IPL 2022: ರೇಸ್​ನಿಂದ ಮಯಾಂಕ್ ಅಗರ್ವಾಲ್ ಔಟ್: ಇವರಂತೆ ಪಂಜಾಬ್ ಕಿಂಗ್ಸ್​ ಹೊಸ ನಾಯಕ

| Updated By: ಝಾಹಿರ್ ಯೂಸುಫ್

Updated on: Feb 15, 2022 | 4:15 PM

IPL 2022: ಕಳೆದ ಎರಡು ಸೀಸನ್​ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್, ಈ ಬಾರಿ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕರಾಗಿದ್ದಾರೆ.

IPL 2022: ರೇಸ್​ನಿಂದ ಮಯಾಂಕ್ ಅಗರ್ವಾಲ್ ಔಟ್: ಇವರಂತೆ ಪಂಜಾಬ್ ಕಿಂಗ್ಸ್​ ಹೊಸ ನಾಯಕ
mayank agarwal
Follow us on

IPL 2022 ರ ಮೆಗಾ ಹರಾಜಿನ ಮೂಲಕ ಬಲಿಷ್ಠ ತಂಡ ಕಟ್ಟಿರುವ ಫ್ರಾಂಚೈಸಿ ಎಂದರೆ ಪಂಜಾಬ್ ಕಿಂಗ್ಸ್. ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಂಡು, ಅತ್ಯುತ್ತಮ ಆಟಗಾರರನ್ನು ಖರೀದಿಸಿ ಪಂಜಾಬ್ ಕಿಂಗ್ಸ್​ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಇದರ ಬೆನ್ನಲ್ಲೇ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಕೂಡ ಹುಟ್ಟಿಕೊಂಡಿತು. ಏಕೆಂದರೆ ತಂಡದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ರಿಟೈನ್ ಮಾಡಿಕೊಂಡರೂ ಪಂಜಾಬ್ ನಾಯಕನನ್ನು ಘೋಷಿಸಿರಲಿಲ್ಲ. ಇದೀಗ ಮೆಗಾ ಹರಾಜು ಮುಕ್ತಾಯದ ಬೆನ್ನಲ್ಲೇ ನಾಯಕನ ಆಯ್ಕೆಗಾಗಿ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಚರ್ಚೆ ನಡೆಸಿದೆ. ಈ ಚರ್ಚೆಯಲ್ಲಿ ಈ ಬಾರಿ ಆಯ್ಕೆಯಾದ ಆಟಗಾರನ ಹೆಸರು ಮುಂಚೂಣಿಯಲ್ಲಿರುವುದು ವಿಶೇಷ. ಹೌದು, ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮೂಲಗಳ ಮಾಹಿತಿ ಪ್ರಕಾರ ಶಿಖರ್ ಧವನ್​ಗೆ ನಾಯಕನ ಪಟ್ಟ ಕಟ್ಟಲಿದೆ.

ಕಳೆದ ಎರಡು ಸೀಸನ್​ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್, ಈ ಬಾರಿ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕರಾಗಿದ್ದಾರೆ. ಪಂಜಾಬ್ ಈ ಬಾರಿ ಮಯಾಂಕ್ ಅಗರ್ವಾಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡಿತ್ತು. ಮಯಾಂಕ್ ಅವರನ್ನು ನಾಯಕನನ್ನಾಗಿ ಮಾಡುವ ಬಗ್ಗೆ ಫ್ರಾಂಚೈಸಿ ಮತ್ತು ತಂಡದ ಆಡಳಿತವು ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲ. ಇದೀಗ ಹರಾಜಿನ ಮೂಲಕ ಶಿಖರ್ ಧವನ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕತ್ವಕ್ಕೆ ಉತ್ತಮ ಆಯ್ಕೆ ಸಿಕ್ಕಂತಾಗಿದೆ.

ಕ್ರೀಡಾ ವೆಬ್‌ಸೈಟ್ ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ ಪಂಜಾಬ್ ಕಿಂಗ್ಸ್ ಧವನ್ ಅವರನ್ನು ನಾಯಕನನ್ನಾಗಿ ಮಾಡಲು ಸಿದ್ಧವಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದೆ. ಶಿಖರ್ ಧವನ್ ತಂಡದಲ್ಲಿರುವುದಕ್ಕೆ ಫ್ರಾಂಚೈಸಿ ತುಂಬಾ ಸಂತೋಷವಾಗಿದೆ. ಧವನ್ ತುಂಬಾ ಪ್ರಬುದ್ಧರಾಗಿದ್ದು, ಐಪಿಎಲ್‌ನಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಲು ಅವರಿಗೆ ಅವಕಾಶ ನೀಡಲಾಗುವುದು. ಕೋಚ್‌ಗಳು ಮತ್ತು ಫ್ರಾಂಚೈಸಿಯು ಧವನ್‌ನನ್ನು ಪಂಜಾಬ್ ಕಿಂಗ್ಸ್‌ನ ನಾಯಕನನ್ನಾಗಿ ಮಾಡಲು ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಿಖರ್ ಧವನ್ ಅವರನ್ನು ಈ ಬಾರಿ ಬಿಡುಗಡೆ ಮಾಡಿತ್ತು, ನಂತರ ಪಂಜಾಬ್ ಮೆಗಾ ಹರಾಜಿನಲ್ಲಿ 8.25 ಕೋಟಿ ರೂ.ಗಳ ಅತ್ಯಧಿಕ ಬಿಡ್ ಮಾಡುವ ಮೂಲಕ ಅನುಭವಿ ಎಡಗೈ ಭಾರತೀಯ ಆರಂಭಿಕರನ್ನು ಖರೀದಿಸಿದೆ. ಧವನ್ ಐಪಿಎಲ್‌ನಲ್ಲಿ ಕೆಲವು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇದಲ್ಲದೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಇದೀಗ ಧವನ್ ಪಂಜಾಬ್ ಕಿಂಗ್ಸ್​ ತಂಡದ ಹೊಸ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನ್ನಬಹುದು.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(IPL 2022: Shikhar Dhawan likely to be named Punjab Kings Captain, claims report)