IPL 2022: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ RCB

| Updated By: ಝಾಹಿರ್ ಯೂಸುಫ್

Updated on: Apr 23, 2022 | 10:03 PM

IPL 2022: ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್ 4 ರನ್​ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಹಾಗೂ ಅನೂಜ್ ರಾವತ್ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ (12), ಸುಯಶ್ ಪ್ರಭುದೇಸಾಯಿ (15) ಎರಡಂಕಿ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.

IPL 2022: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ RCB
RCB
Follow us on

IPL 2022: ಐಪಿಎಲ್​ನ 36ನೇ ಪಂದ್ಯದಲ್ಲಿ ಎಸ್​ಆರ್​ಹೆಚ್ (RCB vs SRH) ವಿರುದ್ದ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಕೆಟ್ಟ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಎಸ್​ಆರ್​ಹೆಚ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್ 4 ರನ್​ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಹಾಗೂ ಅನೂಜ್ ರಾವತ್ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ (12), ಸುಯಶ್ ಪ್ರಭುದೇಸಾಯಿ (15) ಎರಡಂಕಿ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ ಆರ್​ಸಿಬಿ ಕೇವಲ 68 ರನ್​ಗೆ ಆಲೌಟ್ ಆಯಿತು.

ಇದರೊಂದಿಗೆ ಐಪಿಎಲ್​ನಲ್ಲಿ 70 ರನ್ ಅಥವಾ ಅದಕ್ಕಿಂತ ಕಡಿಮೆ ರನ್​ಗಳ ಒಳಗೆ ಅತೀ ಹೆಚ್ಚು ಬಾರಿ ಆಲೌಟ್ ಆದ ತಂಡ ಎಂಬ  ಕೆಟ್ಟ ದಾಖಲೆಯೊಂದು ಆರ್​ಸಿಬಿ ಪಾಲಾಗಿದೆ. ಐಪಿಎಲ್​ನಲ್ಲಿ ಕೇವಲ 8 ಬಾರಿ ಮಾತ್ರ ತಂಡಗಳು 70 ಅಥವಾ ಅದಕ್ಕಿಂತ ಕಡಿಮೆಗೆ ಆಲೌಟ್ ಆಗಿದೆ. ಈ ಪಟ್ಟಿಯಲ್ಲಿ ಆರ್​ಸಿಬಿ, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ತಂಡಗಳು ಮಾತ್ರ ಇರುವುದು ವಿಶೇಷ. ಅಂದರೆ ಅತೀ ಕಡಿಮೆ ರನ್​ಗಳಿಸಿದ ಪಟ್ಟಿಯಲ್ಲಿ ಈ ನಾಲ್ಕು ತಂಡಗಳೇ ಇವೆ.

ಅದರಲ್ಲೂ ಆರ್​ಸಿಬಿ 4 ಬಾರಿ 70 ಅಥವಾ ಅದಕ್ಕಿಂತ ಕಡಿಮೆಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದೆ. ಅಂದರೆ ಐಪಿಎಲ್ ಇತಿಹಾಸದಲ್ಲೇ 70 ಕ್ಕಿಂತ ಕಡಿಮೆ ರನ್​ಗೆ ಅತೀ ಹೆಚ್ಚು ಬಾರಿ ಆಲೌಟ್ ಆಗಿರುವ ಅಪಖ್ಯಾತಿಯನ್ನು ಆರ್​ಸಿಬಿ ಹೊಂದಿದೆ. ಆರ್​ಸಿಬಿ ಕೆಕೆಆರ್ ವಿರುದ್ದ 49 ರನ್​ಗಳಿಗೆ, ಎಸ್​ಆರ್​ಹೆಚ್​ ವಿರುದ್ದ 68 ರನ್​ಗೆ, ಸಿಎಸ್​ಕೆ ವಿರುದ್ದ 70 ರನ್​ಗೆ, ರಾಜಸ್ಥಾನ್ ರಾಯಲ್ಸ್​ ವಿರುದ್ದ 70 ರನ್​ಗಳಿಗೆ ಆಲೌಟ್ ಆಗಿದೆ.

ಅಷ್ಟೇ ಅಲ್ಲದೆ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ 100 ರನ್​ಗಳ ಒಳಗೆ ಆಲೌಟ್ ಆದ ತಂಡಗಳ ಪಟ್ಟಿಯಲ್ಲಿ ಆರ್​ಸಿಬಿ 2ನೇ ಸ್ಥಾನದಲ್ಲಿದೆ. ಆರ್​ಸಿಬಿ ಇದುವರೆಗೆ ಐಪಿಎಲ್​ 8 ಬಾರಿ 100 ಕ್ಕಿಂತ ಕಡಿಮೆ ರನ್​ಗೆ ಆಲೌಟ್ ಆಗಿದೆ. ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಡೆಲ್ಲಿ ತಂಡವು ಇದುವರೆಗೆ 9 ಬಾರಿ 100 ಕ್ಕಿಂತ ಕಡಿಮೆ ರನ್​ಗಳಿಗೆ ಆಲೌಟ್ ಆಗಿ ಹೀನಾಯ ದಾಖಲೆ ಬರೆದಿದೆ.

ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್