ಐಪಿಎಲ್ ಹರಾಜಿಗೆ ಮೂರು ವಾರಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಇದಾಗ್ಯೂ ಬಿಸಿಸಿಐ ಹರಾಜಿನ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ ಮುಂಬೈನಲ್ಲೇ ಮೆಗಾ ಹರಾಜು ನಡೆಸುವ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಚರ್ಚಿಸಿದ್ದು, ಹೀಗಾಗಿ ಬೆಂಗಳೂರಿನ ಬದಲು ಮುಂಬೈನಲ್ಲೇ ಹರಾಜು ನಡೆಯುವ ಸಾಧ್ಯತೆಯಿದೆ.