IPL 2022: ಯಾರಾಗಲಿದ್ದಾರೆ RCB ನಾಯಕ?: ಲೀಸ್ಟ್​ನಲ್ಲಿ ಇಶಾನ್ ಕಿಶನ್ ಹೆಸರು..!

IPL 2022 Rcb Captain: ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಟಗಾರ ಮಾಜಿ ಎಸ್​ಆರ್​ಹೆಚ್​ ನಾಯಕ ಡೇವಿಡ್ ವಾರ್ನರ್ ಹೆಸರು ಕೂಡ ಇದ್ದು, ಹೀಗಾಗಿ ವಾರ್ನರ್ ಅವರ ಖರೀದಿಗೂ ಆರ್​ಸಿಬಿ ಹೆಚ್ಚಿನ ಆಸಕ್ತಿ ತೋರಲಿದೆ.

IPL 2022: ಯಾರಾಗಲಿದ್ದಾರೆ RCB ನಾಯಕ?: ಲೀಸ್ಟ್​ನಲ್ಲಿ ಇಶಾನ್ ಕಿಶನ್ ಹೆಸರು..!
ishan kishan
Updated By: ಝಾಹಿರ್ ಯೂಸುಫ್

Updated on: Feb 07, 2022 | 3:40 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಹರಾಜಿಗಾಗಿ ಪ್ಲ್ಯಾನ್ ರೂಪಿಸುತ್ತಿದೆ. ಅದರಲ್ಲೂ ಕೆಲ ತಂಡಗಳು ನಾಯಕನ ಆಯ್ಕೆಗಾಗಿ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಏಕೆಂದರೆ ಐಪಿಎಲ್​ನಲ್ಲಿನ 10 ತಂಡಗಳ ಪೈಕಿ ಮೂರು ತಂಡಗಳು ಇನ್ನೂ ಕೂಡ ನಾಯಕನನ್ನು ಘೋಷಿಸಿಲ್ಲ. ಅದರಂತೆ ಆರ್​ಸಿಬಿ, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್​ ಹೊಸ ನಾಯಕನ ಆಯ್ಕೆ ಮಾಡಲಿದೆ. ಅದರಲ್ಲೂ ಸ್ಟಾರ್ ಆಟಗಾರರ ದಂಡೇ ಹೊಂದಿರುವ ಆರ್​ಸಿಬಿ ಯಾರನ್ನು ನಾಯಕನಾಗಿ ಆಯ್ಕೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

ಏಕೆಂದರೆ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಅವರಂತಹ ಪ್ರಸಿದ್ಧ ಆಟಗಾರರಿದ್ದು, ಈ ಆಟಗಾರರನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರನಿಗೆ ನಾಯಕನ ಪಟ್ಟ ನೀಡಬೇಕಾಗುತ್ತದೆ. ಅದರಂತೆ ಇದೀಗ ಆರ್​ಸಿಬಿ ನಾಯಕನ ಪಟ್ಟಿಯೊಂದು ಸಿದ್ದಪಡಿಸಿದ್ದು, ಇದರಲ್ಲಿ ಐವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ. ಅದರಂತೆ ಮೆಗಾ ಹರಾಜಿನಲ್ಲಿ ಅಯ್ಯರ್ ಖರೀದಿಗೆ ಆರ್​ಸಿಬಿ ಒಲವು ತೋರಬಹುದು. ಇನ್ನು ಈ ಪಟ್ಟಿಯಲ್ಲಿರುವ ಮತ್ತೋರ್ವ ಆಟಗಾರನೆಂದರೆ ವೆಸ್ಟ್ ಇಂಡೀಸ್​ನ ಜೇಸನ್ ಹೋಲ್ಡರ್. ವಿಂಡೀಸ್ ತಂಡದ ಆಲ್​ರೌಂಡರ್ ಆಗಿರುವ ಹೋಲ್ಡರ್ ಈ ಹಿಂದೆ ರಾಷ್ಟ್ರೀಯ ತಂಡದ ನಾಯಕರಾಗಿದ್ದರು. ಹೀಗಾಗಿ ಹೋಲ್ಡರ್ ಅವರನ್ನು ಆರ್​ಸಿಬಿ ನಾಯಕರ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.

ಹಾಗೆಯೇ ಈ ಪಟ್ಟಿಯಲ್ಲಿ ಮಾಜಿ ಕೆಕೆಆರ್ ತಂಡದ ನಾಯಕ ಇಂಗ್ಲೆಂಡ್ ಆಟಗಾರ ಇಯಾನ್ ಮೋರ್ಗನ್ ಕೂಡ ಇದ್ದಾರೆ. 2019 ರಲ್ಲಿ ಮೋರ್ಗನ್ ನೇತೃತ್ವದಲ್ಲಿ ಇಂಗ್ಲೆಂಡ್​ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ ಕಳೆದ ಸೀಸನ್​ನಲ್ಲಿ ಕೆಕೆಆರ್​ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಮೋರ್ಗನ್ ಕೂಡ ಆರ್​ಸಿಬಿ ಹಿಟ್​ ಲೀಸ್ಟ್​ನಲ್ಲಿದ್ದಾರೆ.

ಇನ್ನು ಪಟ್ಟಿಯಲ್ಲಿರುವ ಅಚ್ಚರಿಯ ಹೆಸರೆಂದರೆ ಇಶಾನ್ ಕಿಶನ್. ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಅವರನ್ನು ಆರ್​ಸಿಬಿ ನಾಯಕರ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಕಿಶನ್ ಈ ಹಿಂದೆ 2016 ರಲ್ಲಿ ಅಂಡರ್​ 19 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಹೀಗಾಗಿ ಯುವ ಆಟಗಾರನನ್ನು ಕೂಡ ಆರ್​ಸಿಬಿ ನಾಯಕರುಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದೆ.

ಅದೇ ರೀತಿ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಟಗಾರ ಮಾಜಿ ಎಸ್​ಆರ್​ಹೆಚ್​ ನಾಯಕ ಡೇವಿಡ್ ವಾರ್ನರ್ ಹೆಸರು ಕೂಡ ಇದ್ದು, ಹೀಗಾಗಿ ವಾರ್ನರ್ ಅವರ ಖರೀದಿಗೂ ಆರ್​ಸಿಬಿ ಹೆಚ್ಚಿನ ಆಸಕ್ತಿ ತೋರಲಿದೆ. ಏಕೆಂದರೆ 2016 ರಲ್ಲಿ ಎಸ್​ಆರ್​ಹೆಚ್​ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹಿರಿಮೆ ಡೇವಿಡ್ ವಾರ್ನರ್​ಗೆ ಸಲ್ಲುತ್ತದೆ. ಹೀಗಾಗಿ ಆರ್​ಸಿಬಿ ವಾರ್ನರ್ ಅವರನ್ನು ಖರೀದಿಸಿ ನಾಯಕತ್ವ ನೀಡಿದರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(IPL 2022: ishan kishan in the list of 5 players who can become captain of rcb)