 8:52 PM

Share

ಐಪಿಎಲ್ ಸೀಸನ್ 15 ಮೆಗಾ ಹರಾಜಿಗಾಗಿ ಅರ್ಜುನ್ ತೆಂಡೂಲ್ಕರ್ 30 ಲಕ್ಷ ರೂ.ಗೆ ಹರಾಜಾಗಿದ್ದಾರೆ. ಈ ಬಾರಿ ಕೂಡ ಸಚಿನ್ ತೆಂಡೂಲ್ಕರ್ ಪುತ್ರನನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ. ಅರ್ಜುನ್ ಐಪಿಎಲ್ 2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರೂ, ಯಾವುದೇ ಪಂದ್ಯವಾಡಿರಲಿಲ್ಲ. ಈ ಬಾರಿ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಅರ್ಜುನ್ ಅವರಿಗಾಗಿ ಗುಜರಾತ್ ಟೈಟನ್ಸ್ ಬಿಡ್ ಮಾಡಿತು. ಆದರೆ 30 ಲಕ್ಷ ರೂ. ಘೋಷಿಸುವ ಮೂಲಕ ಮುಂಬೈ ಇಂಡಿಯನ್ಸ್ ತನ್ನದಾಗಿಸಿಕೊಂಡಿತು.

22 ವರ್ಷದ ಅರ್ಜುನ್ ತೆಂಡೂಲ್ಕರ್ ಎಡಗೈ ಆಲ್​ರೌಂಡರ್. ಕಳೆದ ಸೀಸನ್​ನಲ್ಲಿ ಮುಂಬೈ ತಂಡದಲ್ಲಿದ್ದರೂ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅಲ್ಲದೆ ಗಾಯದ ಸಮಸ್ಯೆಯಿಂದ ಅರ್ಜುನ್ ಟೂರ್ನಿಯಿಂದ ಹೊರಗುಳಿದಿದ್ದರು. ಅರ್ಜುನ್ ತೆಂಡೂಲ್ಕರ್ ಇದುವರೆಗೆ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಕೇವಲ ಒಂದು ಟಿ20 ಪಂದ್ಯ ಆಡಿದ್ದಾರೆ. ಈ ವೇಳೆ ಎರಡು ವಿಕೆಟ್‌ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ 2022 ರ ರಣಜಿ ಟ್ರೋಫಿಗಾಗಿ ಮುಂಬೈ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನೆಟ್​ ಬೌಲರ್​: ಅರ್ಜುನ್ ತೆಂಡೂಲ್ಕರ್ ಕೂಡ ಈ ಹಿಂದೆ ಭಾರತೀಯ ಅಂಡರ್ 19 ಕ್ರಿಕೆಟ್ ತಂಡದ ಭಾಗವಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ನೆಟ್ ಬೌಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಮೊದಲು, ಅವರು ಇಂಗ್ಲೆಂಡ್ ತಂಡದಲ್ಲಿ ನೆಟ್ ಬೌಲರ್ ಆಗಿ ಕೆಲಸ ಮಾಡಿದರು.

ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!

ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

(Arjun Tendulkar IPL 2022 Mumbai Indians Auction buys the India player for the auction price of 30 lakh Rupees)