IPL 2022: SRH vs RCB: ಚಾಲೆಂಜರ್ಸ್​ಗೆ ಸನ್​ರೈಸರ್ಸ್​ ಸವಾಲು: ಯಾರು ಬಲಿಷ್ಠ?

IPL 2022: ಕೇನ್ ವಿಲಿಯಮ್ಸನ್ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಕ್ಯಾಪ್ಟನ್ ಆಗಿರುವ ಕಾರಣ ಸತತ ಸೋಲುಗಳ ಒತ್ತಡ ಕೂಡ ವಿಲಿಯಮ್ಸನ್ ಮೇಲಿದೆ.

IPL 2022: SRH vs RCB: ಚಾಲೆಂಜರ್ಸ್​ಗೆ ಸನ್​ರೈಸರ್ಸ್​ ಸವಾಲು: ಯಾರು ಬಲಿಷ್ಠ?
RCB vs SRH
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 07, 2022 | 4:04 PM

ಭಾನುವಾರ ನಡೆಯಲಿರುವ ಐಪಿಎಲ್​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳಿಗೂ ಮಹತ್ವದ ಮ್ಯಾಚ್ ಆಗಿದ್ದು, ಪ್ಲೇಆಫ್​ ಗೇರಲು ಎರಡೂ ತಂಡಗಳೂ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಆದರೆ ಉಭಯ ತಂಡಗಳಿಗೂ ಬ್ಯಾಟಿಂಗ್​ನದ್ದೇ ಚಿಂತೆ. ಏಕೆಂದರೆ ಎರಡೂ ತಂಡಗಳ ಸ್ಟಾರ್ ಆಟಗಾರರು ಸತತವಾಗಿ ವಿಫಲವಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆರ್​ಸಿಬಿ ಪರ ವಿರಾಟ್ ಕೊಹ್ಲಿ 11 ಪಂದ್ಯಗಳಿಂದ ಕೇವಲ 216 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ ಎಸ್​ಆರ್​ಹೆಚ್​ ಪರ ಕೇನ್ ವಿಲಿಯಮ್ಸನ್ 11 ಪಂದ್ಯಗಳಲ್ಲಿ 199 ರನ್​ಗಳಿಸಿದ್ದಾರೆ.

ಇಬ್ಬರೂ ತಮ್ಮ ಉನ್ನತ ಗುಣಮಟ್ಟಕ್ಕೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದಾರೆ. ಇಬ್ಬರೂ ತಮ್ಮ ತಂಡದ ನಿರೀಕ್ಷೆಗಳನ್ನು ಪೂರೈಸುವ ಮೂಲಕ ಗೆಲುವಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ಫಾರ್ಮ್‌ಗೆ ಮರಳಿರುವುದನ್ನು ಸೂಚಿಸಿದರು. ಆದರೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಆಟವಾಡಲು ಸಾಧ್ಯವಾಗಲಿಲ್ಲ.

ಹಾಗೆಯೇ ಕೇನ್ ವಿಲಿಯಮ್ಸನ್ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಕ್ಯಾಪ್ಟನ್ ಆಗಿರುವ ಕಾರಣ ಸತತ ಸೋಲುಗಳ ಒತ್ತಡ ಕೂಡ ವಿಲಿಯಮ್ಸನ್ ಮೇಲಿದೆ. ಏಕೆಂದರೆ ಸತತ ಐದು ಪಂದ್ಯಗಳನ್ನು ಗೆದ್ದ ನಂತರ, ಸನ್‌ರೈಸರ್ಸ್ ಸತತ ಮೂರು ಪಂದ್ಯಗಳಲ್ಲಿ ಸೋತಿದೆ. ಮುಖ್ಯವಾಗಿ ತಮ್ಮ ಸ್ಟಾರ್ ಬೌಲರ್‌ಗಳ ಗಾಯದಿಂದಾಗಿ ಬೌಲಿಂಗ್ ಲೈನಪ್ ಕೂಡ ಹಳಿತಪ್ಪಿದೆ. ಈ ಸೋಲುಗಳಿಂದಾಗಿ ಎಸ್​ಆರ್​ಹೆಚ್ ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಪಂದ್ಯವು ಮತ್ತಷ್ಟು ವಿಶೇಷವಾಗಲು ಮುಖ್ಯ ಕಾರಣ ಕಳೆದ ಬಾರಿ ಆರ್‌ಸಿಬಿಯನ್ನು ಎಸ್​ಆರ್​ಹೆಚ್ ತಂಡವು ಕೇವಲ 68 ರನ್‌ಗಳಿಗೆ ಆಲೌಟ್ ಮಾಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ತಮ್ಮ ಹೀನಾಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಆರ್​ಸಿಬಿ.

ಇನ್ನು ಉಭಯ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಸನ್​ರೈಸರ್ಸ್​​ ಹೈದರಾಬಾದ್ ತಂಡವು 12 ಬಾರಿ ಗೆದ್ದಿದೆ. ಮತ್ತೊಂದೆಡೆ ಆರ್​ಸಿಬಿ ತಂಡ ಗೆದ್ದಿರುವುದು 8 ಬಾರಿ ಮಾತ್ರ. ಅದರಲ್ಲೂ ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಆರ್​ಸಿಬಿ ಹೀನಾಯವಾಗಿ ಸೋತಿದೆ. ಹೀಗಾಗಿ ಈ ಬಾರಿ ಕೂಡ ಎಸ್​ಆರ್​ಹೆಚ್​ ತಂಡವೇ ಮೇಲುಗೈ ಹೊಂದಿದೆ ಎನ್ನಬಹುದು.

ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಪ್ರಿಯಮ್ ಗಾರ್ಗ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಆರ್ ಸಮರ್ಥ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆಫರ್ಡ್, ಮಾರ್ಕೊ ಯಾನ್ಸನ್, ಜೆ ಸುಚಿತ್, ಶ್ರೇಯಾ ಗೋಪಾಲ್ , ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಸೌರಭ್ ತಿವಾರಿ, ಫಜಲ್ಹಾಕ್ ಫಾರೂಕಿ, ಉಮ್ರಾನ್ ಮಲಿಕ್, ಟಿ ನಟರಾಜನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ (ನಾಯಕ), ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡಫ್, ಚಮಾ ಮಿಲಿಂದ್ , ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್, ಸಿದ್ಧಾರ್ಥ್ ಕೌಲ್.

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು