IPL 2022 Mega Auction: ಆರ್ಸಿಬಿ ತಂಡಕ್ಕೆ ಕಂಬ್ಯಾಕ್ ಮಾಡಿದ ಮಾಜಿ ಆಟಗಾರ
ದೀಗ ಆರ್ಸಿಬಿ ತಂಡದಲ್ಲಿ 7 ಆಟಗಾರರು ಇದ್ದಾರೆ. ಈ ಹಿಂದೆ ಆರ್ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡವು ನಾಲ್ಕನೇ ಆಟಗಾರನನ್ನು ಕೂಡ ಖರೀದಿಸಿದೆ. ಈ ಹಿಂದೆ ಆರ್ಸಿಬಿ ಪರ ಆಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರನ್ನು 5.50 ಕೋಟಿ ನೀಡಿ ಆರ್ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರೊಂದಿಗೆ ಆರ್ಸಿಬಿ ತಂಡಕ್ಕೆ ವಿಕೆಟ್ ಕೀಪರ್ ಆಯ್ಕೆಯಾಗಿದೆ. ಇದಕ್ಕೂ ಮುನ್ನ ಆರ್ಸಿಬಿ ಶ್ರೀಲಂಕಾ ಆಲ್ರೌಂಡರ್ ವನಿಂದು ಹಸರಂಗ ಅವರನ್ನು ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿತು.
ಇದಕ್ಕೂ ಮುನ್ನ ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ. ಹಾಗೂ ಹರ್ಷಲ್ ಪಟೇಲ್ ಅವರನ್ನು 10.75 ಕೋಟಿ ನೀಡಿ ಖರೀದಿಸಿದೆ. ಅದರಂತೆ ಇದೀಗ ಆರ್ಸಿಬಿ ತಂಡದಲ್ಲಿ 7 ಆಟಗಾರರು ಇದ್ದಾರೆ. ಈ ಹಿಂದೆ ಆರ್ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹಾಗೂ ಫಾಫ್ ಡುಪ್ಲೆಸಿಸ್ ಕೂಡ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡದಲ್ಲಿದ್ದ ದಿನೇಶ್ ಕಾರ್ತಿಕ್ ಸಾಧಾರಣ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಷ್ಟೇ ಅಲ್ಲದೆ ಈ ಬಾರಿ ತಂಡದಿಂದ ಕೈ ಬಿಡಲಾಗಿತ್ತು. ಇದೀಗ ಬರೋಬ್ಬರಿ 5.50 ಕೋಟಿ ಮೊತ್ತದೊಂದಿಗೆ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಸುತ್ತಿನಲ್ಲಿ ಹರಾಜಾದ ಆಟಗಾರರು:
ಶಿಖರ್ ಧವನ್- 8.25 ಕೋಟಿ (ಪಂಜಾಬ್ ಕಿಂಗ್ಸ್)
ರವಿಚಂದ್ರನ್ ಅಶ್ವಿನ್- 5 ಕೋಟಿ ( ರಾಜಸ್ಥಾನ್ ರಾಯಲ್ಸ್)
ಪ್ಯಾಟ್ ಕಮಿನ್ಸ್- 7.25 ಕೋಟಿ (ಕೊಲ್ಕತ್ತಾ ನೈಟ್ ರೈಡರ್ಸ್)
ಕಗಿಸೋ ರಬಾಡ- 9.25 ಕೋಟಿ (ಪಂಜಾಬ್ ಕಿಂಗ್ಸ್)
ಟ್ರೆಂಟ್ ಬೌಲ್ಟ್- 8 ಕೋಟಿ (ರಾಜಸ್ಥಾನ್ ರಾಯಲ್ಸ್)
ಶ್ರೇಯಸ್ ಅಯ್ಯರ್- 12.25 ಕೋಟಿ (ಕೊಲ್ಕತ್ತಾ ನೈಟ್ ರೈಡರ್ಸ್)
ಮೊಹಮ್ಮದ್ ಶಮಿ- 6.25 ಕೋಟಿ (ಗುಜರಾತ್ ಟೈಟನ್ಸ್)
ಫಾಫ್ ಡುಪ್ಲೆಸಿಸ್- 7 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಕ್ವಿಂಟನ್ ಡಿಕಾಕ್- 6.75 ಕೋಟಿ (ಲಕ್ನೋ ಸೂಪರ್ ಜೈಂಟ್ಸ್)
ಡೇವಿಡ್ ವಾರ್ನರ್- 6.25 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ