IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
IPL 2022 Mega Auction: ಐಪಿಎಲ್ ಸೀಸನ್ 15 ಗಾಗಿ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದ್ದು, ಈ ಬಾರಿ ಯಾವ ತಂಡ ಯಾರಿಗೆ ಎಷ್ಟು ಮೊತ್ತ ಪಾವತಿಸಲಿದೆ ಕಾದು ನೋಡಬೇಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೆ ಇನ್ನು ದಿನಗಳು ಮಾತ್ರ ಉಳಿದಿವೆ. ಈ ಬಾರಿ ಹರಾಜಿನಲ್ಲಿ 8 ತಂಡಗಳ ಬದಲಿಗೆ 10 ತಂಡಗಳು ಇರಲಿರುವುದು ವಿಶೇಷ. ಅದರಂತೆ ಹಳೆಯ ಎಂಟು ತಂಡಗಳ ಜೊತೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಆಟಗಾರರ ಖರೀದಿಗೆ ಪೈಪೋಟಿ ನಡೆಸಲಿದೆ. ಇನ್ನು ಈ ಹಿಂದಿನ ಐಪಿಎಲ್ ಸೀಸನ್ಗಳ ಬಗ್ಗೆ ನೋಡುವುದಾದರೆ, ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ಮುಂಬೈ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ , ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗೆ ಪ್ರಶಸ್ತಿ ಗೆಲ್ಲದ ತಂಡಗಳ ಪಟ್ಟಿಯಲ್ಲಿವೆ. ಆದರೆ ಈ ತಂಡಗಳು ಅತ್ಯುತ್ತಮ ಆಟಗಾರರನ್ನು ಖರೀದಿಸಿಲ್ಲ ಎಂದರ್ಥವಲ್ಲ. ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಹರಾಜಿನಲ್ಲಿ 3 ತಂಡಗಳು 800 ಕೋಟಿಗೂ ಅಧಿಕ ಮೊತ್ತ ಖರ್ಚು ಮಾಡಿದೆ. ಈ ಪಟ್ಟಿಯಲ್ಲಿ ಆರ್‌ಸಿಬಿ ಕೂಡ ಇರುವುದು ವಿಶೇಷ.
ಆರ್‌ಸಿಬಿ ತಂಡವು ಕಳೆದ 14 ಸೀಸನ್ಗಳ ಹರಾಜಿನಲ್ಲಿ ಆಟಗಾರರ ಖರೀದಿಗೆ ಒಟ್ಟು 855 ಕೋಟಿ ರೂ. ಖರ್ಚು ಮಾಡಿದೆ. ಈ ಮೂಲಕ ಆಟಗಾರರಿಗೆ ಅತೀ ಹೆಚ್ಚು ಹಣ ವ್ಯಯಿಸಿದ ಫ್ರಾಂಚೈಸಿ ಎನಿಸಿಕೊಂಡಿದೆ. ಇನ್ನು 2ನೇ ಸ್ಥಾನದಲ್ಲಿ, ಮುಂಬೈ ಇಂಡಿಯನ್ಸ್ ಇದ್ದು, ಮುಂಬೈ ಒಟ್ಟು 836 ಕೋಟಿ ಖರ್ಚು ಮಾಡಿದ್ದಾರೆ. ಹಾಗೆಯೇ ಕೋಲ್ಕತ್ತಾ ನೈಟ್ ರೈಡರ್ಸ್ 807 ಕೋಟಿ ಖರ್ಚು ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. ಇಲ್ಲಿ ವಿಶೇಷ ಎಂದರೆ ಇಷ್ಟೆಲ್ಲಾ ಖರ್ಚು ಮಾಡಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗಿದ್ದರೆ, ಕೆಕೆಆರ್ ತಂಡವೂ ಎರಡು ಬಾರಿ ಚಾಂಪಿಯನ್ ಆಗಿದೆ. ಇದಾಗ್ಯೂ ಅತೀ ಹೆಚ್ಚು ಖರ್ಚು ಮಾಡಿದ ಆರ್‌ಸಿಬಿ ಮಾತ್ರ ಇದುವರೆಗೆ ಕಪ್ ಗೆದ್ದಿಲ್ಲ.
ಇನ್ನುಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಹರಾಜಿನಲ್ಲಿ 779 ಕೋಟಿ ರೂ. ಖರ್ಚು ಮಾಡಿದೆ. ಹಾಗೆಯೇ 716 ಕೋಟಿ ರೂ. ಖರ್ಚು ಮಾಡಿರುವ ಸಿಎಸ್ಕೆ ತಂಡವು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಪಂಜಾಬ್ ಕಿಂಗ್ಸ್ 702 ಕೋಟಿ ರೂ. ಖರ್ಚು ಮಾಡಿದರೆ, ಸನ್ ರೈಸರ್ಸ್ ಹೈದರಾಬಾದ್ 574 ಕೋಟಿ ರೂ. ವ್ಯಯಿಸಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 552 ಕೋಟಿ ರೂ. ಖರ್ಚು ಮಾಡುವ ಹರಾಜಿನಲ್ಲಿ ಅತೀ ಕಡಿಮೆ ಮೊತ್ತ ಪಾವತಿಸಿದ ಫ್ರಾಂಚೈಸಿ ಎನಿಸಿಕೊಂಡಿದೆ.
ಇದೀಗ ಐಪಿಎಲ್ ಸೀಸನ್ 15 ಗಾಗಿ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದ್ದು, ಈ ಬಾರಿ ಯಾವ ತಂಡ ಯಾರಿಗೆ ಎಷ್ಟು ಮೊತ್ತ ಪಾವತಿಸಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(IPL 2022: RCB has so far spent rs 855 crore on players)