AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಹೊಸ ಜೆರ್ಸಿ ಅನಾವರಣಗೊಳಿಸಿದ ರಾಜಸ್ಥಾನ್ ರಾಯಲ್ಸ್​

Rajasthan Royals: ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ.

IPL 2022: ಹೊಸ ಜೆರ್ಸಿ ಅನಾವರಣಗೊಳಿಸಿದ ರಾಜಸ್ಥಾನ್ ರಾಯಲ್ಸ್​
Rajasthan Royals
TV9 Web
| Updated By: ಝಾಹಿರ್ ಯೂಸುಫ್|

Updated on:Mar 15, 2022 | 5:05 PM

Share

ಐಪಿಎಲ್​ ಸೀಸನ್ 15 ಗಾಗಿ ರಾಜಸ್ಥಾನ್ ರಾಯಲ್ಸ್​ ತಂಡವು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ರೆಡ್ ಬುಲ್‌ನ ವಿಶ್ವಪ್ರಸಿದ್ಧ ಸ್ಟಂಟ್‌ಮ್ಯಾನ್ ರಾಬಿ ಮ್ಯಾಡಿಸನ್ ಅವರ ಬೈಕ್ ಸಾಹಸದೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದ್ದು, ಈ ವಿಡಿಯೋದಲ್ಲಿ ಆರ್​ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಹೊಸ ಆಟಗಾರ ಯುಜುವೇಂದ್ರ ಚಹಲ್ ಕಾಣಿಸಿಕೊಂಡಿದ್ದಾರೆ. ಇನ್ನು ಈ ಬಾರಿ ಕೂಡ ರಾಜಸ್ಥಾನ್ ರಾಯಲ್ಸ್ ಕ್ಲಾಸಿಕ್ ಪಿಂಕ್​ ಜೆರ್ಸಿಯಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಜೆರ್ಸಿಯ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.

ಇನ್ನು ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿ ಪ್ರಾಯೋಜಕರಾಗಿ ಪ್ರೀಮಿಯಂ ಡ್ರೈ ಫ್ರೂಟ್ ಬ್ರ್ಯಾಂಡ್ ಹ್ಯಾಪ್ಪಿಲೋ ಕಾಣಿಸಿಕೊಳ್ಳಲಿದೆ. ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 29 ರಂದು ಪುಣೆಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ರಾಜಸ್ಥಾನ್ ರಾಯಲ್ಸ್​ ಹೊಸ ಜೆರ್ಸಿ

ರಾಜಸ್ಥಾನ್ ರಾಯಲ್ಸ್ ತಂಡ ಹೀಗಿದೆ: ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಕುಲ್ದ್ರುವ್ ಜುರೆಲ್ , ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಒಬೆಡ್ ಮೆಕಾಯ್.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(IPL 2022: Rajasthan Royals New Jersey)

Published On - 5:03 pm, Tue, 15 March 22