IPL 2022: ಐಪಿಎಲ್ ಸೀಸನ್ 15 ಪಾಯಿಂಟ್ಸ್ ಟೇಬಲ್ನ ಟಾಪ್ 4 ಸ್ಥಾನದಿಂದ ಆರ್ಸಿಬಿ ತಂಡವು ಹೊರಬಿದ್ದಿದೆ. ಪಂಜಾಬ್ ಕಿಂಗ್ಸ್ ವಿರುದ್ದ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದೆ. ಇಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ತಂಡದ ಪಾಯಿಂಟ್ಸ್ 14 ಆಗಿದ್ದರೂ, ನೆಟ್ ರನ್ ರೇಟ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿದೆ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಮತ್ತೆ ನಾಲ್ಕನೇ ಸ್ಥಾನಕ್ಕೇರುವ ಅವಕಾಶವಿದೆ. ಗುಜರಾತ್ ಟೈಟನ್ಸ್ ವಿರುದ್ದದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ತಂಡವು ಭರ್ಜರಿ ಜಯ ಸಾಧಿಸಿ ಉತ್ತಮ ನೆಟ್ ರನ್ ರೇಟ್ ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಈ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು.
ಆದರೆ ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಒಂದು ಪಂದ್ಯವಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ, ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಜಯ ಸಾಧಿಸಿದರೆ ನೆಟ್ ರನ್ ರೇಟ್ ಲೆಕ್ಕಾಚಾರಗಳು ಮುನ್ನಲೆಗೆ ಬರಲಿದೆ. ಇಲ್ಲಿ ಉತ್ತಮ ನೆಟ್ ರನ್ ಹೊಂದಿರುವ ಕಾರಣ ಡೆಲ್ಲಿಗೆ ಪ್ಲೇಆಫ್ ಚಾನ್ಸ್ ಹೆಚ್ಚಿದೆ. ಇದಾಗ್ಯೂ ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿದ್ರೆ ಡೆಲ್ಲಿ ತಂಡವನ್ನು ಹಿಂದಿಕ್ಕಿ ಪ್ಲೇಆಫ್ಗೇರಬಹುದು.
ಒಂದು ವೇಳೆ ಈ ಪಂದ್ಯದಲ್ಲಿ ಡೆಲ್ಲಿ ತಂಡವು ಸೋತರೆ ಆರ್ಸಿಬಿ ತಂಡದ ಹಾದಿ ಸುಲಭವಾಗಲಿದೆ. ಅಂದರೆ ಗುಜರಾತ್ ಟೈಟನ್ಸ್ ವಿರುದ್ದ ಆರ್ಸಿಬಿ ಗೆದ್ದರೆ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಫಲಿತಾಂಶದಿಂದ ಪ್ಲೇಆಫ್ ಬಹುತೇಕ ನಿರ್ಧಾರವಾಗಲಿದೆ. ಅಂದರೆ ಡೆಲ್ಲಿ ವಿರುದ್ದ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್ಸಿಬಿ ತಂಡದ ಪ್ಲೇಆಫ್ ಅರ್ಹತೆ ಖಚಿತವಾಗಲಿದೆ.
ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಸೋತು, ಆರ್ಸಿಬಿ ತಂಡ ಕೂಡ ಗುಜರಾತ್ ಟೈಟನ್ಸ್ ವಿರುದ್ದ ಸೋತರೆ, ಪ್ಲೇಆಫ್ ಲೆಕ್ಕಾಚಾರ ಜಟಿಲವಾಗಲಿದೆ. ಏಕೆಂದರೆ ಎರಡೂ ತಂಡಗಳ ನೆಟ್ ರನ್ ರೇಟ್ ಮೂಲಕ ನಾಲ್ಕನೇ ಸ್ಥಾನ ನಿರ್ಧಾರವಾಗಲಿದೆ. ಅಂದರೆ ಉಭಯ ತಂಡಗಳ ಪಾಯಿಂಟ್ಸ್ 14 ಆಗಿರಲಿದ್ದು, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು. ಇಲ್ಲಿ ಆರ್ಸಿಬಿ ತಂಡದ ನೆಟ್ ರನ್ ರೇಟ್ ಮೈನಸ್ನಲ್ಲಿ ಇರುವ ಕಾರಣ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ದ ಹೀನಾಯವಾಗಿ ಸೋಲಬೇಕಾಗುತ್ತದೆ. ಅಂದರೆ ಮಾತ್ರ ಆರ್ಸಿಬಿ ತಂಡ ಗುಜರಾತ್ ಟೈಟನ್ಸ್ ವಿರುದ್ದ ಸೋತರೂ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು.
ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಸೋತರೆ, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ ಪ್ಲೇಆಫ್ಗೆ ಎಂಟ್ರಿ ಕೊಡುವ ಅವಕಾಶ ದೊರೆಯಲಿದೆ. ಏಕೆಂದರೆ ಕೆಕೆಆರ್ (12 ಪಾಯಿಂಟ್ಸ್) ಹಾಗೂ ಪಂಜಾಬ್ ಕಿಂಗ್ಸ್ (12 ಪಾಯಿಂಟ್ಸ್) ಗೆ ಇನ್ನೂ 1 ಪಂದ್ಯವಿದ್ದು, ಈ ಪಂದ್ಯದಲ್ಲಿ ಗೆದ್ದರೆ 14 ಪಾಯಿಂಟ್ಸ್ ಆಗಲಿದೆ. ಹಾಗಾಗಿ ಉತ್ತಮ ನೆಟ್ ರನ್ ರೇಟ್ ಮೂಲಕ ಈ ತಂಡಗಳು ಗೆದ್ದರೆ 4ನೇ ಸ್ಥಾನಕ್ಕೇರಬಹುದು.
ಒಟ್ಟಿನಲ್ಲಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ತಂಡ ಸೋತರೆ ಪಾಯಿಂಟ್ಸ್ ಟೇಬಲ್ನ ನಾಲ್ಕನೇ ಸ್ಥಾನಕ್ಕಾಗಿ 4 ತಂಡಗಳ ನಡುವೆ ಪೈಪೋಟಿ ಕಂಡು ಬರಲಿದೆ. ಈ ವೇಳೆ ಯಾರು ಉತ್ತಮ ನೆಟ್ ರನ್ ರೇಟ್ ಹೊಂದಿರಲಿದೆಯೋ ಆ ತಂಡ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.