IPL 2022: ಐಪಿಎಲ್ ಆರಂಭಕ್ಕೂ ಮುನ್ನ ಜರ್ಸಿ ಬದಲಾಯಿಸಿದ ಡೆಲ್ಲಿ! ಹೇಗಿದೆ ಗೊತ್ತಾ ಹೊಸ ಜರ್ಸಿ?
Delhi Capitals: ಇನ್ನು ನೀಲಿ, ಕೆಂಪು ಬಣ್ಣದ ಜರ್ಸಿ ಆಕರ್ಷಕವಾಗಿದ್ದು, ಮುಂಬಾಗದಲ್ಲಿ ಹುಲಿಯ ಮುಖದ ಚಿತ್ರವನ್ನು ಕಾಣಬಹುದಾಗಿದೆ. ಹೊಸ ಜೆರ್ಸಿಯೊಂದಿಗೆ ಕಣಕ್ಕೆ ಇಳಿಯುತ್ತಿರುವ ದೆಹಲಿ ಈ ಬಾರಿ ಯಾವ ರೀತಿಯ ಮ್ಯಾಜಿಕ್ ಸೃಷ್ಟಿಸುತ್ತದೆ ಎಂಬುದನ್ನು ನೋಡಬೇಕು.
ಕ್ರಿಕೆಟ್ ಅಭಿಮಾನಿಗಳು ಐಪಿಎಲ್ (IPL 2022) ಪಂದ್ಯಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಎರಡು ಋತುಗಳಲ್ಲಿ ಕೊರೊನಾ ಪ್ರಭಾವ ಬೀರಿತ್ತು. ಹೀಗಾಗಿ ವಿದೇಶಗಳಲ್ಲಿ ಐಪಿಎಲ್ ಪಂದ್ಯಗಳು ನಡೆದವು. ಅಲ್ಲದೆ ಪ್ರೇಕ್ಷಕರಿಗೂ ಕ್ರೀಡಾಂಗಣದೊಳಗೆ ಅವಕಾಶ ನೀಡಿರಲಿಲ್ಲ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಕೊರೊನಾ ಪರಿಣಾಮ ಬಹುತೇಕ ಇಳಿಮುಖವಾಗಿರುವುದರಿಂದ 2022 ರ ಐಪಿಎಲ್ ಯಾವುದೇ ಹಿನ್ನಡೆಯಿಲ್ಲದೆ ಸುಗಮವಾಗಿ ನಡೆಯುತ್ತದೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್ಗೆ ಗುಜರಾತ್ ಮತ್ತು ಲಕ್ನೋ ಎಂಬ ಎರಡು ಹೊಸ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿರುವುದರಿಂದ ಟೂರ್ನಿಯಲ್ಲಿ ಕುತೂಹಲ ಹೆಚ್ಚಿದೆ. ಮಾರ್ಚ್ 26ರಿಂದ ಆರಂಭವಾಗಲಿರುವ ಈ ಟೂರ್ನಿಯನ್ನು ಕ್ರಿಕೆಟಿಗ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.
ಈಗಾಗಲೇ ಐಪಿಎಲ್ ಹರಾಜಿನಲ್ಲಿ ಆಟಗಾರರನ್ನು ಖರೀದಿಸಿರುವ ತಂಡಗಳು ಯಶಸ್ಸಿಗೆ ಈಗಾಗಲೇ ತಂತ್ರಗಳನ್ನು ರೂಪಿಸುತ್ತಿವೆ. ಕಪ್ ಹೊಡೆಯುವ ಉದ್ದೇಶದಿಂದ ಎಲ್ಲ ತಂಡಗಳು ಕಣಕ್ಕೆ ಇಳಿಯಲಿವೆ. ಇದರ ಭಾಗವಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹೆಚ್ಚು ತಾಜಾತನದೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಹೊಸ ಜೆರ್ಸಿಯಲ್ಲಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ, ದೆಹಲಿ ಮಾಲೀಕತ್ವವು ಟ್ವಿಟರ್ ಖಾತೆಯಲ್ಲಿ ತಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ‘ನ್ಯೂ ಜೆರ್ಸಿ ಫಾರ್ ನ್ಯೂ ಡೆಲ್ಲಿ’ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇನ್ನು ನೀಲಿ, ಕೆಂಪು ಬಣ್ಣದ ಜರ್ಸಿ ಆಕರ್ಷಕವಾಗಿದ್ದು, ಮುಂಬಾಗದಲ್ಲಿ ಹುಲಿಯ ಮುಖದ ಚಿತ್ರವನ್ನು ಕಾಣಬಹುದಾಗಿದೆ. ಹೊಸ ಜೆರ್ಸಿಯೊಂದಿಗೆ ಕಣಕ್ಕೆ ಇಳಿಯುತ್ತಿರುವ ದೆಹಲಿ ಈ ಬಾರಿ ಯಾವ ರೀತಿಯ ಮ್ಯಾಜಿಕ್ ಸೃಷ್ಟಿಸುತ್ತದೆ ಎಂಬುದನ್ನು ನೋಡಬೇಕು.
? | #NayiDilliKiNayiJersey ➡️ In all its glory ?❤️#YehHaiNayiDilli #IPL2022 pic.twitter.com/D8vwyr4fdt
— Delhi Capitals (@DelhiCapitals) March 12, 2022
Presenting the new threads we’ll flaunt in #IPL2022 ?
Read all about the launch of #NayiDilliKiNayiJersey right here ?? https://t.co/oKhRObNnDu#YehHaiNayiDilli pic.twitter.com/KNibnMdKqn
— Delhi Capitals (@DelhiCapitals) March 12, 2022
ದೆಹಲಿ ತಂಡ ಹೀಗಿದೆ ರಿಷಬ್ ಪಂತ್ (ನಾಯಕ), ಅಕ್ಷರ್ ಪಟೇಲ್, ಪೃಥ್ವಿ ಶಾ, ನೋಕಿಯಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಚ್, ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಶರ್ಮಾ, ಕಮಲೇಶ್, ಕಮಲೇಶ್ , ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ಪೊವೆಲ್, ಪ್ರವೀಣ್ ದುಬೆ, ಲುಂಗಿಡಿ, ವಿಕ್ಕಿ ಒಸ್ತ್ವಾಲ್, ಸರ್ಫರಾಜ್ ಖಾನ್.
ಇದನ್ನೂ ಓದಿ:IPL 2022: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್ ಶಾಕ್; ಆರಂಭಿಕ ನಾಲ್ಕೈದು ಪಂದ್ಯಗಳಿಗೆ ಡೇವಿಡ್ ವಾರ್ನರ್ ಅಲಭ್ಯ!