IPL 2022 Auction: RCB ತಂಡಕ್ಕೆ ಆಸ್ಟ್ರೇಲಿಯಾ ವೇಗಿ ಎಂಟ್ರಿ..!

| Updated By: ಝಾಹಿರ್ ಯೂಸುಫ್

Updated on: Feb 12, 2022 | 6:06 PM

IPL 2022 Mega Auction: ಓಪನರ್​ಗಳ ಪಟ್ಟಿಯಲ್ಲಿ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ.ಗೆ ಆಯ್ಕೆ ಮಾಡಿಕೊಂಡಿದೆ. ಇದರ ಜೊತೆಗೆ ಹರ್ಷಲ್ ಪಟೇಲ್ ಅವರನ್ನು 10.75 ಕೋಟಿ ನೀಡಿ ಖರೀದಿಸಿದೆ.

IPL 2022 Auction: RCB ತಂಡಕ್ಕೆ ಆಸ್ಟ್ರೇಲಿಯಾ ವೇಗಿ ಎಂಟ್ರಿ..!
IPL 2022 Mega Auction
Follow us on

ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಇದುವರೆಗೆ ಐದು ಆಟಗಾರನನ್ನು ಖರೀದಿಸಿದೆ. ಇದರಲ್ಲಿ ಇಬ್ಬರು ವೇಗಿಗಳು ಎಂಬುದು ವಿಶೇಷ. ಅದರಂತೆ ಇದೀಗ ಆರ್​ಸಿಬಿ ತಂಡಕ್ಕೆ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಪರ ಆಡಿದ್ದ ಹ್ಯಾಝಲ್​ವುಡ್​ ಅವರನ್ನು ಈ ಬಾರಿ ಆರ್​ಸಿಬಿ 7.75 ಕೋಟಿ ನೀಡಿ ಖರೀದಿಸಿದೆ. ಇದಕ್ಕೂ ಮುನ್ನ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಅವರನ್ನು 5.50 ಕೋಟಿ ನೀಡಿ ಆರ್​ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದರೊಂದಿಗೆ ಆರ್​ಸಿಬಿ ತಂಡಕ್ಕೆ ವಿಕೆಟ್ ಕೀಪರ್​ ಆಯ್ಕೆಯಾಗಿದೆ. ಹಾಗೆಯೇ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಆರ್​ಸಿಬಿ ಶ್ರೀಲಂಕಾ ಆಲ್​ರೌಂಡರ್ ವನಿಂದು ಹಸರಂಗ ಅವರನ್ನು ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿದೆ.

ಇನ್ನು ಓಪನರ್​ಗಳ ಪಟ್ಟಿಯಲ್ಲಿ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ.ಗೆ ಆಯ್ಕೆ ಮಾಡಿಕೊಂಡಿದೆ. ಇದರ ಜೊತೆಗೆ ಹರ್ಷಲ್ ಪಟೇಲ್ ಅವರನ್ನು 10.75 ಕೋಟಿ ನೀಡಿ ಖರೀದಿಸಿದೆ. ಅದರಂತೆ ಇದೀಗ ಆರ್​ಸಿಬಿ ತಂಡದಲ್ಲಿ 8 ಆಟಗಾರರು ಇದ್ದಾರೆ. ಈ ಹಿಂದೆ ಆರ್​ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್​ ಹಾಗೂ ಫಾಫ್ ಡುಪ್ಲೆಸಿಸ್ ಕೂಡ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದುವರೆಗೆ ಹರಾಜಾಗಿರುವ ಆಟಗಾರರ ಪಟ್ಟಿ:

1) ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 8.25 ಕೋಟಿ ರೂ

2) ರವಿಚಂದ್ರನ್ ಅಶ್ವಿನ್ – ರಾಜಸ್ಥಾನ್ ರಾಯಲ್ಸ್ – 5 ಕೋಟಿ ರೂ

3) ಪ್ಯಾಟ್ ಕಮ್ಮಿನ್ಸ್ – ಕೋಲ್ಕತ್ತಾ ನೈಟ್ ರೈಡರ್ಸ್ – 7.25 ಕೋಟಿ ರೂ

4) ಕಗಿಸೊ ರಬಾಡ – ಪಂಜಾಬ್ ಕಿಂಗ್ಸ್ – 9.25 ಕೋಟಿ ರೂ

5) ಟ್ರೆಂಟ್ ಬೌಲ್ಟ್ – ರಾಜಸ್ಥಾನ್ ರಾಯಲ್ಸ್ – 8 ಕೋಟಿ ರೂ

6) ಶ್ರೇಯಸ್ ಅಯ್ಯರ್ – ಕೋಲ್ಕತ್ತಾ ನೈಟ್ ರೈಡರ್ಸ್ – ರೂ 12.25 ಕೋಟಿ

7) ಮೊಹಮ್ಮದ್ ಶಮಿ – ಗುಜರಾತ್ ಟೈಟಾನ್ಸ್ – ರೂ. 6.25 ಕೋಟಿ

8) ಫಾಫ್ ಡು ಪ್ಲೆಸಿಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 7 ಕೋಟಿ ರೂ

9) ಕ್ವಿಂಟನ್ ಡಿ ಕಾಕ್ – ಲಕ್ನೋ ಸೂಪರ್ ಜೈಂಟ್ಸ್ – ರೂ 6.75 ಕೋಟಿ

10) ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – 6.25 ಕೋಟಿ ರೂ

11) ಮನೀಶ್ ಪಾಂಡೆ – ಲಕ್ನೋ ಸೂಪರ್ ಜೈಂಟ್ಸ್ – ರೂ 4.60 ಕೋಟಿ

12) ಶಿಮ್ರಾನ್ ಹೆಟ್ಮೆಯರ್ – ರಾಜಸ್ಥಾನ್ ರಾಯಲ್ಸ್ – ರೂ 8.50 ಕೋಟಿ

13) ರಾಬಿನ್ ಉತ್ತಪ್ಪ – ಚೆನ್ನೈ ಸೂಪರ್ ಕಿಂಗ್ಸ್ – 2 ಕೋಟಿ ರೂ

14) ಜೇಸನ್ ರಾಯ್ – ಗುಜರಾತ್ ಟೈಟಾನ್ಸ್ – 2 ಕೋಟಿ ರೂ

15) ಡೇವಿಡ್ ಮಿಲ್ಲರ್ – ಹರಾಜಾಗಿಲ್ಲ

16) ದೇವದತ್ ಪಡಿಕ್ಕಲ್ – ರಾಜಸ್ಥಾನ್ ರಾಯಲ್ಸ್ – ರೂ 7.75 ಕೋಟಿ

17) ಸುರೇಶ್ ರೈನಾ – ಹರಾಜಾಗಿಲ್ಲ

18) ಸ್ಟೀವ್ ಸ್ಮಿತ್ – ಹರಾಜಾಗಿಲ್ಲ

19) ಡ್ವೇನ್ ಬ್ರಾವೋ – ಚೆನ್ನೈ ಸೂಪರ್ ಕಿಂಗ್ಸ್ – 4.40 ಕೋಟಿ ರೂ

20) ನಿತೀಶ್ ರಾಣಾ – ಕೋಲ್ಕತ್ತಾ ನೈಟ್ ರೈಡರ್ಸ್ – 8 ಕೋಟಿ ರೂ

21) ಜೇಸನ್ ಹೋಲ್ಡರ್ – ಲಕ್ನೋ ಸೂಪರ್ ಜೈಂಟ್ಸ್ – ರೂ 8.75 ಕೋಟಿ

22) ಶಾಕಿಬ್ ಅಲ್ ಹಸನ್ – ಹರಾಜಾಗಿಲ್ಲ

23) ಹರ್ಷಲ್ ಪಟೇಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ ರೂ.

24) ದೀಪಕ್ ಹೂಡಾ – ಲಕ್ನೋ ಸೂಪರ್ ಜೈಂಟ್ಸ್ – ರೂ 5.75 ಕೋಟಿ

25) ವನಿಂದು ಹಸರಂಗ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ ರೂ.

26) ವಾಷಿಂಗ್ಟನ್ ಸುಂದರ್ – ಸನ್ ರೈಸರ್ಸ್ ಹೈದರಾಬಾದ್ – 8.75 ಕೋಟಿ ರೂ

27) ಕೃನಾಲ್ ಪಾಂಡ್ಯ – ಲಕ್ನೋ ಸೂಪರ್ ಜೈಂಟ್ಸ್ – ರೂ 8.25 ಕೋಟಿ

28) ಮಿಚೆಲ್ ಮಾರ್ಷ್ – ಡೆಲ್ಲಿ ಕ್ಯಾಪಿಟಲ್ಸ್ – 6.50 ಕೋಟಿ ರೂ

29) ಮೊಹಮ್ಮದ್ ನಬಿ – ಹರಾಜಾಗಿಲ್ಲ

30) ಮ್ಯಾಥ್ಯೂ ವೇಡ್ – ಹರಾಜಾಗಿಲ್ಲ

31) ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – 6.75 ಕೋಟಿ ರೂ

32) ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – 15.25 ಕೋಟಿ ರೂ

33) ಜಾನಿ ಬೈರ್‌ಸ್ಟೋ – ಪಂಜಾಬ್ ಕಿಂಗ್ಸ್ – 6.75 ಕೋಟಿ ರೂ

34) ದಿನೇಶ್ ಕಾರ್ತಿಕ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 5.50 ಕೋಟಿ ರೂ

35) ವೃದ್ಧಿಮಾನ್ ಸಹಾ – ಹರಾಜಾಗಿಲ್ಲ

36) ಸ್ಯಾಮ್ ಬಿಲ್ಲಿಂಗ್ಸ್ – ಹರಾಜಾಗಿಲ್ಲ

37) ನಿಕೋಲಸ್ ಪೂರನ್ – ಸನ್ ರೈಸರ್ಸ್ ಹೈದರಾಬಾದ್ – 10.75 ಕೋಟಿ ರೂ

38) ಟಿ ನಟರಾಜನ್ – ಸನ್ ರೈಸರ್ಸ್ ಹೈದರಾಬಾದ್ – 4 ಕೋಟಿ ರೂ

39) ದೀಪಕ್ ಚಹಾರ್ – ಚೆನ್ನೈ ಸೂಪರ್ ಕಿಂಗ್ಸ್ – 14 ಕೋಟಿ ರೂ

40) ಉಮೇಶ್ ಯಾದವ್ – ಹರಾಜಾಗಿಲ್ಲ

41) ಪ್ರಸಿದ್ಧ್ ಕೃಷ್ಣ – ರಾಜಸ್ಥಾನ್ ರಾಯಲ್ಸ್ – 10 ಕೋಟಿ ರೂ

42) ಲಾಕಿ ಫರ್ಗುಸನ್ – ಗುಜರಾತ್ ಟೈಟಾನ್ಸ್ – 10 ಕೋಟಿ ರೂ

43) ಜೋಶ್ ಹ್ಯಾಜಲ್‌ವುಡ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 7.75 ಕೋಟಿ

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಐಪಿಎಲ್​ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

(IPL 2022 Mega Auction: Josh Hazelwood SOLD to RCB)

Published On - 6:05 pm, Sat, 12 February 22