Updated on:May 07, 2022 | 4:33 PM
ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ಆರ್ಆರ್ ತಂಡವು ಪ್ರಸ್ತುತ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ಏಕೆಂದರೆ ಸ್ಯಾಮ್ಸನ್ ಸತತವಾಗಿ ಟಾಸ್ ಸೋತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ತಂಡದ ನಾಯಕ ಮತ್ತೊಮ್ಮೆ ಟಾಸ್ ಸೋತರು. ಟಾಸ್ ಇದು ಅಭ್ಯಾಸವಾಗಿದೆ ಎನ್ನುವ ಮೂಲಕ ಸ್ಯಾಮ್ಸನ್ ಎಲ್ಲರ ಗಮನ ಸೆಳೆದರು. ಏಕೆಂದರೆ ಸಂಜು ಸ್ಯಾಮ್ಸನ್ ಈ ಬಾರಿ 10 ಟಾಸ್‌ಗಳನ್ನು ಕಳೆದುಕೊಂಡಿದ್ದಾರೆ. ಅಂದರೆ ಆಡಿರುವ 11 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಹಾಗಿದ್ರೆ ಯಾವ ತಂಡದ ನಾಯಕ ಎಷ್ಟು ಬಾರಿ ಟಾಸ್ ಗೆದ್ದಿದ್ದಾರೆ ನೋಡೋಣ...
ಐಪಿಎಲ್ 2022 ರಲ್ಲಿ ಕೇನ್ ವಿಲಿಯಮ್ಸನ್ ಅತಿ ಹೆಚ್ಚು ಬಾರಿ ಟಾಸ್ ಗೆದ್ದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ನಾಯಕ ಟಾಸ್ ವಿಷಯದಲ್ಲಿ ಶೇಕಡಾ 90 ರಷ್ಟು ಯಶಸ್ಸು ಸಾಧಿಸಿದ್ದಾರೆ. ಅಂದರೆ 10 ಪಂದ್ಯಗಳಲ್ಲಿ 9 ಬಾರಿ ಟಾಸ್ ಗೆದ್ದಿದ್ದಾರೆ.
ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಂಡ್ಯ 11 ಪಂದ್ಯಗಳಲ್ಲಿ 7 ಬಾರಿ ಟಾಸ್ ಗೆದ್ದಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ 10 ಪಂದ್ಯಗಳಲ್ಲಿ 6 ಬಾರಿ ಟಾಸ್ ಗೆದ್ದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 11 ಪಂದ್ಯಗಳಲ್ಲಿ 6 ಬಾರಿ ಟಾಸ್ ಗೆದ್ದಿದ್ದಾರೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ 10 ಪಂದ್ಯಗಳಲ್ಲಿ ತಲಾ 5 ಬಾರಿ ಟಾಸ್ ಗೆದ್ದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ, ಜಡೇಜಾ ಮತ್ತು ಧೋನಿ ಒಟ್ಟಾಗಿ 10 ಪಂದ್ಯಗಳಲ್ಲಿ ಕೇವಲ 4 ಬಾರಿ ಮಾತ್ರ ಟಾಸ್ 4 ಗೆದ್ದಿದ್ದಾರೆ. ಹಾಗೆಯೇ ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ 11 ಪಂದ್ಯಗಳಲ್ಲಿ ಕೇವಲ 3 ಮಾತ್ರ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Published On - 4:33 pm, Sat, 7 May 22