Ravi Bishnoi: ಹೊಸ ತಂಡದಲ್ಲಿ ಚಾನ್ಸ್ ಸಿಗಲು ಕೆಎಲ್ ರಾಹುಲ್ ಕಾರಣ
IPL 2022 Mega Auction: ಪಂಜಾಬ್ ತಂಡದಲ್ಲಿದ್ದಾಗ ಯಾವಾಗಲೂ ರಾಹುಲ್ ಮತ್ತು ಕೋಚ್ ಅನಿಲ್ ಕುಂಬ್ಳೆ ಅವರಿಂದ ಬೆಂಬಲ ಸಿಗುತ್ತಿತ್ತು.
ಐಸಿಸಿ ಅಂಡರ್-19 ವಿಶ್ವಕಪ್ 2020 ರಲ್ಲಿ ತಮ್ಮ ಲೆಗ್ ಸ್ಪಿನ್‌ನಿಂದ ಪ್ರಭಾವಿತರಾದ ಯುವ ಬೌಲರ್ ರವಿ ಬಿಷ್ಣೋಯ್ ಐಪಿಎಲ್-2022 ರಲ್ಲಿ ಹೊಸ ಫ್ರಾಂಚೈಸಿಗಾಗಿ ಆಡಲಿದ್ದಾರೆ. ಕಳೆದ ಎರಡು ಸೀಸನ್ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿರುವ ಬಿಷ್ಣೋಯ್ ಅವರನ್ನು ಇದೀಗ ಹೊಸ ಫ್ರಾಂಚೈಸಿ ಲಕ್ನೋ ಖರೀದಿಸಿದೆ. ಲಕ್ನೋ ತಂಡವು 4 ಕೋಟಿ ರೂ. ನೀಡಿ ಯುವ ಸ್ಪಿನ್ನರ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಳೆದ ಸೀಸನ್ನಲ್ಲಿ 2 ಕೋಟಿ ಮೊತ್ತಕ್ಕೆ ಆಡಿದ್ದ ರವಿ ಬಿಷ್ಣೋಯ್ ಈ ಬಾರಿ ಡಬಲ್ ಮೊತ್ತ ಸಿಗಲು ನಾಯಕ ಕೆಎಲ್ ರಾಹುಲ್ ಕಾರಣ ಎಂದಿದ್ದಾರೆ.
“ಮೆಗಾ ಹರಾಜಿಗೂ ಮುನ್ನ ಹೊಸ ಫ್ರಾಂಚೈಸಿ ನನ್ನನ್ನು ಆಯ್ಕೆ ಮಾಡಿರುವುದು ನನಗೆ, ನನ್ನ ಕೋಚ್‌ಗಳಿಗೆ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ. ರಾಹುಲ್ ಭಾಯ್ ನನ್ನ ಪರವಾಗಿ ಮಾತನಾಡಿರಬೇಕು ಎಂದು ನಾನು ಭಾವಿಸುತ್ತೇನೆ. ಹೀಗಾಗಿಯೇ ಹೊಸ ಫ್ರಾಂಚೈಸಿ ನನ್ನನ್ನು ಖರೀದಿಸಿದೆ. ಈಗ ನನ್ನ ಗಮನವು ಹೊಸ ಐಪಿಎಲ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವುದು. ಅಲ್ಲದೆ ಪಂದ್ಯಗಳನ್ನು ಗೆಲ್ಲುವಂತೆ ಮಾಡುವುದು ಎಂದು ರವಿ ಬಿಷ್ಣೋಯ್ ಹೇಳಿದ್ದಾರೆ.
ಪಂಜಾಬ್ ತಂಡದಲ್ಲಿದ್ದಾಗ ಯಾವಾಗಲೂ ರಾಹುಲ್ ಮತ್ತು ಕೋಚ್ ಅನಿಲ್ ಕುಂಬ್ಳೆ ಅವರಿಂದ ಬೆಂಬಲ ಸಿಗುತ್ತಿತ್ತು. ಪಂಜಾಬ್ ಕಿಂಗ್ಸ್ 2020 ರಲ್ಲಿ ನನ್ನನ್ನು ಖರೀದಿಸಿತು ಮತ್ತು ನನಗೆ ಮೊದಲ ಸೀಸನ್ನಲ್ಲೇ ಆಡಲು ಅವಕಾಶ ಸಿಕ್ಕಿತು. ಎರಡು ವರ್ಷಗಳ ಕಾಲ ಅವರೊಂದಿಗೆ ಆಡಿದ ನನಗೆ ನಾಯಕ ರಾಹುಲ್ ಮತ್ತು ಕೋಚ್ ಅನಿಲ್ ಕುಂಬ್ಳೆ ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿತು. ಇದು ನನ್ನಂತಹ ಯುವ ಆಟಗಾರನಿಗೆ ದೊಡ್ಡ ಕ್ಷಣವಾಗಿದೆ. ಅಲ್ಲದೆ ಇದರಿಂದ ನನ್ನ ಆತ್ಮವಿಶ್ವಾಸ ಕೂಡ ಹೆಚ್ಚಾಗಿದೆ ಎಂದು ರವಿ ಬಿಷ್ಣೋಯ್ ಹೇಳಿದ್ದಾರೆ.
ಇನ್ನು ಹೊಸ ತಂಡದ ಬಗ್ಗೆ ಮಾತನಾಡಿದ ರವಿ ಬಿಷ್ಣೋಯ್, ರಾಹುಲ್ ಭಾಯ್ ತಂಡದ ನಾಯಕರಾಗಲಿದ್ದಾರೆ. ಅವರ ನಾಯಕತ್ವದಲ್ಲಿ ಆಡಿರುವುದರಿಂದ ಹೊಸ ತಂಡಕ್ಕೆ ಹೊಂದಿಕೊಳ್ಳುವುದು ನನಗೆ ಸುಲಭ ಎಂದು ನಾನು ಭಾವಿಸುತ್ತೇನೆ ಎಂದು ರವಿ ಬಿಷ್ಣೋಯ್ ತಿಳಿಸಿದರು.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Ravi Bishnoi opens up after being picked by Lucknow franchise)