IPL 2022: ಇದುವೇ RCB ತಂಡದ ದೊಡ್ಡ ಪ್ರಾಬ್ಲಂ..!

| Updated By: ಝಾಹಿರ್ ಯೂಸುಫ್

Updated on: Apr 18, 2022 | 3:26 PM

IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್.

IPL 2022: ಇದುವೇ RCB ತಂಡದ ದೊಡ್ಡ ಪ್ರಾಬ್ಲಂ..!
RCB
Follow us on

IPL 2022: ಐಪಿಎಲ್ ಸೀಸನ್​ 15 ನಲ್ಲಿ ಆರ್​ಸಿಬಿ (RCB) ತಂಡವು 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಎಂದರೆ ತಪ್ಪಾಗಲಾರದು. ಅದರಲ್ಲೂ ಮ್ಯಾಕ್ಸ್​ವೆಲ್, ಶಹಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡ್ತಿದ್ದಾರೆ. ಆದರೆ ಸಮಸ್ಯೆ ಇರುವುದು ಆರಂಭಿಕರದ್ದು. ಏಕೆಂದರೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ಅನೂಜ್ ರಾವತ್​ರಿಂದ ನಿರೀಕ್ಷಿತ ಆಟ ಮೂಡಿಬರುತ್ತಿಲ್ಲ. ಅದರಲ್ಲೂ ಅನೂಜ್ ರಾವತ್ ಕಳೆದ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 125 ರನ್​ ಮಾತ್ರ. ಹಾಗೆಯೇ 125 ರನ್ ಬಾರಿಸಲು ತೆಗೆದುಕೊಂಡಿದ್ದು 111 ರನ್​ ಬಾಲ್​ಗಳನ್ನು ಎಂಬುದು ವಿಶೇಷ. ಅಂದರೆ ಪವರ್​ಪ್ಲೇನಲ್ಲಿ ಅನೂಜ್ ರಾವತ್ ಬಿರುಸಿನ ಬ್ಯಾಟಿಂಗ್ ಮಾಡ್ತಿಲ್ಲ.

ಪಂಜಾಬ್ ಕಿಂಗ್ಸ್​ ವಿರುದ್ದದ ಮೊದಲ ಪಂದ್ಯದಲ್ಲಿ 21 ರನ್​ಗಳಿಸಿದ್ದ ಅನೂಜ್, ಕೆಕೆಆರ್​ ವಿರುದ್ದದ 2ನೇ ಪಂದ್ಯದಲ್ಲಿ ಝಿರೋಗೆ ಔಟಾಗಿದ್ದರು. ಇನ್ನು 3ನೇ ಪಂದ್ಯದಲ್ಲಿ 26 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದಾಗ್ಯೂ ಮುಂಬೈ ಇಂಡಿಯನ್ಸ್ ವಿರುದ್ದ ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ಆ ಬಳಿಕ ಸಿಎಸ್​ಕೆ ವಿರುದ್ದ ಕೇವಲ 12 ರನ್​ಗೆ ಔಟಾಗಿದ್ದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮತ್ತೆ ಝಿರೋಗೆ ಔಟ್ ಆಗಿದ್ದರು.

ಅಂದರೆ ಅನೂಜ್ ರಾವತ್ 6 ಇನಿಂಗ್ಸ್​ನಲ್ಲಿ ಕೇವಲ ಒಂದು ಬಾರಿ ಮಾತ್ರ 30 ಕ್ಕಿಂತ ಅಧಿಕ ರನ್​ಗಳಿಸಿದ್ದಾರೆ. ಇದೀಗ ಆರ್​ಸಿಬಿ ತಂಡದ ಓಪನರ್​ ಅನ್ನು ಬದಲಿಸಬೇಕಿದ್ದರೂ ಭಾರತೀಯ ಆರಂಭಿಕ ಆಟಗಾರ ತಂಡದಲ್ಲಿಲ್ಲ. ಒಂದು ವೇಳೆ ಫಿನ್ ಅಲೆನ್​ಗೆ ಅವಕಾಶ ನೀಡಿದ್ರೆ ಒಬ್ಬ ವಿದೇಶಿ ಆಟಗಾರನನ್ನು ಹೊರಗಿಡಬೇಕಾಗುತ್ತದೆ. ಆದರೆ ತಂಡದಲ್ಲಿರುವ ವಿದೇಶಿ ಆಟಗಾರರು ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಒಟ್ಟಿನಲ್ಲಿ ಅನೂಜ್ ರಾವತ್ ಸತತ ಫೇಲ್ ಆಗುತ್ತಿರುವುದು ಇದೀಗ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

 

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ