IPL 2022: ಐಪಿಎಲ್ನ 54ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಹೆಚ್ (RCB vs SRH) ತಂಡಗಳು ಸೆಣಸಲಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಇತ್ತ ಆರ್ಸಿಬಿ ತಂಡವು ಹಸಿರು ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೀಗ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಆರ್ಸಿಬಿಗೆ ಮುಂದಿನ ಮೂರು ಪಂದ್ಯಗಳು ನಿರ್ಣಾಯಕ. ಏಕೆಂದರೆ ಮೂರು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆರ್ಸಿಬಿ 18 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಇದೀಗ ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ಕಣಕ್ಕಿಳಿಯುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ಆರ್ಸಿಬಿ ಪಾಲಿಗೆ ಗ್ರೀನ್ ಜೆರ್ಸಿ ಅದೃಷ್ಟವಲ್ಲ ಎಂಬ ಮಾತಿದೆ. ಇದಕ್ಕೆ ಮುಖ್ಯ ಕಾರಣ ವಿಶೇಷ ಜೆರ್ಸಿಯಲ್ಲಿ ಆರ್ಸಿಬಿ ಕಣಕ್ಕಿಳಿದಾಗ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅಂದರೆ 2011 ರಿಂದ ಆರ್ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದುವರೆಗೆ
ಆರ್ಸಿಬಿ ತಂಡವು 10 ಪಂದ್ಯಗಳನ್ನಾಡಿದ್ದು, ಈ ವೇಳೆ ಬಾರಿ ಗೆದ್ದಿದೆ. ಇನ್ನು ಏಳು ಪಂದ್ಯಗಳಲ್ಲಿ ಸೋತಿದೆ. ಇನ್ನು ಒಂದು ಪಂದ್ಯದಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ.
ಆರ್ಸಿಬಿ ತಂಡದ ಹಸಿರು ಜೆರ್ಸಿ ಪಂದ್ಯಗಳ ಫಲಿತಾಂಶಗಳು ಹೀಗಿವೆ:
2011 – ಗೆಲುವು
2012 – ಸೋಲು
2013 – ಸೋಲು
2014 – ಸೋಲು
2015 – ಫಲಿತಾಂಶವಿಲ್ಲ
2016 – ಗೆಲುವು
2017 – ಸೋಲು
2018 – ಸೋಲು
2019 – ಸೋಲು
2020 – ಸೋಲು
2021 – (ನೀಲಿ ಜೆರ್ಸಿ) ಸೋಲು
ಅಂದರೆ ಆರ್ಸಿಬಿ ತಂಡವು ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿದ ಕಳೆದ 5 ಪಂದ್ಯಗಳಲ್ಲೂ ಸೋತಿದೆ. ಹೀಗಾಗಿಯೇ ಗ್ರೀನ್ ಜೆರ್ಸಿ ಆರ್ಸಿಬಿ ಪಾಲಿಗೆ ಅದೃಷ್ಟವಲ್ಲ ಎಂಬ ಮಾತಿದೆ. ಇದಾಗ್ಯೂ ಈ ಬಾರಿ ಆರ್ಸಿಬಿ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆಡುತ್ತಿದ್ದು, ಹೀಗಾಗಿ ಸೋಲಿನ ಸರಪಳಿಯಿಂದ ಆರ್ಸಿಬಿ ಹೊರಬರಲಿದೆಯಾ ಕಾದು ನೋಡಬೇಕಿದೆ.
It’s time for our Go Green Game, 12th Man Army, and we couldn’t be more excited! ???
Are you ready to #GoGreen and cheer for #RCB as we take on #SRH this Sunday at 3:30 PM IST? ??#PlayBold #WeAreChallengers #IPL2022 #Mission2022 #RCB #ನಮ್ಮRCB #Reels #ForPlanetEarth pic.twitter.com/ukcCAVHwxl
— Royal Challengers Bangalore (@RCBTweets) May 7, 2022
RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.