IPL 2022: ಸ್ಟೈಲಿಷ್ಟ್ ಜೆರ್ಸಿಯನ್ನು ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್

| Updated By: ಝಾಹಿರ್ ಯೂಸುಫ್

Updated on: Mar 12, 2022 | 5:03 PM

Delhi Capitals, Mumbai Indians New Jersey: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೆಂಪು ಮತ್ತು ನೀಲಿ ಬಣ್ಣಗಳ ಮಿಶ್ರಣವನ್ನು ಹೊಂದಿರುವ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಕೆಂಪು ಗ್ರೇಡಿಯಂಟ್ ಜೆರ್ಸಿಯ ಎಡಭಾಗಕ್ಕೆ ನೀಡಲಾಗಿದ್ದು, ಹಾಗೆಯೇ ಬಲಭಾಗದಲ್ಲಿ ನೀಲಿ ಬಣ್ಣವಿದೆ.

IPL 2022: ಸ್ಟೈಲಿಷ್ಟ್ ಜೆರ್ಸಿಯನ್ನು ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್
Delhi Capitals, Mumbai Indians New Jersey
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಸೀಸನ್ 15 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಟೂರ್ನಿಗೆ ಬೇಕಾದ ಸಿದ್ದತೆಗಳನ್ನು ಆರಂಭಿಸಿದೆ. ಇದರ ಮೊದಲ ಹಂತವಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಉಭಯ ತಂಡಗಳು ಈ ಹಿಂದಿನ ಬಣ್ಣವನ್ನೇ ಮುಂದುವರೆಸಿದ್ದು, ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್​ ಈ ಹಿಂದಿನ ಜೆರ್ಸಿಗಿಂತ ತುಸು ವಿಭಿನ್ನ ವಿನ್ಯಾಸದಲ್ಲಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೆಂಪು ಮತ್ತು ನೀಲಿ ಬಣ್ಣಗಳ ಮಿಶ್ರಣವನ್ನು ಹೊಂದಿರುವ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಕೆಂಪು ಗ್ರೇಡಿಯಂಟ್ ಜೆರ್ಸಿಯ ಎಡಭಾಗಕ್ಕೆ ನೀಡಲಾಗಿದ್ದು, ಹಾಗೆಯೇ ಬಲಭಾಗದಲ್ಲಿ ನೀಲಿ ಬಣ್ಣವಿದೆ. ಇನ್ನು ತಂಡದ ಲೋಗೋವಾಗಿರುವ ಸಿಂಹದ ಮುಖವನ್ನು ಜೆರ್ಸಿಯ ಮಧ್ಯಭಾಗದಲ್ಲಿ ಇರಿಸಲಾಗಿದೆ. ಒಟ್ಟಿನಲ್ಲಿ ಈ ಹಿಂದಿಗಿಂತ ಈ ಬಾರಿ ವಿಭಿನ್ನ ಜೆರ್ಸಿಯ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಗಮನ ಸೆಳೆಯುತ್ತಿದೆ.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಮ್ಮ ಸಾಂಪ್ರದಾಯಿಕವಾಗಿ ನೀಲಿ ಕಿಟ್‌ನೊಂದಿಗೆ ಮುಂದುವರಿಯಲಿದೆ. ಜೆರ್ಸಿಯ ಕೆಳಗಿನ ಅರ್ಧವು ಗಾಢವಾದ ಗ್ರೇಡಿಯಂಟ್ ಅನ್ನು ಹೊಂದಿದೆ. ಹಾಗೆಯೇ ಜೆರ್ಸಿಯ ಬದಿಗಳಲ್ಲಿ ಚಿನ್ನದ ಪಟ್ಟೆಗಳನ್ನು ನೀಡಿರುವುದು ವಿಶೇಷ. ಇನ್ನು ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಪ್ರಾಯೋಜಕರು ಕೂಡ ಬದಲಾಗಿದ್ದು, ಅದರಂತೆ ಸ್ಲೈಸ್ ಕಂಪೆನಿಯ ಲೋಗೋ ಮುಂಭಾಗದಲ್ಲಿ ನೀಡಲಾಗಿದೆ. ಇದಾಗ್ಯೂ ಕಳೆದ ಬಾರಿಯ ಜೆರ್ಸಿಯನ್ನೇ ಈ ಬಾರಿಯ ಜೆರ್ಸಿ ಹೋಲುತ್ತಿದೆ.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಬೆಸಿಲ್ ಥಂಪಿ, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಾಂಡೆ, ಎನ್ ತಿಲಕ್ ವರ್ಮಾ, ಸಂಜಯ್ ಯಾದವ್, ಜೋಫ್ರಾ ಆರ್ಚರ್, ಡೇನಿಯಲ್ ಸಾಮ್ಸ್, ಟೈಮಲ್ ಮಿಲ್ಸ್, ಟಿಮ್ ಮಿಲ್ಸ್ , ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ರಮಣದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಫ್ಯಾಬಿಯನ್ ಅಲೆನ್, ಆರ್ಯನ್ ಜುಯಲ್.

ಡೆಲ್ಲಿ ಕ್ಯಾಪಿಟಲ್ಸ್​ ತಂಡ: ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಜ್ ಖಾನ್, ಕೆಎಸ್ ಭರತ್, ಕಮಲೇಶ್ ನಾಗರಕೋಟಿ, ಮನದೀಪ್ ಸಿಂಗ್, ಖಲೀಲ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್‌ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ವಿಕ್ಕಿ ಓಸ್ತ್ವಾಲ್, ಅನ್ರಿಕ್ ನೋಕಿಯಾ

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(IPL 2022: Delhi Capitals, Mumbai Indians launch new kits for new season)

Published On - 4:14 pm, Sat, 12 March 22