ಇಂಡಿಯನ್ ಪ್ರೀಮಿಯರ್ ಲೀಗ್- 2022 (IPL 2022) ಮೆಗಾ ಹರಾಜು ಕೆಲವೇ ದಿನಗಳಲ್ಲಿ ನಡೆಯಲಿದೆ. ಫೆಬ್ರವರಿ 12 ಮತ್ತು 13 ರಂದು ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ . ಹರಾಜಿನಲ್ಲಿ ಒಟ್ಟು 1214 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ ಎರಡು ಹೊಸ ತಂಡಗಳು ಐಪಿಎಲ್‌ಗೆ ಸೇರ್ಪಡೆಗೊಂಡಿವೆ. ಇದರೊಂದಿಗೆ ಹತ್ತು ತಂಡಗಳು ಆಟಗಾರರಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ. ಈ ಬಾರಿ ಅತ್ಯಮೂಲ್ಯ ಆಟಗಾರ ಯಾರು ಎಂಬುದು ಕುತೂಹಲ ಮೂಡಿಸಿದೆ. ಆಲ್ ರೌಂಡರ್ ಕ್ರಿಸ್ ಮಾರಿಸ್ ಕಳೆದ ವರ್ಷ 16.25 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಅವರನ್ನು ರಾಜಸ್ಥಾನ್ ರಾಯಲ್ಸ್ (RR) ಖರೀದಿಸಿತು. ಅದೇ ಸಮಯದಲ್ಲಿ, ಈ ವರ್ಷದ ಹರಾಜಿನಲ್ಲಿ ಒಂದಕ್ಕಿಂತ ಹೆಚ್ಚು ಅನುಭವಿ ಆಟಗಾರರು ಇರಲಿದ್ದು ಅವರ ಬಿಡ್ ರೂ. 20 ಕೋಟಿಗೂ ಹೆಚ್ಚು ಇರಬಹುದೆಂದು ಊಹಿಸಲಾಗಿದೆ.
ಡೇವಿಡ್ ವಾರ್ನರ್
ಈ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಪ್ರಸ್ತುತ ಕ್ರಿಕೆಟ್ನ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ವಾರ್ನರ್‌ಗೆ ನಾಯಕತ್ವದ ಅನುಭವವೂ ಇದೆ. ಅವರ ನಾಯಕತ್ವದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ 2016 ರಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಸನ್‌ರೈಸರ್ಸ್ ಅವರನ್ನು ಬಿಡುಗಡೆ ಮಾಡಿದರೂ.. ವಾರ್ನರ್ ಅವರನ್ನು ಖರೀದಿಸಲು ಫ್ರಾಂಚೈಸಿಗಳ ನಡುವೆ ಪೈಪೋಟಿ ನಡೆಯಲಿದೆ. ಹರಾಜಿನಲ್ಲಿ ಅವರು 20 ಕೋಟಿ ಸ್ಲ್ಯಾಬ್ ದಾಟುತ್ತಾರೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ.
ಮಿಚೆಲ್ ಮಾರ್ಷ್
ಆಸ್ಟ್ರೇಲಿಯಾದ ಆಲ್ ರೌಂಡರ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸೀಮಿತ ಓವರ್‌ಗಳಲ್ಲಿ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20ಯಲ್ಲಿ ಆಸ್ಟ್ರೇಲಿಯಾ ಪರ ಸತತವಾಗಿ ಮಿಂಚಿದ್ದಾರೆ. ಮಾರ್ಷ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಶ್ರಮಿಸಬೇಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾರ್ಷ್‌ಗೆ ರೂ. 20 ಕೋಟಿಗೂ ಅಧಿಕ ಮೊತ್ತಕ್ಕೆ ಬಿಡ್ ಆಗಬಹುದೆಂದು ತೋರುತ್ತದೆ.
ಪ್ಯಾಟ್ ಕಮ್ಮಿನ್ಸ್
ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ. ಅವರು ವಿಶ್ವದ ನಂಬರ್ ಒನ್ ಬೌಲರ್ ಕೂಡ ಆಗಿದ್ದಾರೆ. ಟಿ20ಯಲ್ಲೂ ಅವರ ಪ್ರದರ್ಶನ ಆಕರ್ಷಕವಾಗಿತ್ತು. IPL 2020 ರಲ್ಲಿ KKR ಅವರಿಗೆ ರೂ. 15.50 ಕೋಟಿ ನೀಡಿತ್ತು. ಫ್ರಾಂಚೈಸಿ ಅವರನ್ನು 2021 ರಲ್ಲಿ ಬಿಡುಗಡೆ ಮಾಡಿತು. ಈ ಬಾರಿ ಕಮ್ಮಿನ್ಸ್ 20 ಕೋಟಿಗೂ ಹೆಚ್ಚು ದರವನ್ನು ಪಡೆಯಬಹುದೆಂದು ಊಹಿಸಲಾಗಿದೆ.
ಕ್ವಿಂಟನ್ ಡಿ ಕಾಕ್
ಈ ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪೂರ್ಣ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಡಿ ಕಾಕ್ ಶತಕ ಸಿಡಿಸಿದ್ದರು. ಈ ಇನ್ನಿಂಗ್ಸ್ ಬಳಿಕ ಐಪಿಎಲ್ ಹರಾಜಿನಲ್ಲಿ ಅವರ ಮೌಲ್ಯ ಹೆಚ್ಚಾಗಲಿದೆ. ಡಿಕಾಕ್ ಕೀಪಿಂಗ್ ಕೂಡ ಅದ್ಭುತವಾಗಿದೆ. ಏಕದಿನ ಸರಣಿಯಲ್ಲಿ ರಿಷಬ್ ಪಂತ್ ವೆಂಕಟೇಶ್ ಅಯ್ಯರ್ ಅವರನ್ನು ಸ್ಟಂಪ್ ಮಾಡುವ ಮೂಲಕ ಮಿಂಚಿದ್ದರು.
ಟ್ರೆಂಟ್ ಬೌಲ್ಟ್
ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಐಪಿಎಲ್‌ನ ಕೊನೆಯ ಋತುವಿನವರೆಗೆ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದರು. ಫ್ರಾಂಚೈಸ್ ಅವರನ್ನು ಬಿಡುಗಡೆ ಮಾಡಿತು. ಕಳೆದ ಎರಡು ಋತುಗಳಲ್ಲಿ ಬೋಲ್ಟ್ ಮುಂಬೈನ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಅವರು ವಿಶ್ವದ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅನೇಕ ಫ್ರಾಂಚೈಸಿಗಳು ಅವರ ಮೇಲೆ ಕೇಂದ್ರೀಕರಿಸಿವೆ. ಅವರನ್ನು ಖರೀದಿಸಲು ಫ್ರಾಂಚೈಸಿ ಭಾರಿ ಮೊತ್ತವನ್ನು ವ್ಯಯಿಸಬೇಕಾಗಬಹುದು.
ಇದನ್ನೂ ಓದಿ:IPL 2022: ಐಪಿಎಲ್ ಮೆಗಾ ಹರಾಜು ಬಗ್ಗೆ ಮತ್ತೊಂದು ಅಪ್ಡೇಟ್ ನೀಡಿದ ಬಿಸಿಸಿಐ