IPL 2022: RCB ತಂಡದ ಹೊಸ ನಾಯಕ ಇವರೇ..!

| Updated By: ಝಾಹಿರ್ ಯೂಸುಫ್

Updated on: Mar 12, 2022 | 4:49 PM

RCB's new captain: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್.

IPL 2022: RCB ತಂಡದ ಹೊಸ ನಾಯಕ ಇವರೇ..!
RCB's new captain
Follow us on

ಐಪಿಎಲ್ ಸೀಸನ್​ 15 ಗಾಗಿ (IPL 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು (IPL 2022 RCB Captain) ತಂಡದ ಹೊಸ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆರ್​ಸಿಬಿ ನಾಯಕರುಗಳ ಪಟ್ಟಿಯಲ್ಲಿ ನಾಲ್ವರು ಆಟಗಾರರ ಹೆಸರುಗಳಿದ್ದವು. ಈ ನಾಲ್ವರು ಕೂಡ ಈ ಹಿಂದೆ ನಾಯಕರಾಗಿ ತಂಡಗಳನ್ನು ಮುನ್ನಡೆಸಿದ ಅನುಭವ ಕೂಡ ಹೊಂದಿದ್ದರು. ಆರ್​ಸಿಬಿ ಕ್ಯಾಪ್ಟನ್ಸ್​ ಪಟ್ಟಿಯಲ್ಲಿದ್ದ ಹೆಸರೆಂದರೆ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ. ಇದೀಗ ಅಂತಿಮವಾಗಿ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್ (Faf du Plessis) ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ. ಅದರಂತೆ ಐಪಿಎಲ್​ ಸೀಸನ್ 15 ನಲ್ಲಿ ಆರ್​ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ.

ಈ ಹಿಂದೆಯೇ ಫಾಫ್ ಡುಪ್ಲೆಸಿಸ್ ಹೆಸರು ಜೋರಾಗಿ ಕೇಳಿ ಬಂದಿತ್ತು. ಏಕೆಂದರೆ ವಿರಾಟ್ ಕೊಹ್ಲಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಅನುಭವ ಹೊಂದಿರುವ ಏಕೈಕ ಆಯ್ಕೆ ಫಾಫ್ ಡುಪ್ಲೆಸಿಸ್ ಮಾತ್ರ. ಇನ್-ಫಾರ್ಮ್ ಓಪನರ್ ಕೂಡ ಆಗಿರುವ ಫಾಫ್ ಡು ಪ್ಲೆಸಿಸ್ ಆರ್​ಸಿಬಿ ಮುಂದಿರುವ ಅತ್ಯುತ್ತಮ ಆಯ್ಕೆಯಾಗಿತ್ತು. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಡುಪ್ಲೆಸಿಸ್ ಐಪಿಎಲ್ 2022 ರ ಸಂಪೂರ್ಣ ಅವಧಿಗೆ ಲಭ್ಯವಿರುತ್ತಾರೆ.

ಅಷ್ಟೇ ಅಲ್ಲದೆ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದ ಅನುಭವವನ್ನು ಹೊಂದಿರುವ ಬಗ್ಗೆ ಇತರಿಗೆ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ನಿರ್ದೇಶಕ ಮೈಕ್ ಹೆಸನ್ ವಿವರಿಸಿದ್ದರು. ಹೀಗಾಗಿ ನಾವು ಅವರನ್ನು ಹರಾಜಿನಲ್ಲಿ ಖರೀದಿಸಬೇಕಾಗಿದೆ. ಇದಕ್ಕಾಗಿ ದೊಡ್ಡ ಮೊತ್ತವೊಂದನ್ನು ಫಾಫ್ ಡುಪ್ಲೆಸಿಸ್​ಗಾಗಿ ತೆಗೆದಿಡಬೇಕಾಗುತ್ತದೆ ಎಂದು ಮೈಕ್ ಹೆಸನ್ ಮೆಗಾ ಹರಾಜಿಗೂ ಮುನ್ನ ನಡೆದ ಚರ್ಚೆಯಲ್ಲಿ ತಮ್ಮ ಪ್ಲ್ಯಾನ್ ಅನ್ನು ಮುಂದಿಟ್ಟಿದ್ದರು. ಅದರಂತೆ ಮೆಗಾ ಹರಾಜು ಮೂಲಕ ಫಾಫ್ ಡುಪ್ಲೆಸಿಸ್​ ಅವರನ್ನು ಆರ್​ಸಿಬಿ ಬರೋಬ್ಬರಿ 7 ಕೋಟಿ ರೂ. ನೀಡಿ ಖರೀದಿಸಿತು. ಅದರಂತೆ ಇದೀಗ ಫಾಫ್ ಡುಪ್ಲೆಸಿಸ್​ ಅವರಿಗೆ ಆರ್​ಸಿಬಿ ನಾಯಕ ಪಟ್ಟ ಒಲಿದಿದೆ ಎಂದು ತಿಳಿದು ಬಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್​ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(IPL 2022: Faf du Plessis is likely to be named as RCB’s new captain)

Published On - 4:38 pm, Sat, 12 March 22