ಐಪಿಎಲ್ನ 18ನೇ (IPL 2022) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ವಿಶೇಷ ಎಂದರೆ ಟಾಸ್ ಬಳಿಕ ಪ್ಲೇಯಿಂಗ್ 11 ಘೋಷಿಸುವ ಮೂಲಕ ರೋಹಿತ್ ಶರ್ಮಾ ಅಚ್ಚರಿ ಮೂಡಿಸಿದ್ದರು. ಹೌದು, ಹಿಟ್ಮ್ಯಾನ್ ತಮ್ಮ ಪ್ಲೇಯಿಂಗ್ ಇಲೆವೆನ್ ಘೋಷಿಸಿದಾಗ ತಂಡದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರು ಮಾತ್ರ ಇದ್ದರು. ಈ ಬಾರಿ ಮುಂಬೈ ಇಂಡಿಯನ್ಸ್ ತಂಡವು ಮೆಗಾ ಹರಾಜಿನ ಮೂಲಕ 7 ವಿದೇಶಿ ಆಟಗಾರರನ್ನು ಖರೀದಿಸಿತ್ತು. ಅಲ್ಲದೆ ಒಬ್ಬ ವಿದೇಶಿ ಆಟಗಾರನನ್ನು ರಿಟೈನ್ ಮಾಡಿಕೊಂಡಿತ್ತು. ಆದರೆ ಗಾಯದ ಕಾರಣ ಜೋಫ್ರಾ ಆರ್ಚರ್ ತಂಡದಿಂದ ಹೊರಗುಳಿದಿದ್ದಾರೆ. ಇದಾಗ್ಯೂ ತಂಡದಲ್ಲಿ 7 ವಿದೇಶಿ ಆಟಗಾರರಿದ್ದಾರೆ.
ಆದರೆ ಸತತ ಮೂರು ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್ ಆರ್ಸಿಬಿ ವಿರುದ್ದದ ಪಂದ್ಯಕ್ಕಾಗಿ 2 ಬದಲಾವಣೆ ಮಾಡಿಕೊಂಡಿದೆ. ಅದರಂತೆ ತಂಡದಿಂದ ಡೇನಿಯಲ್ ಸ್ಯಾಮ್ಸ್ ಹಾಗೂ ಟಿಮ್ ಡೇವಿಡ್ ಅವರನ್ನು ಕೈಬಿಡಲಾಗಿದೆ. ಅಲ್ಲದೆ ಅವರ ಬದಲಿಗೆ ಜಯದೇವ್ ಉನದ್ಕತ್ ಹಾಗೂ ರಮಣ್‌ದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಇದಾಗ್ಯೂ ವಿದೇಶಿ ಪ್ಲೇಯರ್ಗಳಿಗೆ ಅವಕಾಶ ನೀಡಿಲ್ಲ. ಇನ್ನು ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11ನಲ್ಲಿ ವಿದೇಶಿ ಆಟಗಾರರಾಗಿ ಡೆವಾಲ್ಡ್ ಬ್ರೆವಿಸ್ ಹಾಗೂ ಕೀರನ್ ಪೊಲಾರ್ಡ್ ಮಾತ್ರ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ವಿಶೇಷ ದಾಖಲೆಯೊಂದು ಮುಂಬೈ ಪಾಲಾಗಿದೆ.
ಕಳೆದ 14 ಸೀಸನ್ ಐಪಿಎಲ್ ಇತಿಹಾಸದಲ್ಲಿ ಹೀಗೆ ಇಬ್ಬರು ವಿದೇಶಿ ಆಟಗಾರರೊಂದಿಗೆ ತಂಡವೊಂದು ಕಣಕ್ಕಿಳಿಯುತ್ತಿರುವುದು ಇದು ಕೇವಲ ಮೂರನೇ ಬಾರಿ. ಒಂದು ತಂಡದಲ್ಲಿ ನಾಲ್ಕು ವಿದೇಶಿ ಆಟಗಾರರು ಆಡುವ ಅವಕಾಶವಿದ್ದರೂ, ಈ ಹಿಂದೆ 3 ಆಟಗಾರರು ಆಡಿದ ಹಲವು ನಿದರ್ಶನಗಳಿವೆ. ಆದರೆ ಇಬ್ಬರು ಆಟಗಾರರೊಂದಿಗೆ ಕಣಕ್ಕಿಳಿದ ಮೊದಲ ತಂಡವೆಂದರೆ ಕೊಲ್ಕತ್ತಾ ನೈಟ್ ರೈಡರ್ಸ್. 2011 ರಲ್ಲಿ ಕೆಕೆಆರ್ ತಂಡವು ಸಿಎಸ್ಕೆ ವಿರುದ್ದ ಜಾಕ್ ಕಾಲಿಸ್ ಹಾಗೂ ಇಯಾಮ್ ಮೋರ್ಗನ್ ಜೊತೆ ಕಣಕ್ಕಿಳಿದಿತ್ತು.
ಇದಾದ ಬರೋಬ್ಬರಿ ಒಂದು ದಶಕದ ಬಳಿಕ ಅಂದರೆ IPL 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ದ ಟಿಮ್ ಸೈಫರ್ಟ್ ಹಾಗೂ ರೋವ್ಮನ್ ಪೊವೆಲ್ ಜೊತೆ ಕಣಕ್ಕಿಳಿದು ದಾಖಲೆ ಬರೆಯಿತು. ಇದೀಗ ಆರ್ಸಿಬಿ ವಿರುದ್ದ ಕೀರನ್ ಪೊಲಾರ್ಡ್ ಹಾಗೂ ಡೆವಾಲ್ಡ್ ಬ್ರೆವಿಸ್ ಜೊತೆ ಕಣಕ್ಕಿಳಿಯುವ ಮೂಲಕ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಆಡಿದ ಮೂರನೇ ತಂಡ ಎಂಬ ದಾಖಲೆಯನ್ನು ಮುಂಬೈ ಇಂಡಿಯನ್ಸ್ ತನ್ನದಾಗಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರನ್ ಪೊಲಾರ್ಡ್, ರಮಣದೀಪ್ ಸಿಂಗ್, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಜಸ್ಪ್ರೀತ್ ಬುಮ್ರಾ, ಬಾಸಿಲ್ ಥಂಪಿ.
ಮುಂಬೈ ಇಂಡಿಯನ್ಸ್ (MI):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?