Explained: 2 ಗುಂಪು, 74 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ

| Updated By: ಝಾಹಿರ್ ಯೂಸುಫ್

Updated on: Nov 04, 2021 | 6:48 PM

IPL 2022 Format Explained: ಬಿಸಿಸಿಐ ರೌಂಡ್ ರಾಬಿನ್ ಫಾರ್ಮಾಟ್ ಪರಿಚಯಿಸಲಿದೆ. ಅಂದರೆ ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

Explained: 2 ಗುಂಪು, 74 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಬಿಸಿಸಿಐ ಸಿದ್ದತೆಗಳನ್ನು ಆರಂಭಿಸಿದೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಮೆಗಾ ಹರಾಜು ರಿಟೈನ್ ನಿಯಮದಂತೆ ಈ ಬಾರಿ ನಾಲ್ಕು ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವ ಅವಕಾಶ ಇರಲಿದೆ. ಅಂದರೆ ಹರಾಜಿಗೂ ಮುನ್ನ ಪ್ರಸ್ತುತ ಇರುವ 8 ತಂಡಗಳಿಗೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇರಲಿದೆ.
Follow us on

ಐಪಿಎಲ್​ನಲ್ಲಿ ಹೊಸ ಎರಡು ತಂಡಗಳ ಘೋಷಣೆಯಾಗಿದೆ. ಅದರಂತೆ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದೆ. ಹಾಗೆಯೇ ಹೊಸ ಎರಡು ಸೇರ್ಪಡೆಯಿಂದಾಗಿ ಪಂದ್ಯಗಳು ಹೆಚ್ಚಾಗಲಿದೆ. ಅಂದರೆ ಈ ಹಿಂದಿನ ಫಾರ್ಮಾಟ್​ನಲ್ಲಿ ಪಂದ್ಯ ನಡೆಸಿದರೆ ಒಟ್ಟು 94 ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ಕೆಲ ಬದಲಾವಣೆ ಮಾಡಿಕೊಳ್ಳಲು ಬಯಸಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಅದರಂತೆ ಮುಂದಿನ ಸೀಸನ್​ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂದರೆ ಕಳೆದ ಸೀಸನ್​ನಲ್ಲಿ ಒಟ್ಟು 60 ಪಂದ್ಯಗಳನ್ನು ನಡೆಸಲಾಗಿತ್ತು. 56 ಲೀಗ್ ಪಂದ್ಯಗಳಿದ್ದರೆ 4 ಪ್ಲೇಆಫ್​ ಪಂದ್ಯಗಳಿತ್ತು. ಮುಂದಿನ ಸೀಸನ್​ನಲ್ಲಿ 70 ಲೀಗ್ ಪಂದ್ಯಗಳು ಇರಲಿದ್ದು, ಹಾಗೆಯೇ 4 ಪ್ಲೇಆಫ್ ಪಂದ್ಯಗಳು ನಡೆಯಲಿದೆ.

ಇದಕ್ಕಾಗಿ ಬಿಸಿಸಿಐ ರೌಂಡ್ ರಾಬಿನ್ ಫಾರ್ಮಾಟ್ ಪರಿಚಯಿಸಲಿದೆ. ಅಂದರೆ ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಬಳಿಕ ತಲಾ 14 ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಗ್ರೂಪ್ A-ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಆ ಬಳಿಕ ಗ್ರೂಪ್ ಬಿ-ನಲ್ಲಿರುವ ತಂಡದ ವಿರುದ್ದ ಒಂದೊಂದು ಪಂದ್ಯವಾಡಲಿದೆ.

ಉದಾಹರಣೆಗೆ: RCB ಗ್ರೂಪ್ A-ನಲ್ಲಿದ್ದರೆ ತನ್ನದೇ ಗ್ರೂಪ್​ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಇಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 8 ಆಗುತ್ತೆ. ಬಳಿಕ ಗ್ರೂಪ್ B-ನಲ್ಲಿರುವ 5 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಪ್ರತಿ ತಂಡಗಳ ಪಂದ್ಯಗಳ ಸಂಖ್ಯೆ 13 ಆಗಲಿದೆ. ಇನ್ನು  ಪ್ರತಿ ತಂಡಗಳು ಲಕ್ಕಿ ಡಿಪ್ ಆಯ್ಕೆಯ ಮೂಲಕ ಹೆಚ್ಚುವರಿ ಒಂದು ಪಂದ್ಯವಾಡಲಿದೆ. ಈ ಮೂಲಕ 14 ಪಂದ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಂದರೆ 13 ಪಂದ್ಯಗಳು ನೇರ ಮುಖಾಮುಖಿಯಂತೆ ನಡೆದರೆ ಒಂದು ಪಂದ್ಯದ ಎದುರಾಳಿಯನ್ನು ಪರಸ್ಪರ ವಿರುದ್ದದ ಗ್ರೂಪ್​ನಿಂದ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಂದರೆ ಗ್ರೂಪ್ ಎ ನಲ್ಲಿರುವ ಒಂದು ತಂಡ ಗ್ರೂಪ್ ಬಿ ನಲ್ಲಿರುವ ಒಂದು ತಂಡದ ವಿರುದ್ದ 2 ಪಂದ್ಯವಾಡಬೇಕಾಗಿ ಬರಬಹುದು. ಅದು ಯಾವ ತಂಡ ಎಂಬುದು ಲಕ್ಕಿ ಡಿಪ್ ಮೂಲಕ ನಿರ್ಧರಿಸಲಾಗುತ್ತದೆ. ಹೀಗಾಗಿ ಯಾರಿಗೆ ಯಾರು ಸಿಗಲಿದ್ದಾರೆ ಎಂದು ಹೇಳಲಾಗುವುದಿಲ್ಲ. ಅದರಂತೆ ಒಟ್ಟು 14 ಲೀಗ್ ಪಂದ್ಯಗಳು ನಡೆಯಲಿದೆ.

ಇನ್ನು ಸರಳವಾಗಿ ಹೇಳಬೇಕಿದ್ರೆ ಗ್ರೂಪ್ A-ನಲ್ಲಿರುವ RCB ತಂಡವು ಗ್ರೂಪ್-B ನಲ್ಲಿರುವ CSK ವಿರುದ್ದ ಒಂದು ಪಂದ್ಯ ಆಡಿರುತ್ತೆ. ಇದಾದ ಬಳಿಕ ತಮ್ಮ 14ನೇ ಪಂದ್ಯವನ್ನಾಡಲು ಹಾಕಲಾಗುವ ಲಕ್ಕಿ ಡ್ರಾ ಮೂಲಕ ಮತ್ತೊಮ್ಮೆ ಸಿಎಸ್​ಕೆ ತಂಡವನ್ನು ಎದುರಿಸಬೇಕಾಗಿ ಬರಬಹುದು. ಇಲ್ಲಿ ಎದುರಾಳಿ ಯಾರು ಎಂಬುದು ಅದೃಷ್ಟದ ಮೇಲೆ ನಿಂತಿರುತ್ತದೆ. ಇದನ್ನು  ವೇಳಾಪಟ್ಟಿ ಬಿಡುಗಡೆಯಾಗುವಾಗಲೇ ನಿರ್ಧರಿಸಲಾಗುತ್ತದೆ. ಅದರಂತೆ ಪ್ರತಿ ತಂಡಗಳು 14 ಪಂದ್ಯಗಳನ್ನು ಆಡಲಿದೆ. ಇಲ್ಲಿ ಎರಡು ಗ್ರೂಪ್​ನಲ್ಲಿ ಅತೀ ಹೆಚ್ಚು ಪಾಯಿಂಟ್ ಪಡೆಯುವ ನಾಲ್ಕು ತಂಡಗಳು ಪ್ಲೇಆಫ್​ ಪ್ರವೇಶಿಸಲಿದೆ. ಇನ್ನು ಪ್ಲೇಆಫ್​ ಈ ಹಿಂದಿನಂತೆ ಇರಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯ, ಬಳಿಕ ಎಲಿಮಿನೇಟರ್ ಪಂದ್ಯ…ಆ ನಂತರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಅದರಂತೆ ಫೈನಲ್ ಸೇರಿದಂತೆ ಪ್ಲೇಆಫ್​ನಲ್ಲಿ 4 ಪಂದ್ಯ ಇರಲಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(IPL 2022 Format Explained: Here’s How The League May Operate With 10 Teams)