IPL 2022: ಮುಂಬೈ ಇಂಡಿಯನ್ಸ್​ಗೆ​ ಪ್ಲೇಆಫ್​ ಚಾನ್ಸ್​ ಇದೆಯಾ?

| Updated By: ಝಾಹಿರ್ ಯೂಸುಫ್

Updated on: Apr 18, 2022 | 2:23 PM

IPL 2022: ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್

IPL 2022: ಮುಂಬೈ ಇಂಡಿಯನ್ಸ್​ಗೆ​ ಪ್ಲೇಆಫ್​ ಚಾನ್ಸ್​ ಇದೆಯಾ?
mumbai indians
Follow us on

IPL 2022: ಐಪಿಎಲ್ ಸೀಸನ್​ 15 ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಎಲ್ಲಾ ಪಂದ್ಯಗಳನ್ನು ಸೋತಿದೆ. ಅಂದರೆ ಆಡಿರುವ 6 ಪಂದ್ಯಗಳಲ್ಲಿ ಸೋತು ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿಯೇ ಈ ಸಲ ಮುಂಬೈ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬಾರಿ ಒಟ್ಟು 10 ತಂಡಗಳಿದ್ದು, ಅದರಲ್ಲಿ 4 ತಂಡಗಳು ಪ್ಲೇಆಫ್ ಆಡಲಿದೆ. ಸಾಮಾನ್ಯವಾಗಿ ಐಪಿಎಲ್​ನಲ್ಲಿ 16 ಪಾಯಿಂಟ್ ಪಡೆದಿರುವ ತಂಡಗಳು ಪ್ಲೇಆಫ್​ ಆಡುವುದು ಖಚಿತ ಎನ್ನಬಹುದು. ಹಾಗೆಯೇ ಈ ಬಾರಿ 10 ತಂಡಗಳಿರುವ ಕಾರಣ ಒಂದೆರೆಡು ಟೀಮ್ 18 ಪಾಯಿಂಟ್ ಪಡೆಯುವ ಸಾಧ್ಯತೆ ಹೆಚ್ಚು. ಅಂದರೆ 9 ಮ್ಯಾಚ್ ಗೆದ್ದರೆ ಪ್ಲೇಆಫ್​ ಖಚಿತಪಡಿಸಿಕೊಳ್ಳಬಹುದು. ಈಗಾಗಲೇ ಗುಜರಾತ್ ಟೈಟನ್ಸ್ 10 ಪಾಯಿಂಟ್ ಪಡೆದಿದೆ. ಇನ್ನು 4 ಮ್ಯಾಚ್ ಗೆದ್ದರೆ ಗುಜರಾತ್ ಪ್ಲೇ ಆಫ್​ ಆಡುವುದು ಕನ್​ಫರ್ಮ್​ ಆಗಲಿದೆ.

ಇದಾಗ್ಯೂ ಪಾಯಿಂಟ್ ಟೇಬಲ್​ನಲ್ಲಿ 3 ಮತ್ತು ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಕಂಡು ಬರಬಹುದು. ಅದರಲ್ಲೂ 4ನೇ ಸ್ಥಾನಕ್ಕಾಗಿ ನೆಟ್​ ರನ್​ ರೇಟ್​ ಪ್ರಮುಖ ಪಾತ್ರವಹಿಸಲಿದೆ. ಒಂದು ವೇಳೆ 4ನೇ ಸ್ಥಾನ ಪಡೆಯುವ ತಂಡವು 8 ಪಂದ್ಯಗಳನ್ನು ಗೆದ್ದರೆ ಮಾತ್ರ ಮುಂಬೈಗೆ ಅವಕಾಶ ಸಿಗಲಿದೆ. ಅಂದರೆ ಮುಂಬೈ ಇಂಡಿಯನ್ಸ್​ಗೆ ಇನ್ನು ಉಳಿದಿರುವುದು ಕೇವಲ 8 ಮ್ಯಾಚ್ ಮಾತ್ರ. ಈ ಎಲ್ಲಾ ಮ್ಯಾಚ್​ಗಳನ್ನೂ ಮುಂಬೈ ಗೆಲ್ಲಬೇಕು. ಅಲ್ಲದೆ ಪ್ಲೇಆಫ್​ಗೆ ಎಂಟ್ರಿ ಕೊಡುವ ಉಳಿದ ತಂಡಗಳ ಪಾಯಿಂಟ್ 16 ಆಗಿದ್ದರೆ ಮಾತ್ರ ಮುಂಬೈಗೆ ಚಾನ್ಸ್ ಸಿಗಲಿದೆ. ಅದರಲ್ಲೂ 3ನೇ ಮತ್ತು 4ನೇ ಸ್ಥಾನ ಪಡೆಯುವ ತಂಡ 16 ಪಾಯಿಂಟ್ ಪಡೆದರೆ ಮಾತ್ರ ಮುಂಬೈ ಇಂಡಿಯನ್ಸ್​ ನೆಟ್​ ರನ್​ರೇಟ್ ಮೂಲಕ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

ಒಂದು ವೇಳೆ ನಾಲ್ಕನೇ ಸ್ಥಾನ ಪಡೆಯುವ ತಂಡ 14 ಪಾಯಿಂಟ್ ಪಡೆದರೂ, ಮುಂಬೈ ಇಂಡಿಯನ್ಸ್ ಉಳಿದ 7 ಪಂದ್ಯಗಳನ್ನು ಗೆದ್ದರೂ ಕೂಡ ನೆಟ್​ ರನ್​ ರೇಟ್​ ಮೂಲಕ ಅವಕಾಶ ದೊರೆಯಲಿದೆ. ಆದರೆ 10 ತಂಡಗಳಿರುವ ಕಾರಣ ಸಾಮಾನ್ಯವಾಗಿ ಮೊದಲ 3 ತಂಡಗಳು 16 ಅಥವಾ 18 ಪಾಯಿಂಟ್​ಗಳಿಸುವ ಸಾಧ್ಯತೆ ಹೆಚ್ಚು.

ಹೀಗಾಗಿ ನಾಲ್ಕನೇ ಸ್ಥಾನ ಪಡೆಯಲು ಮುಂಬೈ ಇಂಡಿಯನ್ಸ್ ಉಳಿದ 8 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಒಟ್ಟಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಪ್ಲೇಆಫ್​ನಿಂದ ಹೊರಬೀಳಲಿದೆಯಾ ಎಂಬುದು ಮುಂದಿನ ಪಂದ್ಯದ ಫಲಿತಾಂಶದಿಂದ ನಿರ್ಧಾರವಾಗಲಿದೆ.

ಮುಂಬೈ ಇಂಡಿಯನ್ಸ್ (MI):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ