IPL 2022: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ SRH vs LSG ಪಂದ್ಯ

| Updated By: ಝಾಹಿರ್ ಯೂಸುಫ್

Updated on: Apr 04, 2022 | 4:03 PM

IPL 2022, SRH vs LSG: ಮೊದಲ ಪಂದ್ಯ ಸೋತು, 2ನೇ ಪಂದ್ಯದಲ್ಲಿ ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್​ ಗೆಲುವಿನ ಲಯ ಮುಂದುವರೆಸುವ ವಿಶ್ವಾಸದಲ್ಲಿದೆ. ಇನ್ನು ಈ ಪಂದ್ಯದ ಮೂಲಕ ಹಲವು ದಾಖಲೆಗಳು ಕೂಡ ನಿರ್ಮಾಣವಾಗಲಿದೆ. ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ...

IPL 2022: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ SRH vs LSG ಪಂದ್ಯ
IPL 2022, SRH vs LSG
Follow us on

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್​ನ 12 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ . ಮೊದಲ ಪಂದ್ಯದಲ್ಲಿ ಸೋತಿರುವ ಎಸ್​ಆರ್​ಹೆಚ್ ತಂಡವು ಈ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ. ಮತ್ತೊಂದೆಡೆ ಮೊದಲ ಪಂದ್ಯ ಸೋತು, 2ನೇ ಪಂದ್ಯದಲ್ಲಿ ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್​ ಗೆಲುವಿನ ಲಯ ಮುಂದುವರೆಸುವ ವಿಶ್ವಾಸದಲ್ಲಿದೆ. ಇನ್ನು ಈ ಪಂದ್ಯದ ಮೂಲಕ ಹಲವು ದಾಖಲೆಗಳು ಕೂಡ ನಿರ್ಮಾಣವಾಗಲಿದೆ. ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ…

– T20 ಕ್ರಿಕೆಟ್‌ನಲ್ಲಿ 50 ಅರ್ಧಶತಕಗಳನ್ನು ಪೂರೈಸಲು KL ರಾಹುಲ್‌ಗೆ ಇನ್ನೂ ಒಂದು ಅರ್ಧಶತಕ ಅಗತ್ಯವಿದೆ.

– ಸನ್‌ರೈಸರ್ಸ್ ಹೈದರಾಬಾದ್ ತನ್ನ ಕೊನೆಯ 16 ಐಪಿಎಲ್ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದಿದೆ.

– ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ತಲುಪಲು ಮನೀಶ್ ಪಾಂಡೆಗೆ ಇನ್ನೂ ಏಳು ಸಿಕ್ಸರ್‌ಗಳ ಅಗತ್ಯವಿದೆ.

– ಐಪಿಎಲ್‌ನಲ್ಲಿ 50 ಬೌಂಡರಿಗಳನ್ನು ತಲುಪಲು ದೀಪಕ್ ಹೂಡಾ ಇನ್ನೂ ಎರಡು ಬೌಂಡರಿಗಳನ್ನು ಬಾರಿಸಬೇಕಾಗಿದೆ.

– ಟಿ20 ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ಗಳನ್ನು ತಲುಪಲು ಅಬ್ದುಲ್ ಸಮದ್ ಇನ್ನೂ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಬೇಕಾಗಿದೆ. ಹಾಗೆಯೇ 50 ಬೌಂಡರಿಗಳನ್ನು ತಲುಪಲು ಅವರು ಇನ್ನೂ ಐದು ಬೌಂಡರಿ ಬೇಕಿದೆ.

– ರಾಹುಲ್ ತ್ರಿಪಾಠಿ (48) ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ತಲುಪಲು ಎರಡು ಸಿಕ್ಸ್​ಗಳ ಅಂತರದಲ್ಲಿದ್ದಾರೆ.

– ಶ್ರೇಯಸ್ ಗೋಪಾಲ್ (48) ಐಪಿಎಲ್​ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಎರಡು ವಿಕೆಟ್​ಗಳ ಅಗತ್ಯವಿದೆ.

– ನಿಕೋಲಸ್ ಪೂರನ್ (44) ಐಪಿಎಲ್​ನಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಆರು ಸಿಕ್ಸ್​ಗಳ ಅಗತ್ಯವಿದೆ.

– ನಿಕೋಲಸ್ ಪೂರನ್ (295) T20 ಕ್ರಿಕೆಟ್​ನಲ್ಲಿ 300 ಸಿಕ್ಸರ್‌ಗಳ ಮೈಲಿಗಲ್ಲನ್ನು ತಲುಪಲು ಐದು ಸಿಕ್ಸ್​ ಬೇಕಿದೆ.

– ಕೃನಾಲ್ ಪಾಂಡ್ಯ (46) ಲೀಗ್‌ನಲ್ಲಿ 50 ಸಿಕ್ಸರ್‌ಗಳ ಹೆಗ್ಗುರುತನ್ನು ಪೂರ್ಣಗೊಳಿಸಲು ನಾಲ್ಕು ಸಿಕ್ಸ್ ಬಾರಿಸಬೇಕಿದೆ.

– ದೀಪಕ್ ಹುಡಾ (148) T20 ಪಂದ್ಯಗಳಲ್ಲಿ 150 ಬೌಂಡರಿಗಳನ್ನು ಗಳಿಸಲು ಎರಡು ಬೌಂಡರಿಗಳ ಅಗತ್ಯವಿದೆ.

– ಜೇಸನ್ ಹೋಲ್ಡರ್ (94) T20 ಪಂದ್ಯಗಳಲ್ಲಿ 100 ಬೌಂಡರಿಗಳನ್ನು ಪೂರ್ಣಗೊಳಿಸಲು ಆರು ಬೌಂಡರಿಗಳ ಅಗತ್ಯವಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು