IPL 2022: ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರನಡೆದ ಹೆಟ್ಮೆಯರ್

| Updated By: ಝಾಹಿರ್ ಯೂಸುಫ್

Updated on: May 08, 2022 | 4:06 PM

IPL 2022: ರಾಜಸ್ಥಾನ್ ರಾಯಲ್ಸ್ (RR): ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್

IPL 2022: ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರನಡೆದ ಹೆಟ್ಮೆಯರ್
Shimron Hetmyer
Follow us on

ರಾಜಸ್ಥಾನ್ ರಾಯಲ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಐಪಿಎಲ್ ಮಧ್ಯೆದಲ್ಲಿ ತಂಡವನ್ನು ತೊರೆದು ಮನೆಗೆ ತೆರಳಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಹೆಟ್ಮೆಯರ್ ವೆಸ್ಟ್ ಇಂಡೀಸ್​ಗೆ ಹೋಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಮ್ಮ ಟ್ವೀಟ್‌ನಲ್ಲಿ ಶಿಮ್ರಾನ್ ಹೆಟ್ಮೆಯರ್ ಅವರ ಮನೆಗೆ ಭೇಟಿ ನೀಡುವ ಸಮಯ ಮತ್ತು ಕಾರಣ ಎರಡನ್ನೂ ಉಲ್ಲೇಖಿಸಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ಭಾನುವಾರ ಬೆಳಗ್ಗೆ ಗಯಾನಾಗೆ ತೆರಳಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅವರ ಪತ್ನಿ ನಿರ್ವಾಣಿ ತಾಯಿಯಾಗಲಿದ್ದಾರೆ. ಹೀಗಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹೆಟ್ಮೆಯರ್ ಮನೆಗೆ ತೆರಳಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತಿಳಿಸಿದೆ.

ಸದ್ಯ ಬಯೋಬಬಲ್​ನಿಂದ ಹೊರ ನಡೆದಿರುವ ಹೆಟ್ಮೆಯರ್, ಕೆಲ ದಿನಗಳ ಬಳಿಕ ತಂಡಕ್ಕೆ ಮರಳಲಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಿಳಿಸಿದೆ. ಮೇ 7 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೆಟ್ಮೆಯರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು 16 ಎಸೆತಗಳಲ್ಲಿ 31 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು. ಈ ಮೂಲಕ ತಂಡವನ್ನು 190 ರನ್‌ಗಳನ್ನು ಬೆನ್ನಟ್ಟಲು ಸಹಾಯ ಮಾಡಿದ್ದರು.

ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮ ಸ್ಥಿತಿಯಲ್ಲಿದೆ. ತಂಡವು ಇಲ್ಲಿಯವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು ಮತ್ತು 4 ಸೋಲುಗಳೊಂದಿಗೆ ಪ್ಲೇ-ಆಫ್ ರೇಸ್​ನಲ್ಲಿದೆ. ಐಪಿಎಲ್ 2022 ರಲ್ಲಿ, ಶಿಮ್ರಾನ್ ಹೆಟ್ಮೆಯರ್ ರಾಜಸ್ಥಾನ್ ರಾಯಲ್ಸ್ ಪರ 11 ಪಂದ್ಯಗಳಲ್ಲಿ 291 ರನ್ ಗಳಿಸಿದ್ದಾರೆ. ಐಪಿಎಲ್ 15ನೇ ಸೀಸನ್​ನಲ್ಲಿ ಹೆಟ್ಮೆಯರ್ ಮೂರನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್. ಇವರಿಗಿಂತ ಹೆಚ್ಚು ರನ್ ಗಳಿಸಿರುವುದು ಜೋಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಮಾತ್ರ. ಹೀಗಾಗಿ ಹೆಟ್ಮೆಯರ್​ ಅನುಪಸ್ಥಿತಿ ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ರಾಜಸ್ಥಾನ್ ರಾಯಲ್ಸ್ (RR): ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಕುಲ್ದ್ರುವ್ ಜುರೆಲ್ , ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಒಬೆಡ್ ಮೆಕಾಯ್.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.