Suryakumar Yadav: ಸೂರ್ಯಕುಮಾರ್ ಅವರ ನಮಸ್ತೆ ಸೆಲೆಬ್ರೇಷನ್ ಹಿಂದಿದೆ ಒಂದು ಕಾರಣ
Suryakumar Yadav 'Namaste' celebration: ಐವತ್ತು ರನ್ ಪೂರೈಸಿದ ನಂತರ ಪ್ರೇಕ್ಷಕರನ್ನು ನೋಡುತ್ತಲೇ ಬ್ಯಾಟ್ ಎತ್ತಿ ಎರಡೂ ಕೈಗಳನ್ನು ಮೇಲಕ್ಕೆ ತೆಗೆದುಕೊಂಡು ‘ ನಮಸ್ತೆ’ ಎಂದಿದ್ದರು.

IPL 2022: ಐಪಿಎಲ್ ಸೀಸನ್ 15 ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸತತ ಸೋಲು ಕಂಡಿರಬಹುದು. ಆದರೆ ತಂಡದ ಪರ ಬಲಗೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಅರ್ಧ ಶತಕಗಳನ್ನು ಬಾರಿಸಿ ಮಿಂಚಿದ್ದಾರೆ. ಸದ್ಯ ಸೂರ್ಯಕುಮಾರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದಲ್ಲಿ ಅವರು 37 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದ್ದರು. ಈ ಅರ್ಧಶತಕವನ್ನು ಸೂರ್ಯಕುಮಾರ್ ಯಾದವ್ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದರು.
ಐವತ್ತು ರನ್ ಪೂರೈಸಿದ ನಂತರ ಪ್ರೇಕ್ಷಕರನ್ನು ನೋಡುತ್ತಲೇ ಬ್ಯಾಟ್ ಎತ್ತಿ ಎರಡೂ ಕೈಗಳನ್ನು ಮೇಲಕ್ಕೆ ತೆಗೆದುಕೊಂಡು ‘ ನಮಸ್ತೆ’ ಎಂದಿದ್ದರು. ಸೂರ್ಯಕುಮಾರ್ ಯಾದವ್ ಅವರ ಈ ವಿಶೇಷ ಸೆಲೆಬ್ರೇಷನ್ಗೆ ಕಾರಣವೇನು ಎಂಬುದು ಇದೀಗ ಬಹಿರಂಗವಾಗಿದೆ.
ಮುಂಬೈ ಇಂಡಿಯನ್ಸ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸೂರ್ಯಕುಮಾರ್ ಅವರ ಫೋಟೋ ಮತ್ತು ಅವರ ಪೋಷಕರ ಫೋಟೋವನ್ನು ಹಂಚಿಕೊಂಡಿದ್ದಾರೆ. ಫ್ರಾಂಚೈಸ್ ಶೀರ್ಷಿಕೆಯಲ್ಲಿ ಬರೆದಿದೆ, ‘ಆಚರಣೆಯ ಹಿಂದಿನ ಕಾರಣ! ಮನೆಯವರ ಮುಂದೆ ಆಡುವುದಕ್ಕಿಂತ ವಿಶೇಷವಾದದ್ದೇನೂ ಇರಲಾರದು. ಸೂರ್ಯಕುಮಾರ್ ಐಪಿಎಲ್ 15ನೇ ಸೀಸನ್‌ನಲ್ಲಿ 164.38 ಸ್ಟ್ರೈಕ್ ರೇಟ್‌ನಲ್ಲಿ 2 ಪಂದ್ಯಗಳಲ್ಲಿ 120 ರನ್ ಗಳಿಸಿದ್ದಾರೆ, ಇದರಲ್ಲಿ ಔಟಾಗದೆ 68 ಅವರ ಅತ್ಯುತ್ತಮ ಸ್ಕೋರ್ ಎಂದು ಬರೆದುಕೊಂಡಿದೆ.
ಅಂದರೆ ತಮ್ಮ ಪೋಷಕರ ಮುಂದೆ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿ ನಮಸ್ತೆ ಎಂದಿದ್ದರು. ಈ ಮೂಲಕ ತಮ್ಮ ಹಾಫ್ ಸೆಂಚುರಿಯನ್ನು ಪೋಷಕರಿಗೆ ಅರ್ಪಿಸಿದ್ದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಮಗನನ್ನು ಪ್ರೋತ್ಸಾಹಿಸಲು ಅವರ ತಂದೆ ಅಶೋಕ್ ಕುಮಾರ್ ಯಾದವ್ ಮತ್ತು ತಾಯಿ ಸ್ವಪ್ನಾ ಯಾದವ್ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಬ್ಯಾಟ್ಸ್‌ಮನ್ ತನ್ನ ಪೋಷಕರನ್ನು ನಿರಾಸೆಗೊಳಿಸಲಿಲ್ಲ. ಭರ್ಜರಿ ಅರ್ಧಶತಕ ಬಾರಿಸಿ ಸೂರ್ಯ ಮಿಂಚಿದ್ದರು. ಇದಾಗ್ಯೂ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 7 ವಿಕೆಟ್ಗಳಿಂದ ಹೀನಾಯವಾಗಿ ಸೋಲನುಭವಿಸಿತು.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?