15ನೇ ಆವೃತ್ತಿಯ ಐಪಿಎಲ್ಗೂ (IPL 2022) ಕೊರೊನಾ ಕಾಲಿಟ್ಟಿರುವ ಶಾಕಿಂಗ್ ಸಮಾಚಾರ ಹೊರಬಿದ್ದಿದೆ. ಮುಂಬೈನಲ್ಲಿ ಬಯೋ-ಸೇಫ್ ಬಬಲ್‌ನಲ್ಲಿ (bio-safe bubble in Mumbai) ನಡೆಯುತ್ತಿರುವ ಲೀಗ್‌ನ 15 ನೇ ಸೀಸನ್‌ನಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಕಂಡುಬಂದಿದೆ. ಇದು ಸಂಘಟಕರು ಮತ್ತು ಬಿಸಿಸಿಐ (BCCI) ಅನ್ನು ಮತ್ತೆ ಚಿಂತೆಗೀಡು ಮಾಡಿದೆ. ಶುಕ್ರವಾರ, ಏಪ್ರಿಲ್ 15 ರಂದು ಐಪಿಎಲ್ ನೀಡಿದ ಹೇಳಿಕೆಯ ಪ್ರಕಾರ, ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ಪತ್ತೆಯಾದ ನಂತರ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ದೆಹಲಿಯ ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಕೊರೊನಾ ವೈರಸ್ ಸೋಂಕಿನಿಂದ ಐಪಿಎಲ್ನ ಸತತ ಎರಡು ಸೀಸನ್‌ಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಎಲ್ಲಾ ಸುರಕ್ಷತೆಗಳೊಂದಿಗೆ ಐಪಿಎಲ್ ಭಾರತಕ್ಕೆ ಮರಳಿತ್ತು. ಆದಾಗ್ಯೂ, ಕಳೆದ ಸೀಸನ್ ಭಾರತದಲ್ಲಿಯೇ ಪ್ರಾರಂಭವಾಯಿತು. ಆದರೆ ನಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ನಂತರ ಅದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ನಂತರ ಉಳಿದ ಸೀಸನ್ ಅನ್ನು ಯುಎಇಯಲ್ಲಿ ಆಯೋಜಿಸಲಾಯಿತು. ಈ ಬಾರಿ ದೇಶದಲ್ಲಿ ಪರಿಸ್ಥಿತಿ ಬಹುತೇಕ ಸಹಜವಾಗಿರುವ ಕಾರಣ ಸಂಪೂರ್ಣವಾಗಿ ಭಾರತದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಟೂರ್ನಿಯ ಗುಂಪು ಹಂತದ ಪಂದ್ಯಗಳು ಮುಂಬೈನ ಮೂರು ಮತ್ತು ಪುಣೆಯ ಒಂದು ಮೈದಾನದಲ್ಲಿ ನಡೆಯುತ್ತಿವೆ. ಆದರೆ, ಇತ್ತೀಚಿನ ಪ್ರಕರಣದಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆತಂಕ ಕೊಂಚ ಹೆಚ್ಚಿದೆ.
? NEWS ?: Deepak Chahar ruled out of #TATAIPL 2022, Harshit Rana joins Kolkata Knight Riders as a replacement for Rasikh Salam.
More Details ?https://t.co/HbP0FKpyhA
— IndianPremierLeague (@IPL) April 15, 2022
ಆರ್ಸಿಬಿ ವಿರುದ್ಧದ ಪಂದ್ಯ ರದ್ದಾಗುತ್ತಾ?
ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ತನ್ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಆದರೆ, ಸದ್ಯಕ್ಕೆ ಆ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಹೇಗಾದರೂ, ಈ ಬಾರಿ ಐಪಿಎಲ್‌ನಲ್ಲಿ ಕೊರೊನಾ ಸೋಂಕಿನ ಸಂದರ್ಭದಲ್ಲಿ, ಪಂದ್ಯಗಳ ನಡವಳಿಕೆಯ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ನಿಯಮಗಳ ಪ್ರಕಾರ, ತಂಡದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದರೆ, ಇದರಿಂದಾಗಿ 12 ಆಟಗಾರರೊಂದಿಗೆ ಪಂದ್ಯಕ್ಕೆ ತಯಾರಿ ನಡೆಸಲು ಸಾಧ್ಯವಾಗದಿದ್ದರೆ, ಆ ಸಂದರ್ಭದಲ್ಲಿ ಪಂದ್ಯವನ್ನು ಮುಂದೂಡಲಾಗುತ್ತದೆ.
ಆದಾಗ್ಯೂ, ಪಂದ್ಯವನ್ನು ಮುಂದೂಡಿದ ನಂತರ ಐಪಿಎಲ್ ಸಮಿತಿಯು ಮುಂದಿನ ದಿನಾಂಕದಂದು ಮತ್ತೊಮ್ಮೆ ಪಂದ್ಯವನ್ನು ಆಯೋಜಿಸಲು ಪ್ರಯತ್ನಿಸುತ್ತದೆ. ಇದು ಸಾಧ್ಯವಾಗದಿದ್ದರೆ, ಈ ವಿಷಯವನ್ನು ತಾಂತ್ರಿಕ ಸಮಿತಿಗೆ ಹಸ್ತಾಂತರಿಸುತ್ತದೆ. ಅದು ಪಂದ್ಯದ ಮರುಸಂಘಟನೆಯ ಬಗ್ಗೆ ಅಂತಿಮ ನಿರ್ಧಾರವನ್ನು ನೀಡುತ್ತದೆ. ಇದು ಪ್ರತಿ ತಂಡಕ್ಕೂ ಮಾನ್ಯವಾಗಿರುತ್ತದೆ. ಸದ್ಯ ಪರಿಸ್ಥಿತಿ ಯಥಾಸ್ಥಿತಿಯಲ್ಲಿದ್ದು, ಒಂದೊಂದು ಪ್ರಕರಣ ಕಂಡು ಬಂದ ಬಳಿಕ ಆಡಳಿತ ಮಂಡಳಿ ಹೆಚ್ಚು ಎಚ್ಚರಿಕೆ ವಹಿಸಲಿದೆ.
ಇದನ್ನೂ ಓದಿ:IPL 2022: ಹೈದರಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ಆಘಾತ; ಐಪಿಎಲ್ನಿಂದ ತಂಡದ ಸ್ಟಾರ್ ಬೌಲರ್ ಔಟ್!
Published On - 5:37 pm, Fri, 15 April 22