IPL 2022: ಬಾಂಗ್ಲಾ ವೇಗಿಯ ಮೇಲೆ ಲಕ್ನೋ ಸೂಪರ್ ಜೈಂಟ್ಸ್ ಕಣ್ಣು..!

IPL 2022: ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀಗಿದೆ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ದುಷ್ಮಂತ ಚಮೀರಾ

IPL 2022: ಬಾಂಗ್ಲಾ ವೇಗಿಯ ಮೇಲೆ ಲಕ್ನೋ ಸೂಪರ್ ಜೈಂಟ್ಸ್ ಕಣ್ಣು..!
Taskin Ahmed
Updated By: ಝಾಹಿರ್ ಯೂಸುಫ್

Updated on: Mar 21, 2022 | 4:29 PM

ಐಪಿಎಲ್ ಸೀಸನ್ 15 ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್​ ತಂಡದಿಂದ ಸ್ಟಾರ್ ಆಲ್​ರೌಂಡರ್ ಮಾರ್ಕ್​ ವುಡ್ ಹೊರನಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿದ್ದ ಮಾರ್ಕ್​ ವುಡ್​ ಇದೀಗ ಐಪಿಎಲ್​ ಟೂರ್ನಿಯಿಂದಲೇ ಹಿಂದೆ ಸರಿದಿದ್ದಾರೆ. ಹೀಗಾಗಿ ಲಕ್ನೋ ತಂಡವು ಬದಲಿ ಆಟಗಾರನ ಆಯ್ಕೆ ಮುಂದಾಗಿದೆ. ಈ ಬಾರಿ ಮೆಗಾ ಹರಾಜು ಪಟ್ಟಿಯಲ್ಲಿರುವ ಅನ್​ಸೋಲ್ಡ್ ಆಟಗಾರರಿಂದ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಿದ್ದು, ಹೀಗಾಗಿ ಮಾರ್ಕ್​ ವುಡ್ ಸ್ಟಾನದಲ್ಲಿ ಯಾರಿಗೆ ಚಾನ್ಸ್​ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಮಾರ್ಕ್​ ವುಡ್ ಬದಲಿ ಆಟಗಾರನಾಗಿ ಬಾಂಗ್ಲಾದೇಶದ ಯುವ ವೇಗಿಯನ್ನು ಸಂಪರ್ಕಿಸಿದ್ದಾರೆ.

ಬಾಂಗ್ಲಾ ವೇಗಿ ತಸ್ಕೀನ್ ಅಹ್ಮದ್ ಆಯ್ಕೆಗೆ ಲಕ್ನೋ ಫ್ರಾಂಚೈಸಿ ಮುಂದಾಗಿದೆ. ಇದಾಗ್ಯೂ ತಸ್ಕೀನ್ ಕಡೆಯಿಂದ ಇನ್ನೂ ಕೂಡ ಒಪ್ಪಿಗೆ ಬಂದಿಲ್ಲ. ಏಕೆಂದರೆ ತಸ್ಕೀನ್ ಪ್ರಸ್ತುತ ಬಾಂಗ್ಲಾದೇಶ ತಂಡದೊಂದಿಗೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿವೆ. ಅದರ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಹೀಗಾಗಿ ತಸ್ಕೀನ್ ಅಹ್ಮದ್ ಅವರ ಲಭ್ಯತೆಯ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಾತುಕತೆಯನ್ನೂ ಕೂಡ ನಡೆಸಿದ್ದಾರೆ.

ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಎನ್​ಒಸಿ ನೀಡಿದರೆ ತಸ್ಕೀನ್ ಅಹ್ಮದ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 28 ರಂದು ಆಡಲಿದ್ದು, ಮೊದಲ ಎದುರಾಳಿಯಾಗಿ ಗುಜರಾತ್ ಟೈಟನ್ಸ್ ತಂಡ ಕಾಣಿಸಿಕೊಳ್ಳಲಿದೆ. ಇದರೊಂದಿಗೆ ಹೊಸ ಎರಡು ತಂಡಗಳು ಐಪಿಎಲ್ ಅಭಿಯಾನ ಆರಂಭಿಸಲಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀಗಿದೆ:
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಬದೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?