ICC Awards: ಅಶ್ವಿನ್ ಕೈತಪ್ಪಿದ ಅವಕಾಶ; ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಆಂಗ್ಲ ನಾಯಕ ಜೋ ರೂಟ್ ಪಾಲು
ICC Awards: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಅವರನ್ನು ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2021 ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಪ್ರದರ್ಶನದಿಂದಾಗಿ ಅವರು ಈ ಪ್ರಶಸ್ತಿಯನ್ನು ಪಡೆದರು.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಅವರನ್ನು ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2021 ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಪ್ರದರ್ಶನದಿಂದಾಗಿ ಅವರು ಈ ಪ್ರಶಸ್ತಿಯನ್ನು ಪಡೆದರು. ಟೆಸ್ಟ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಲು, ಜೋ ರೂಟ್ ನಾಲ್ಕು ದೊಡ್ಡ ಆಟಗಾರರೊಂದಿಗೆ ಪೈಪೋಟಿ ಎದುರಿಸಿದ್ದರು. ಅವರಲ್ಲಿ ಒಬ್ಬರು ಭಾರತದ ಆರ್. ಅಶ್ವಿನ್. ಇವರಲ್ಲಿ ಅಶ್ವಿನ್ ಹೊರತಾಗಿ ಶ್ರೀಲಂಕಾದ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ ಮತ್ತು ನ್ಯೂಜಿಲೆಂಡ್ ಆಲ್‌ರೌಂಡರ್ ಕೈಲ್ ಜೇಮಿಸನ್ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಅಂತಿಮವಾಗಿ ಜೋ ರೂಟ್ಗೆ ಪ್ರಶಸ್ತಿ ಒಲಿದಿದೆ.
ಕಳೆದ ವರ್ಷ ಅಂದರೆ 2021ರಲ್ಲಿ ಜೋ ರೂಟ್ ಒಟ್ಟು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 6 ಶತಕಗಳನ್ನು ಬಾರಿಸುವ ಮೂಲಕ ಒಟ್ಟು 1708 ರನ್ ಗಳಿಸಿದ್ದಾರೆ. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಒಟ್ಟಾರೆ ದಾಖಲೆಯ ಬಗ್ಗೆ ಹೇಳುವುದಾದರೆ, ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜೋ ರೂಟ್‌ಗಿಂತ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಮತ್ತು ವೆಸ್ಟ್ ಇಂಡೀಸ್‌ನ ವಿವ್ ರಿಚರ್ಡ್ಸ್ ಅವರ ಹೆಸರುಗಳು ಮಾತ್ರ ಕಂಡುಬರುತ್ತವೆ.
2021ರಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್ ಅವರ ಚಲನವಲನ ಸಾಕಷ್ಟು ಕಂಡುಬಂದಿದೆ. ಅವರು ಗಾಲೆ ಮತ್ತು ಚೆನ್ನೈನಲ್ಲಿ ಆಡಿದ ಟೆಸ್ಟ್‌ಗಳಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇದಲ್ಲದೇ ಲಾರ್ಡ್ಸ್ ಟೆಸ್ಟ್‌ನಲ್ಲಿ ಆಡಿದ ಅವರ ಇನ್ನಿಂಗ್ಸ್ ಕೂಡ ಅದ್ಭುತವಾಗಿತ್ತು. ಜೋ ರೂಟ್ ಬ್ಯಾಟ್ ಜೊತೆಗೆ ಚೆಂಡಿನಲ್ಲೂ ಅದ್ಭುತ ಕೆಲಸ ಮಾಡಿದರು. ಕಳೆದ ವರ್ಷ, ಅವರು ಅಹಮದಾಬಾದ್ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆಯುವದರೊಂದಿಗೆ ಒಟ್ಟು 15 ವಿಕೆಟ್‌ಗಳನ್ನು ಪಡೆದರು.
ಚೆನ್ನೈ ಟೆಸ್ಟ್‌ನಲ್ಲಿ 218 ರನ್‌ಗಳ ಸಾಟಿಯಿಲ್ಲದ ಇನ್ನಿಂಗ್ಸ್ ಕಳೆದ ವರ್ಷ ಶ್ರೀಲಂಕಾ ಪ್ರವಾಸದ ನಂತರ, ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು 337 ಎಸೆತಗಳಲ್ಲಿ 218 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತದ ಬೌಲಿಂಗ್ ಮುಂದೆ ಚೆನ್ನೈನ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಆಡಿದ ಈ ಇನ್ನಿಂಗ್ಸ್ಗೆ ಸರಿಸಾಟಿಯಿಲ್ಲ. ರೂಟ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಇಂಗ್ಲೆಂಡ್ ತಂಡ ಚೆನ್ನೈ ಟೆಸ್ಟ್‌ನಲ್ಲಿ 227 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.