IPL 2022: CSK ತಂಡದ ನಾಯಕತ್ವ ತ್ಯಜಿಸಿದ ರವೀಂದ್ರ ಜಡೇಜಾ

Ravindra Jadeja-Ms Dhoni: ಮುಂದಿನ 6 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಧೋನಿ ಸೂಪರ್ ಕಿಂಗ್ಸ್ ನೇತೃತ್ವದ ಸಿಎಸ್​ಕೆ ತಂಡವು 213 ಪಂದ್ಯಗಳಲ್ಲಿ  130 ಗೆಲುವುಗಳನ್ನು ದಾಖಲಿಸಿದೆ.

IPL 2022: CSK ತಂಡದ ನಾಯಕತ್ವ ತ್ಯಜಿಸಿದ ರವೀಂದ್ರ ಜಡೇಜಾ
CSK
Follow us
TV9 Web
| Updated By: ಝಾಹಿರ್ ಯೂಸುಫ್

Updated on:Apr 30, 2022 | 7:45 PM

IPL 2022: CSK ತಂಡದ ನಾಯಕತ್ವದಿಂದ ರವೀಂದ್ರ ಜಡೇಜಾ (Ravindra Jadeja) ಕೆಳಗಿಳಿದಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಮತ್ತೆ ಸಿಎಸ್​ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ (MS Dhoni) ಮುನ್ನಡೆಸಲಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಸಿಎಸ್​ಕೆ ಫ್ರಾಂಚೈಸಿ ಧೋನಿಯ ಉತ್ತರಾಧಿಕಾರಿಯಾಗಿ ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್​ಕೆ ತಂಡವು ಸತತ ವೈಫಲ್ಯ ಹೊಂದಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಜಯ ಸಾಧಿಸಿದೆ. ಹೀಗಾಗಿ ನಾಯಕನ ಸ್ಥಾನದಿಂದ ಜಡೇಜಾ ಕೆಳಗಿಳಿದಿದ್ದಾರೆ. ಅಲ್ಲದೆ ಮುಂದಿನ 6 ಪಂದ್ಯಗಳಲ್ಲಿ ಸಿಎಸ್​ಕೆ ತಂಡದ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳಲಿದ್ದಾರೆ.

“ಜಡೇಜಾ ಅವರು ಆಟದ ಮೇಲೆ ಕೇಂದ್ರೀಕರಿಸಲು ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹಾಗೆಯೇ ಮುಂದಿನ ಪಂದ್ಯಗಳಲ್ಲಿ ಸಿಎಸ್‌ಕೆಯನ್ನು ಮುನ್ನಡೆಸಲು ಧೋನಿ ಒಪ್ಪಿಕೊಂಡಿದ್ದಾರೆ” ಎಂದು ಸಿಎಸ್‌ಕೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರವೀಂದ್ರ ಜಡೇಜಾ 2012 ರಿಂದ ಸಿಎಸ್​ಕೆ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ ಈ ಬಾರಿ ಸಿಎಸ್​ಕೆ ತಂಡದ ನಾಯಕರಾಗುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಮೂರನೇ ನಾಯಕ ಎನಿಸಿಕೊಂಡಿದ್ದರು. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಸಿಎಸ್​ಕೆ ತಂಡದ ನಾಯಕರಾಗಿದ್ದರು. ಆದರೆ ನಾಯಕತ್ವ ಪಡೆದ ಮೊದಲ ಸೀಸನ್​ನ ಅರ್ಧದಲ್ಲೇ ಜಡೇಜಾ ಕ್ಯಾಪ್ಟನ್ಸಿ ತೊರೆದಿರುವುದು ಅಚ್ಚರಿ ಮೂಡಿಸಿದೆ.

ಇನ್ನು ಮುಂದಿನ 6 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಧೋನಿ ಸೂಪರ್ ಕಿಂಗ್ಸ್ ನೇತೃತ್ವದ ಸಿಎಸ್​ಕೆ ತಂಡವು 213 ಪಂದ್ಯಗಳಲ್ಲಿ  130 ಗೆಲುವುಗಳನ್ನು ದಾಖಲಿಸಿದೆ. ಹಾಗೆಯೇ 81 ಸೋಲುಗಳನ್ನು ಅನುಭವಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ನಾಲ್ಕು ಮತ್ತು ಚಾಂಪಿಯನ್​ ಲೀಗ್​ನಲ್ಲಿ ಎರಡು ಪ್ರಶಸ್ತಿಗಳನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲೇ ಸಿಎಸ್​ಕೆ ಮುಡಿಗೇರಿಸಿಕೊಂಡಿತ್ತು.

ಚೆನ್ನೈ ಸೂಪರ್ ಕಿಂಗ್ಸ್ (CSK): ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ,  ಶಿವಂ ದುಬೆ,  ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:27 pm, Sat, 30 April 22