IPL 2022: ಪ್ಲೇಆಫ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು..?

| Updated By: ಝಾಹಿರ್ ಯೂಸುಫ್

Updated on: Apr 30, 2022 | 9:18 PM

IPL 2022 RCB's playoff Chances: ಈಗಾಗಲೇ ಗುಜರಾತ್ ಟೈಟನ್ಸ್ 16 ಪಾಯಿಂಟ್ಸ್ ಪಡೆದಿದೆ. ರಾಜಸ್ಥಾನ್ ರಾಯಲ್ಸ್ 12 ಪಾಯಿಂಟ್ಸ್​ ಹೊಂದಿದೆ. ಗುಜರಾತ್ ಟೈಟನ್ಸ್ ತಂಡವು 1 ಮ್ಯಾಚ್​ ಗೆದ್ದರೆ ಪ್ಲೇ ಆಫ್​ ಆಡುವುದು ಖಚಿತವಾಗಲಿದೆ.

IPL 2022: ಪ್ಲೇಆಫ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು..?
RCB
Follow us on

IPL 2022: ಐಪಿಎಲ್​ ಸೀಸನ್​ 15 ನ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್​ಸಿಬಿ (RCB) ತಂಡದ ಲೆಕ್ಕಚಾರವು ದ್ವಿತಿಯಾರ್ಧದಲ್ಲಿ ತಲೆಕೆಳಗಾಗುತ್ತಿದೆ. ಏಕೆಂದರೆ ಮೊದಲ 7 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿದ್ದ ಆರ್​ಸಿಬಿ, ದ್ವಿತಿಯಾರ್ಧದಲ್ಲಿ ಆಡಿದ 3 ಪಂದ್ಯಗಳಲ್ಲೂ ಸೋತಿದೆ. ಅಂದರೆ ಇದೀಗ 10 ಪಂದ್ಯಗಳಲ್ಲಿ 5 ಜಯ 5 ಸೋಲಿನೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿದೆ. ಇನ್ನು ಆರ್​ಸಿಬಿಗೆ ಉಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಮತ್ತೊಂದೆಡೆ ಪ್ಲೇಆಫ್​ ರೇಸ್​ನಲ್ಲಿ ಇನ್ನೂ ಕೂಡ 8 ತಂಡಗಳಿವೆ. ಹೀಗಾಗಿ ಮುಂದಿನ ಪಂದ್ಯಗಳು ಆರ್​ಸಿಬಿ ಪಾಲಿಗೆ ನಿರ್ಣಾಯಕ.

ಏಕೆಂದರೆ ಮುಂದಿನ 4 ಪಂದ್ಯಗಳಲ್ಲಿ 4 ರಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಕನ್​​ಫರ್ಮ್ ಮಾಡಿಕೊಳ್ಳಬಹುದು. ಅಂದರೆ ಒಟ್ಟು 18 ಪಾಯಿಂಟ್​ಗಳಿಸಿ ಪ್ಲೇಆಫ್​ ಪ್ರವೇಶಿಸಬಹುದು. ಇನ್ನು ಮೂರಲ್ಲಿ ಮಾತ್ರ ಗೆದ್ದರೆ ಒಟ್ಟು 16 ಪಾಯಿಂಟ್ ಆಗಲಿದೆ. ಆದರೆ ಈಗಾಗಲೇ ಗುಜರಾತ್ ಟೈಟನ್ಸ್ 16 ಪಾಯಿಂಟ್ಸ್ ಪಡೆದಿದೆ. ರಾಜಸ್ಥಾನ್ ರಾಯಲ್ಸ್ 12 ಪಾಯಿಂಟ್ಸ್​ ಹೊಂದಿದೆ. ಗುಜರಾತ್ ಟೈಟನ್ಸ್ ತಂಡವು 1 ಮ್ಯಾಚ್​ ಗೆದ್ದರೆ ಪ್ಲೇ ಆಫ್​ ಆಡುವುದು ಖಚಿತವಾಗಲಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ಇನ್ನೆರಡು ಮ್ಯಾಚ್ ಗೆದ್ದರೆ 16 ಪಾಯಿಂಟ್ ಆಗಲಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್ ಆಡುವುದು ಖಚಿತ ಎನ್ನಬಹುದು.

ಇನ್ನುಳಿದಂತೆ ಲಕ್ನೋ ಸೂಪರ್ ಜೈಂಟ್ಸ್, ಎಸ್​ಆರ್​ಹೆಚ್ 10 ಪಾಯಿಂಟ್ ಪಡೆದುಕೊಂಡಿದೆ. ಇನ್ನು 8 ಪಾಯಿಂಟ್ಸ್ ಪಡೆದಿರುವ ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇಆಫ್ ರೇಸ್​ನಲ್ಲಿದೆ. ಜೊತೆಗೆ 6 ಪಾಯಿಂಟ್ಸ್​ ಹೊಂದಿರುವ ಕೆಕೆಆರ್ ಕೂಡ ಪ್ಲೇಆಫ್ ಅನ್ನು ಎದುರು ನೋಡುತ್ತಿದೆ. ಏಕೆಂದರೆ ಈ ತಂಡಗಳು ಕೇವಲ 8 ಪಂದ್ಯಗಳನ್ನು ಮಾತ್ರ ಆಡಿದೆ. ಆದರೆ ಅತ್ತ 10 ಪಂದ್ಯವಾಡಿರುವ ಆರ್​ಸಿಬಿ ಕಲೆಹಾಕಿರುವುದು 10 ಪಾಯಿಂಟ್ಸ್ ಮಾತ್ರ.

ಹಾಗಾಗಿ ಆರ್​ಸಿಬಿ ಮುಂದಿನ 4 ಪಂದ್ಯಗಳನ್ನೂ ಗೆಲ್ಲುವ ಮೂಲಕ ಪ್ಲೇ ಆಫ್ ಅನ್ನು ಖಚಿತಪಡಿಸಿಕೊಳ್ಳಬೇಕಿದೆ. ಒಂದು ವೇಳೆ 4 ರಲ್ಲಿ 3 ಮ್ಯಾಚ್ ಗೆದ್ದರೆ 16 ಪಾಯಿಂಟ್ ಸಿಗಲಿದೆ. ಹಾಗೆಯೇ ಉಳಿದ ತಂಡಗಳು ಕೂಡ 16 ಪಾಯಿಂಟ್ಸ್​ಗಳಿಸಿ 3ನೇ ಮತ್ತು ನಾಲ್ಕನೇ ಸ್ಥಾನ ಪಡೆದರೆ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲು ನೆಟ್​ ರನ್​ ರೇಟ್​ನ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆರ್​ಸಿಬಿ ತಂಡವು ಮುಂದಿನ 4 ಪಂದ್ಯಗಳನ್ನು ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಮೊದಲ 3 ಪಂದ್ಯ ಸೋತಿರುವ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡಲಿದೆಯಾ ಎಂಬುದೇ ದೊಡ್ಡ ಪ್ರಶ್ನೆ.

RCB ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.