IND vs WI, WWC 2022: ಧೋನಿ- ಕೊಹ್ಲಿ.. ಸ್ಮೃತಿ- ಹರ್ಮನ್‌ಪ್ರೀತ್! ಜರ್ಸಿ ನಂಬರ್ 7 ಮತ್ತು 18 ರ ಮ್ಯಾಜಿಕ್ ಇದು
IND vs WI, WWC 2022: 21 ನೇ ಶತಮಾನದಲ್ಲಿ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಆಳಿದ ಭಾರತೀಯ ಕ್ರಿಕೆಟ್‌ನ ಅದೇ ಜರ್ಸಿಗಳಲ್ಲಿ ಒಂದು ಜರ್ಸಿ ನಂಬರ್ 7 ಮತ್ತು ಇನ್ನೊಂದು ಜರ್ಸಿ ಸಂಖ್ಯೆ 18. ಈ ಎರಡು ಜೆರ್ಸಿಗಳನ್ನು ತೋಡುವ ಇಬ್ಬರು ಆಟಗಾರರು ಇಡೀ ವಿಶ್ವ ಕ್ರಿಕೆಟ್ ಅನ್ನು ಬೆರಗುಗೊಳಿಸಿದ್ದರು.
90ರ ದಶಕದಲ್ಲಿ ಕೇವಲ 10ನೇ ಸಂಖ್ಯೆಯ ಜರ್ಸಿ ಧರಿಸುವ ಭಾರತೀಯ ಕ್ರಿಕೆಟರ್ ಬಗ್ಗೆ ಮಾತ್ರ ಚರ್ಚೆಯಾಗುತ್ತಿತ್ತು. ಏಕೆಂದರೆ, ಅವರು ಟೀಂ ಇಂಡಿಯಾದ ಸಂಪೂರ್ಣ ಹೊರೆಯನ್ನು ಹೊರುತ್ತಿದ್ದರು. ಹೆಸರು ಸಚಿನ್ ತೆಂಡೂಲ್ಕರ್ (Sachin Tendulkar). ನಂತರದ ದಿನಗಳಲ್ಲಿ ಕೆಲವರು ಸುದ್ದಿ ಮಾಡಿದರು ಮತ್ತು ಕೆಲವರು ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದರು. 21 ನೇ ಶತಮಾನದಲ್ಲಿ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಆಳಿದ ಭಾರತೀಯ ಕ್ರಿಕೆಟ್‌ನ ಅದೇ ಜರ್ಸಿಗಳಲ್ಲಿ ಒಂದು ಜರ್ಸಿ ನಂಬರ್ 7 ಮತ್ತು ಇನ್ನೊಂದು ಜರ್ಸಿ ಸಂಖ್ಯೆ 18. ಈ ಎರಡು ಜೆರ್ಸಿಗಳನ್ನು ತೋಡುವ ಇಬ್ಬರು ಆಟಗಾರರು ಇಡೀ ವಿಶ್ವ ಕ್ರಿಕೆಟ್ ಅನ್ನು ಬೆರಗುಗೊಳಿಸಿದ್ದರು. ಜರ್ಸಿ ಸಂಖ್ಯೆ 7 ಮತ್ತು 18 ರ ಮುಂದೆ ಎದುರಾಳಿ ತಂಡದ ಸಂಪೂರ್ಣ ಆಟದ ಯೋಜನೆ ಹಾಳಾಗುತ್ತಿತ್ತು. ಆ ಎರಡು ಜರ್ಸಿಗಳನ್ನು ತೋಡುತ್ತಿದ್ದ MS ಧೋನಿ (MS Dhoni) ಮತ್ತು ವಿರಾಟ್ ಕೊಹ್ಲಿ (Virat Kohli) ಬಗ್ಗೆ ಮಾತನಾಡುತ್ತಿದ್ದೇವೆ.
ಅಂದಹಾಗೆ, ಇದು ಪುರುಷರ ಕ್ರಿಕೆಟ್‌ನ ವಿಷಯವಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿಯೂ ಈ ನಂಬರ್ನ ಜರ್ಸಿ ತೋಡುವ ಆಟಗಾರರಿದ್ದಾರೆ. ಅವರಿಬ್ಬರೂ ಸೇರಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸುತ್ತಿದ್ದಾರೆ. ಇಲ್ಲಿ ಹರ್ಮನ್‌ಪ್ರೀತ್ ಕೌರ್ ಜರ್ಸಿ ನಂಬರ್ 7 ಧರಿಸಿ ಕಾಣಿಸಿಕೊಂಡರೆ, ಸ್ಮೃತಿ ಮಂಧಾನ ಜರ್ಸಿ ನಂಬರ್ 18ರಲ್ಲಿ ಕಾಣಿಸಿಕೊಳ್ಳುತ್ತಾರೆ . ಇಬ್ಬರೂ ಸೇರಿ ಭಾರತ ಮಹಿಳಾ ಕ್ರಿಕೆಟ್‌ಗೆ ಯಾವ ರೀತಿಯ ಕೆಲಸ ಮಾಡುತ್ತಿದ್ದರೋ ಅದೇ ಕೆಲಸವನ್ನು ಈ ಹಿಂದೆ ಧೋನಿ ಮತ್ತು ವಿರಾಟ್ ಮಾಡುತ್ತಿದ್ದರು.
ಜರ್ಸಿ ನಂ. 7 ಮತ್ತು 18 ರ ಅಬ್ಬರ ಪುರುಷರ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ಧೋನಿ ಜರ್ಸಿ ನಂಬರ್ 7 ಮತ್ತು ವಿರಾಟ್ ಜರ್ಸಿ ನಂಬರ್ 18 ಅನ್ನು ಧರಿಸಿ ಭಾರತಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅನೇಕ ದೊಡ್ಡ ಸ್ಕೋರ್‌ಗಳನ್ನು ಗಳಿಸಿದ್ದಾರೆ ಮತ್ತು ಅನೇಕ ಪಂದ್ಯಗಳಲ್ಲಿ ಪರ್ವತಗಳಂತೆ ನಿಂತು ಸ್ಕೋರ್‌ಗಳನ್ನು ಬೆನ್ನಟ್ಟಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ಪಂದ್ಯದ ತಿರುವು ನೀಡಬಲ್ಲ ಈ ಜೋಡಿ ತಂಡದ ಟ್ರಬಲ್ ಶೂಟರ್ ಎನಿಸಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಕೂಡ ಇದೇ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ.
Jersey No. 7 ? Jersey No. 18
A special bond in India cricket ?❤️#SmritiMandhana #HarmanpreetKaur #India #INDvWI #Cricket pic.twitter.com/7iWkVEsfgv
— Wisden India (@WisdenIndia) March 12, 2022
ಧೋನಿ-ವಿರಾಟ್ ನಂತರ ಸ್ಮೃತಿ-ಹರ್ಮನ್ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಯಾಸ್ತಿಕಾ, ಮಿಥಾಲಿ, ದೀಪ್ತಿ ತಂಡಕ್ಕೆ 78 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದರು. ಹೀಗಿರುವಾಗ ಗೆಲುವಿನ ರಥ ಏರಿದ್ದ ವೆಸ್ಟ್ ಇಂಡೀಸ್ ತಂಡವನ್ನು ತಡೆಯಲು ಹರ್ಮನ್ ಹಾಗೂ ಸ್ಮೃತಿ ಪಿಚ್ ಮೇಲೆ ಗೋಡೆಯಂತೆ ನಿಂತರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 184 ರನ್ ಸೇರಿಸಿದರು. ಜೊತೆಗೆ ಇಬ್ಬರೂ ಶತಕ ಬಾರಿಸಿದರು.ಈ ಇಬ್ಬರ ಜೊತೆಯಾಟದಿಂದ ಭಾರತ 300ರ ಗಡಿ ದಾಟಿತು. ನಂತರ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ ವನಿತಾ ಬಳಗ ವಿಂಡೀಸ್ ಆಟಗಾರ್ತಿಯರಿಗೆ ಸೋಲಿನ ರುಚಿ ತೋರಿಸಿದರು.
ಇದನ್ನೂ ಓದಿ:IPL 2022: ಐಪಿಎಲ್ ಆರಂಭಕ್ಕೂ ಮುನ್ನ ಜರ್ಸಿ ಬದಲಾಯಿಸಿದ ಡೆಲ್ಲಿ! ಹೇಗಿದೆ ಗೊತ್ತಾ ಹೊಸ ಜರ್ಸಿ?