IPL 2022: ರಾಜಸ್ಥಾನ್ ಪಾಲಿಗೆ ವರ್ಕ್ ಆದ ಅಶ್ವಿನ್ ರಿಟೈರ್ಡ್ ಔಟ್ ಪ್ಲ್ಯಾನ್

IPL 2022: ಐಪಿಎಲ್​ ಇತಿಹಾಸದಲ್ಲೇ ಮೊದಲ ಬಾರಿಗೆ ಔಟ್ ಆಗದೇ ರಿಟೈರ್ಡ್ ಔಟ್ ಘೋಷಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸದ ಭಾಗವಾಗಿದ್ದಾರೆ. ಅವರ ಈ ನಿರ್ಧಾರವು ತಂಡದ ಗೆಲುವಿಗೂ ಕೂಡ ಕಾರಣವಾಗಿದ್ದು ವಿಶೇಷ.

IPL 2022: ರಾಜಸ್ಥಾನ್ ಪಾಲಿಗೆ ವರ್ಕ್ ಆದ ಅಶ್ವಿನ್ ರಿಟೈರ್ಡ್ ಔಟ್ ಪ್ಲ್ಯಾನ್
R ashwin
Updated By: ಝಾಹಿರ್ ಯೂಸುಫ್

Updated on: Apr 11, 2022 | 7:25 PM

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉಂಟಾದ ಕುಸಿತದ ಬೆನ್ನಲ್ಲೇ ಆರ್ ಅಶ್ವಿನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಶಿಮ್ರಾನ್ ಹೆಟ್ಮೆಯರ್​ಗೆ ಉತ್ತಮ ಸಾಥ್ ನೀಡಿದರು. 23 ಎಸೆತಗಳಲ್ಲಿ 28 ರನ್ ಬಾರಿಸಿದ್ದ ಅಶ್ವಿನ್ 18.2 ಓವರ್​ ವೇಳೆ ದಿಢೀರಣೆ ರಿಟೈರ್ಡ್ ಔಟ್ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ರಿಟೈರ್ಡ್ ಔಟ್ ಆದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅಶ್ವಿನ್ ಪಾತ್ರರಾದರು. ಇದೀಗ ಅಶ್ವಿನ್ ಅವರ ಈ ನಿರ್ಧಾರವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕುಮಾರ್ ಸಂಗಾಕ್ಕರ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಗಾಕ್ಕರ, ಸರಿಯಾದ ಸಮಯದಲ್ಲಿ ‘ನಿವೃತ್ತಿ’ ಮಾಡುವ ಮೂಲಕ ಆರ್ ಅಶ್ವಿನ್ ಪಂದ್ಯದ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಶ್ವಿನ್ ಅವರೇ ಈ ನಿರ್ಧಾರ ಕೈಗೊಂಡಿದ್ದಾರೆ. ಏನು ಮಾಡಬೇಕೆಂದು ನಾವು ಮೊದಲೇ ಚರ್ಚಿಸಿದ್ದೇವೆ. ದಕ್ಷಿಣ ಆಫ್ರಿಕಾದ ವ್ಯಾನ್ ಡೆರ್ ಡಸ್ಸೆನ್ ಅವರು ಈ ಬಾರಿ ಮೊದಲ ಪಂದ್ಯವನ್ನು ಆಡಿದ್ದರು. ಆದರೆ ಕೇವಲ 4 ರನ್​ಗಳಿಸಿ ಔಟಾಗಿದ್ದರು. ಈ ವೇಳೆ ಅಶ್ವಿನ್ ಅವರನ್ನು ಕಳುಹಿಸಲಾಗಿತ್ತು. ಅಲ್ಲದೆ ಬ್ಯಾಟ್ಸ್​ಮನ್ ಆಗಿದ್ದ ರಿಯಾನ್ ಪರಾಗ್ ಅವರನ್ನು 7ನೇ ಕ್ರಮಾಂಕದಲ್ಲಿ ಇರಿಸಲಾಗಿತ್ತು. ಪಂದ್ಯ ಅಂತಿಮ ಘಟ್ಟದಲ್ಲಿ ತಮ್ಮಗಿಂತ ಉತ್ತಮವಾಗಿ ಬ್ಯಾಟ್ ಮಾಡಬಲ್ಲ ಆಟಗಾರನಿಗೆ ಅವಕಾಶ ನೀಡುವ ಸಲುವಾಗಿ ಅಶ್ವಿನ್ ರಿಟೈರ್ಡ್ ಔಟ್ ನೀಡುವ ಮೂಲಕ ಪೆವಿಲಿಯನ್​ಗೆ ಮರಳಿದ್ದರು. ಈ ವೇಳೆ ಕಣಕ್ಕಿಳಿದ ರಿಯಾನ್ ಪರಾಗ್ ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು 165 ರನ್‌ಗಳಿಗೆ ಕೊಂಡೊಯ್ದರು. ಈ ಪಂದ್ಯವನ್ನು ರಾಯಲ್ಸ್ ಮೂರು ರನ್‌ಗಳಿಂದ ಗೆದ್ದುಕೊಂಡಿತು.

ಅಂತಿಮ ಹಂತದಲ್ಲಿ ಬ್ಯಾಟಿಂಗ್​ನಿಂದ ಹಿಂದೆ ಸರಿದ ಅಶ್ವಿನ್ ಅವರ ಈ ನಿರ್ಧಾರದಿಂದ ಕೋಚ್ ಕುಮಾರ್ ಸಂಗಾಕ್ಕರ ಸಂತಸಗೊಂಡಿದ್ದಾರೆ. ಒಬ್ಬ ಆಟಗಾರನೇ ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಪಂದ್ಯದ ಫಲಿತಾಂಶವನ್ನು ಬದಲಿಸುತ್ತದೆ. ಅದರಂತೆ ನಾವು 3 ರನ್​ಗಳಿಂದ ಗೆದ್ದಿದ್ದೇವೆ. ಇಂತಹ ಪ್ರಯೋಗಗಳು ಮುಂದಿನ ಪಂದ್ಯಗಳಲ್ಲೂ ಕಂಡು ಬರಲಿದೆ ಎಂದು ರಾಜಸ್ಥಾನ್ ರಾಯಲ್ಸ್ ಕೋಚ್ ಸಂಗಾಕ್ಕರ ಹೇಳಿದ್ದಾರೆ.

ಒಟ್ಟಿನಲ್ಲಿ ಐಪಿಎಲ್​ ಇತಿಹಾಸದಲ್ಲೇ ಮೊದಲ ಬಾರಿಗೆ ಔಟ್ ಆಗದೇ ರಿಟೈರ್ಡ್ ಔಟ್ ಘೋಷಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸದ ಭಾಗವಾಗಿದ್ದಾರೆ. ಅವರ ಈ ನಿರ್ಧಾರವು ತಂಡದ ಗೆಲುವಿಗೂ ಕೂಡ ಕಾರಣವಾಗಿದ್ದು ಈಗ ವಿಶೇಷ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?