IPL 2022: 2 ಭರ್ಜರಿ ಸಿಕ್ಸ್ನೊಂದಿಗೆ ಧೋನಿ ದಾಖಲೆ ಸರಿಗಟ್ಟಿದ ತೆವಾಟಿಯಾ
Rahul Tewatia: 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ರಾಹುಲ್ ತೆವಾಟಿಯಾ ಪಂಜಾಬ್ ಕಿಂಗ್ಸ್ ವಿರುದ್ದದ ರೋಚಕ ಪಂದ್ಯದಲ್ಲಿ ಶೆಲ್ಡನ್ ಕಾಟ್ರೆಲ್ ಓವರ್ನಲ್ಲಿ 5 ಸಿಕ್ಸ್ ಸಿಡಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.
ಐಪಿಎಲ್ ಸೀಸನ್ 15 ನಲ್ಲಿ (IPL 2022) ಪಂಜಾಬ್ ಕಿಂಗ್ಸ್ ವಿರುದ್ದ ಗುಜರಾತ್ ಟೈಟನ್ಸ್ (PBKS vs GT) ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನ ರುವಾರಿ ರಾಹುಲ್ ತೆವಾಟಿಯಾ (Rahul Tewatia). ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 189 ರನ್ ಕಲೆಹಾಕಿತು. 190 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡವು ಕೊನೆಯ ಓವರ್ ವೇಳೆಗೆ ಸೋಲಿನ ಸುಳಿಗೆ ಸಿಲುಕಿತ್ತು. ಅದರಲ್ಲೂ ಕೊನೆಯ ಎರಡು ಎಸೆತಗಳಲ್ಲಿ 12 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಓಡಿಯನ್ ಸ್ಮಿತ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುವ ಮೂಲಕ ರಾಹುಲ್ ತೆವಾಟಿಯಾ ಅಮೋಘ ಜಯ ತಂದುಕೊಟ್ಟರು. ಈ ಮೂಲಕ ಗುಜರಾತ್ ಟೈಟನ್ಸ್ ತಂಡದ ಗೆಲುವಿನ ರುವಾರಿ ಎನಿಸಿಕೊಂಡರು.
ವಿಶೇಷ ಎಂದರೆ ಈ ಎರಡು ಸಿಕ್ಸ್ಗಳೊಂದಿಗೆ ರಾಹುಲ್ ತೆವಾಟಿಯಾ ಮಹೇಂದ್ರ ಸಿಂಗ್ ಧೋನಿ (MS DHONI) ಅವರ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ. 2016 ರಲ್ಲಿ ಧೋನಿ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸ್ ಸಿಡಿಸುವ ಮೂಲಕ ಜಯ ತಂದುಕೊಟ್ಟಿದ್ದರು. ಅಂದು ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದ ಧೋನಿ ಕಿಂಗ್ಸ್ ಇಲೆವೆನ್ ಪಂಜಾಬ್ ( ಈಗಿನ ಪಂಜಾಬ್ ಕಿಂಗ್ಸ್) ವಿರುದ್ದ ಈ ಸಾಧನೆ ಮಾಡಿದ್ದರು. ಅಕ್ಷರ್ ಪಟೇಲ್ ಅವರ ಕೊನೆಯ ಎರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಧೋನಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.
Lord #Tewatia
#GTvsPBKS pic.twitter.com/qZbIjCY3pB
— तमराज॰॰॰ (@Tw_Manish) April 8, 2022
ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ರಾಹುಲ್ ತೆವಾಟಿಯಾ ಕೂಡ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸ್ ಸಿಡಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಮಾಡಿದ್ದ ದಾಖಲೆಯನ್ನು ರಾಹುಲ್ ತೆವಾಟಿಯಾ ಸರಿಗಟ್ಟಿದ್ದಾರೆ.
#GTvsPBKS #GT welcoming the new Finisher #Tewatia the Boss #GTvsPBKS #IPL2022 pic.twitter.com/toUXhcGw88
— Beast (@cskvijay007) April 8, 2022
ಅಷ್ಟೇ ಅಲ್ಲದೆ ಐಪಿಎಲ್ನಲ್ಲಿನ ಕೊನೆಯ ಎಸೆತದಲ್ಲಿ ಐದು ಅಥವಾ ಆರು ರನ್‌ಗಳ ಅಗತ್ಯವಿದ್ದಾಗ ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಡ್ವೇನ್ ಬ್ರಾವೋ, ಧೋನಿ ಮತ್ತು ಕೆಎಸ್ ಭರತ್ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ರೋಚಕ ಜಯ ತಂದುಕೊಟ್ಟು ಮಿಂಚಿದ್ದರು. ಇದೀಗ ರಾಹುಲ್ ತೆವಾಟಿಯಾ ಕೂಡ ಇದೇ ಸಾಲಿಗೆ ಸೇರಿದ್ದಾರೆ.
ಪಂಜಾಬ್ ಕಿಂಗ್ಸ್ ಪಾಲಿಗೆ ವಿಲನ್:
2020 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ರಾಹುಲ್ ತೆವಾಟಿಯಾ ಪಂಜಾಬ್ ಕಿಂಗ್ಸ್ ವಿರುದ್ದದ ರೋಚಕ ಪಂದ್ಯದಲ್ಲಿ ಶೆಲ್ಡನ್ ಕಾಟ್ರೆಲ್ ಓವರ್ನಲ್ಲಿ 5 ಸಿಕ್ಸ್ ಸಿಡಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಅಲ್ಲದೆ ಈ ಪಂದ್ಯದಲ್ಲೂ ಪಂಜಾಬ್ ತಂಡದ ಗೆಲುವನ್ನು ತೆವಾಟಿಯಾ ಕಸಿದುಕೊಂಡಿದ್ದರು. ಇದೀಗ ಗುಜರಾತ್ ಟೈಟನ್ಸ್ ಮೂಲಕ ಮತ್ತೊಮ್ಮೆ ಅಂತಿಮ ಓವರ್ನಲ್ಲಿ ಪಂಜಾಬ್ ಕಿಂಗ್ಸ್ಗೆ ಸೋಲುಣಿಸಿ ಹೀರೋ ಎನಿಸಿಕೊಂಡಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ಪಾಲಿಗೆ ವಿಲನ್ ಆಗಿ ರಾಹುಲ್ ತೆವಾಟಿಯಾ ಹೊರಹೊಮ್ಮಿದ್ದಾರೆ.
ರಾಹುಲ್ ತೆವಾಟಿಯಾ ಅವರ ಈ ಭರ್ಜರಿ ಪ್ರದರ್ಶನವನ್ನು ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಹಾಡಿಹೊಗಳಿದ್ದಾರೆ. ಅಲ್ಲದೆ ರಾಹುಲ್ ತೆವಾಟಿಯಾರನ್ನು ಲಾರ್ಡ್ ಎಂದು ಬಣ್ಣಿಸುವ ಮೂಲಕ ಪಂಜಾಬ್ ಕಿಂಗ್ಸ್ ಅವರ ಪ್ರತಿಮೆಯನ್ನು ಡಗೌಟ್ನಲ್ಲಿ ಸ್ಥಾಪಿಸುವುದು ಉತ್ತಮ ಎಂದಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ಗೆ ಅಂತಿಮ ಓವರ್ನಲ್ಲಿ ಸೋಲುಣಿಸುವ ತೆವಾಟಿಯಾಗೆ ಗೌರವ ಸೂಚಿಸಲಿ ಎಂದು ಪರೋಕ್ಷವಾಗಿ ಸೆಹ್ವಾಗ್ ಕಿಚಾಯಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?