ಕೇವಲ 18 ಎಸೆತಗಳಲ್ಲಿ ಅರ್ಧಶತಕ! ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅಬ್ಬರಿಸಿದ ಮಾಜಿ ಆರ್​ಸಿಬಿ ಆಟಗಾರ

| Updated By: ಪೃಥ್ವಿಶಂಕರ

Updated on: Feb 07, 2022 | 6:22 PM

ಆಡಮ್ ಮಿಲ್ನೆ 21 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಆದರೆ ಈ ಬಾರಿ ಅವರು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಕೇವಲ 18 ಎಸೆತಗಳಲ್ಲಿ ಅರ್ಧಶತಕ! ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅಬ್ಬರಿಸಿದ ಮಾಜಿ ಆರ್​ಸಿಬಿ ಆಟಗಾರ
ಆಡಮ್ ಮಿಲ್ನೆ
Follow us on

ಐಪಿಎಲ್ 2022 (IPL 2022)ರ ಮೆಗಾ ಹರಾಜಿಗೆ ರಂಗ ಸಿದ್ಧವಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಮ್ಮ ಪಟ್ಟಿಯನ್ನು ಸಿದ್ಧಪಡಿಸಿವೆ ಎಂಬ ಸುದ್ದಿ ಬರುತ್ತಿದೆ. ಆದಾಗ್ಯೂ, ಈ ಮೆಗಾ ಹರಾಜಿನಲ್ಲಿ ( IPL 2022 Mega Auction ) 500 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ . ಅದೇ ಆಟಗಾರರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಸಹ ಆಟಗಾರನ ಹೆಸರೂ ಇದೆ. ಈ ಆಟಗಾರ 1.5 ಕೋಟಿ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಈ ಆಟಗಾರ ತನ್ನ ಆಲ್‌ರೌಂಡರ್ ಆಟದಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಅವನ ಪ್ರದರ್ಶನವೂ ಹರಾಜಿನಲ್ಲಿ ಮೂಲ ಬೆಲೆಗಿಂತ ಹೆಚ್ಚಾಗುವ ನಿರೀಕ್ಷೆ ಇದೆ. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ನ್ಯೂಜಿಲೆಂಡ್‌ನಲ್ಲಿ ನಡೆದ ಫೋರ್ಡ್ ಟ್ರೋಫಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಆಟಗಾರ ಆಡಮ್ ಮಿಲ್ನೆ. ಅವರು ಮೊದಲು ಬ್ಯಾಟ್‌ನಿಂದ ಮತ್ತು ನಂತರ ಚೆಂಡಿನೊಂದಿಗೆ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದರು.

ಆಡಮ್ ಮಿಲ್ನೆ ಪ್ರಾಥಮಿಕವಾಗಿ ಬೌಲರ್ ಆಗಿದ್ದಾರೆ. ಆದರೆ, ಫೋರ್ಡ್ ಟ್ರೋಫಿಯಲ್ಲಿ ಒಟಾಗೊ ವೋಲ್ಟ್ಸ್ ವಿರುದ್ಧ, ಅವರು ಸೆಂಟ್ರಲ್ ಸ್ಟ್ಯಾಗ್ಸ್‌ ಪರ ಚೆಂಡು ಮತ್ತು ಬ್ಯಾಟಿಂಗ್ ಎರಡರಲ್ಲೂ ತಮ್ಮ ಛಾಪು ಮೂಡಿಸಿದರು. ಐಪಿಎಲ್​ನಲ್ಲಿ ರೋಹಿತ್-ವಿರಾಟ್ ಜೊತೆ ಮಿಲ್ನೆ ಆಡಿದ್ದಾರೆ. ಅವರು ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.

18 ಎಸೆತಗಳಲ್ಲಿ ಅರ್ಧ ಶತಕ..
ಪ್ರಸಕ್ತ ಫೋರ್ಡ್ ಟ್ರೋಫಿಯಲ್ಲಿ ಆಡಮ್ ಮಿಲ್ನೆ ಅವರ ಪ್ರದರ್ಶನ ಅತ್ಯಂತ ಆಕರ್ಷಕವಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಸ್ಟಾಗ್ಸ್ 37 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು. ಈ ತಂಡ ಬೃಹತ್ ಸ್ಕೋರ್ ಗಳಿಸುವಲ್ಲಿ ಆಡಮ್ ಮಿಲ್ನೆ ಪಾತ್ರ ಪ್ರಮುಖವಾಗಿತ್ತು. ಇವರೊಂದಿಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ವಿಕೆಟ್‌ಕೀಪರ್ ವಿಗ್ಗಿನ್ಸ್ 80 ರನ್ ಗಳಿಸಿದರು. ವಿಲ್ ಯಂಗ್ 40 ರನ್ ಗಳಿಸಿದರೆ, ರಾಸ್ ಟೇಲರ್ 45 ರನ್ ಗಳಿಸಿದರು.

ಆಡಮ್ ಮಿಲ್ನೆ 21 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಆದರೆ ಈ ಬಾರಿ ಅವರು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಮಿಲ್ನೆ ಕೇವಲ ಬ್ಯಾಟ್‌ನಿಂದ ಮಾತ್ರ ಅಬ್ಬರಿಸಲಿಲ್ಲ. ಬದಲಿಗೆ ಅವರು ಚೆಂಡಿನ ಮೂಲಕ ವಿಧ್ವಂಸಕರಾದರು.

4 ಓವರ್​ಗಳಲ್ಲಿ 15 ರನ್ ನೀಡಿ 2 ವಿಕೆಟ್ ..
ಬೃಹತ್ ಗುರಿ ಸಾಧಿಸುವ ಹಾದಿಯಲ್ಲಿ ಒಟಾಗೊ ವೋಲ್ಟ್ಸ್ ತಂಡ ವಿಫಲವಾಯಿತು. ಒಟಾಗೊ ವೋಲ್ಟ್ಸ್ ಬ್ಯಾಟ್ಸ್‌ಮನ್ ಪಾಲಿಗೆ ಆಡಮ್ ಮಿಲ್ನೆ ವಿಲನ್ ಆದರು. 4 ಓವರ್‌ಗಳಲ್ಲಿ 15 ರನ್‌ಗಳಿಗೆ ಇಬ್ಬರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಸೇರಿಸಿದರು. ಈ ಪಂದ್ಯದಲ್ಲಿ ಒಟಾಗೊ ವೋಲ್ಟ್ಸ್ 200 ರನ್‌ಗಳಿಂದ ಸೋತಿತ್ತು. ಒಟಾಗೊ ವೋಲ್ಟ್ಸ್‌ನ ಒಬ್ಬ ಬ್ಯಾಟ್ಸ್‌ಮನ್ ಬ್ಯಾಟಿಂಗ್‌ಗೆ ಬಾರದೆ ಉಳಿದ 9 ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ 114 ರನ್ ಗಳಿಸಿದರು.